Koppal

ಭೂ ಅನುಷ್ಠಾನ ಸಮಿತಿ ಸಭೆ: ಭೂ ಮಾಲೀಕರ ಖುದ್ದು ಹಾಜರಿಗೆ ಸೂಚನೆ


ಕೊಪ್ಪಳ, ಜ.೨೧: ಭೂ ಒಡೆತನ ಯೋಜನೆಯಡಿ ರೈತರ ಜಮೀನುಗಳ ಪ್ರಸ್ತಾವನೆಗಳಿಗೆ ದರ ನಿಗದಿ ಪಡಿಸಲು ಜ.೧೮ ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಭೂ ಅನುಷ್ಠಾನ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಭೂ ಮಾಲೀಕರ ಪ್ರಸ್ತಾವನೆಗಳಿಗೆ ಮಾತ್ರ ದರ ನಿಗದಿಪಡಿಸಲಾಗಿದ್ದು, ಜಿಲ್ಲೆಯ ಇನ್ನೂ ಮೂರು ವಿಧಾನಸಭಾ ಕ್ಷೇತ್ರಗಳ ಭೂ ಮಾಲೀಕರ ಪ್ರಸ್ತಾವನೆಗಳಿಗೆ ದರ ನಿಗದಿಪಡಿಸಲು ಜನವರಿ.೨೫ ಮತ್ತು ೨೮ ರಂದು ಸಭೆ ಕರೆಯಲಾಗಿದೆ.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜನವರಿ.೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಕುಷ್ಟಗಿ ಮತಕ್ಷೇತ್ರಕ್ಕೆ ಸಂಬAಧಿಸಿದ ಭೂ ಮಾಲೀಕರ ಸಭೆ ಹಾಗೂ ಮಧ್ಯಾಹ್ನ ೦೨.೩೦ ಗಂಟೆಗೆ ಕೊಪ್ಪಳ ಮತಕ್ಷೇತ್ರದ ಭೂ ಮಾಲೀಕರ ಸಭೆಯನ್ನು ನಡೆಸಲಾಗುವುದು. ಜನವರಿ.೨೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಯಲಬುರ್ಗಾ ಮತಕ್ಷೇತ್ರದ ಭೂ ಮಾಲೀಕರ ಸಭೆ ನಡೆಯಲಿದೆ.
ನಿಗಮಗಳಿಗೆ ಭೂಮಿ ಮಾರಾಟ ಮಾಡಲು ಒಪ್ಪಿಗೆ ಪತ್ರ ನೀಡಿದ ಭೂ ಮಾಲೀಕರ ಸಮಕ್ಷಮದಲ್ಲಿ ಬೆಲೆ ನಿಗದಿ ಪಡಿಸುತ್ತಿರುವುದರಿಂದ ಭೂ ಮಾಲೀಕರು ಖುದ್ದಾಗಿ ಸಭೆಗೆ ಹಾಜರಾಗಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply