Belagavi

ವ್ಹಿ.ಆರ್.ಡಬ್ಲೂö್ಯ.ಗಳ ನೇಮಕಾತಿ: ವಿಕಲಚೇತನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ


ಬೆಳಗಾವಿ, ಜ. ೨೧ : ಗೋಕಾಕ ಮತ್ತು ಮೂಡಲಗಿ ತಾಲೂಕಿನ ವ್ಯಾಪ್ತಿಯ ಒಟ್ಟು ೧೬ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವ್ಹಿ. ಆರ್. ಡಬ್ಲೂö್ಯ.) ೧೬ ಹುದ್ದೆಗಳನ್ನು ಇಲಾಖೆಯ ಗ್ರಾಮೀಣ ಪುನರ್ವಸತಿ ಯೋಜನೆಯಡಿ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ವಿಕಲಚೇತನರಿದ್ದು, ಕನಿಷ್ಟ ೪೦% ರಷ್ಟು ವಿಕಲತೆ ಪ್ರಮಾಣ ಹೊಂದಿರತಕ್ಕದ್ದು. ಅರ್ಜಿದಾರರು ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೊಳಪಟ್ಟಿರಬೇಕು. ಅರ್ಜಿದಾರರು ಕನಿಷ್ಠ ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರಬೇಕು ಮತ್ತು ಕಂಪ್ಯೂಟರ ಜ್ಞಾನ ಹೊಂದಿರಬೇಕು.
ವಿಕಲಚೇತನ ಮಹಿಳಾ, ಪ.ಜಾತಿ ಮತ್ತು ಪ. ಪಂಗಡದ ಅಭ್ಯರ್ಥಿಗಳು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಜ್ಞಾನ ಹೊಂದಿರುವವರಿಗೆ ಆಧ್ಯತೆ ನೀಡಲಾಗುವುದು.
ಅರ್ಜಿ ನಿಗದಿಪಡಿಸಿದ ದಿನಾಂಕದAದು ಅಭ್ಯರ್ಥಿಗಳ ವಯಸ್ಸು ೧೮ ವರ್ಷ ಹಾಗೂ ಗರಿಷ್ಠ ೪೫ ವರ್ಷದೊಳಗಿರಬೇಕು. ಆಸಕ್ತಿಯುಳ್ಳ ಅಭ್ಯರ್ಥಿಗಳು ಫೆ.೨೦ ಸಂಜೆ ೫-೦೦ ಗಂಟೆಯೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಗೋಕಾಕ ತಾಲೂಕು ಪಂಚಾಯತ ಕಾರ್ಯಾಲಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರನ್ನು ಸಂಪರ್ಕಿಸಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply