Belagavi

ಸಮಾಜದಲ್ಲಿ ವೈಚಾರಿಕ ಚಿಂತನೆ ಬೆಳಸಿದ ಮೊದಲ ಶರಣರು ಅಂಬಿಗರ ಚೌಡಯ್ಯ: ಡಾ. ವಾಯ್.ಎಂ. ಯಾಕೊಳ್ಳಿ


ಬೆಳಗಾವಿ, ಜ. ೨೧: ಸಮಾಜದ ತಪ್ಪು ತಿದ್ದುವಲ್ಲಿ ಶಿಕ್ಷಕನ ಪಾತ್ರ ನಿರ್ವಹಿಸಿ, ಸಮಾಜ ಬದಲಾವಣೆಯಲ್ಲಿ ವಚನಗಳ ಮೂಲಕ ನೇರವಾಗಿ ವೈಚಾರಿಕ ಚಿಂತನೆ ಬೆಳಸಿದ ಮೊದಲ ಶರಣರು ಅಂಬಿಗರ ಚೌಡಯ್ಯನವರು ಎಂದು ಯಕ್ಕುಂಡಿಯ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ. ವಾಯ್.ಎಂ. ಯಾಕೊಳ್ಳಿ ಅವರು ತಿಳಿಸಿದರು. ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಜ.೨೧) ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನ ಸಾಹಿತ್ಯದ ಶರಣರಲ್ಲಿ ಚೌಡಯ್ಯನವರು ವಿಶೇಷ ಶರಣರು, ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಬಹಳ ಕಟುವಾಗಿ ಟೀಕಿಸಿದರು. ಸಮಾಜದಲ್ಲಿ ವೈಚಾರಿಕ ಚಿಂತನೆ ಬೆಳಸುವುದರ ಜೊತೆಗೆ ಅವರು ಸಮಾಜದ ತಪ್ಪುಗಳನ್ನು ತಮ್ಮ ವಚನ ಸಾಹಿತ್ಯದ ಮೂಲಕ ನೇರವಾಗಿ ವಿರೋಧಿದರು ಎಂದು ಹೇಳಿದರು.
ಸಮಾಜದಲ್ಲಿನ ಲೋಪದೋಷಗಳನ್ನು ವ್ಯಂಗ್ಯ ಮಾಡುವುದರ ಮೂಲಕ ಬದಲಾವಣೆ ತಂದವರು ಹಾಗೂ ಯುವ ಜನತೆ ನಿಜಶರಣ ವಯಕ್ತಿಕ ಜೀವನದ ಕುರಿತು ತಿಳಿದುಕೊಳ್ಳಬೇಕು, ಅವರ ಪುಸ್ತಕ ಓದಿ ಮಾನವೀಯ ಮೌಲ್ಯಗಳನ್ನು ಯುವಕರು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ, ವಚನ ಸಾಹಿತ್ಯ, ಅವರ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿದರು ಮತ್ತು ಜ್ಯೋತಿ ಬಸವರಾಜ ಕುರೇರ ಮತ್ತು ತಂಡದವರಿAದ ವಚನ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿಲಾಯಿತು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಅಂಬಿಗರ ಸಮಾಜದ ಮುಖಂಡರಾದ ಮದುಶ್ರಿ ಪೂಜೇರಿ, ರಮೇಶ ಗಸ್ತಿ, ರವಿಶಂಕರ ಚನಾಳ, ಎಸ್.ಕೆ ಗುಸ್ರೆ, ಗೂಳಪ್ಪ ಉದಯನ್ನವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Leave a Reply