
ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರಾದ ಶ್ರೀ ಪ್ರತಾಪ್ ಚಂದ್ರ ಸಾರಂಗಿ ಜಿ, ಅವರು ಇಂದು ಮುಖ್ಯಮಂತ್ರಿ ಗೃಹಕಚೇರಿ ಕಾವೇರಿಯಲ್ಲಿ ಸೌಜನ್ಯಯುತವಾಗಿ *ಶ್ರೀ ಬಿಎಸ್* *ಯಡಿಯೂರಪ್ಪನವರನ್ನು* ಭೇಟಿ ಮಾಡಿದ ಸಂದರ್ಭದಲ್ಲಿ *ಶ್ರೀ ಶಂಕರಗೌಡ ಪಾಟೀಲ್* ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ನವದೆಹಲಿ ಇವರು ಆತ್ಮೀಯವಾಗಿ ಬರ ಮಾಡಿಕೊಂಡರು.
ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪ ಹಾಗೂ ಶ್ರೀ ಸಾರಂಗಿ ಸತ್ಕಾರ ವಿನಿಮಯ ಮಾಡಿಕೊಂಡ ನಂತರ, ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ಹೊಸವರ್ಷದ ಕ್ಯಾಲೆಂಡರನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾದ ಶ್ರೀ ಶರಣು ಬಿ ತಳ್ಳಿಕೇರಿ, ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚೌಹಾಣ್ ಹಾಗೂ ಇತರರು ಉಪಸ್ಥಿತರಿದ್ದರು.