bagalkotBallaryBelagavibidarGadaggulburgakarwar uttar kannadaKoppalStatevijayapur

ತಹಶೀಲ್ದಾರರಾಗಿ ಬಡ್ತಿ ಪಡೆದ 10 ಶಿರಸ್ತೇದಾರರು


 

ಬಳ್ಳಾರಿ,ಜ.21 : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿರಸ್ತೇದಾರ್ ಹಾಗೂ ಉಪತಹಸೀಲ್ದಾರ್‍ಗಳಿಗೆ ಗ್ರೇಡ್-2 ತಹಸೀಲ್ದಾರ್ ಹುದ್ದೆಗೆ ಬಡ್ತಿ ನೀಡಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು,ಅದರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಜನರಿಗೆ ಗ್ರೇಡ್-2 ತಹಸೀಲ್ದಾರ್ ಭಾಗ್ಯ ಲಭಿಸಿದೆ.
ಬಡ್ತಿ ನೀಡಿ ಯಾರ್ಯಾರಿಗೆ ಎಲ್ಲೆಲ್ಲಿ ನಿಯೋಜನೆ..?: ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿರಸ್ತೇದಾರ್‍ರಾಗಿ ಕಾರ್ಯನಿರ್ವಹಿಸುತ್ತಿದ್ದ ದುರ್ಗಾಪ್ರಸಾದ್ ಅವರಿಗೆ ಬಡ್ತೀ ನೀಡಿ ಸಮಾಜಕಲ್ಯಾಣ ಸಚಿವರ ವಿಶೇಷಾಧಿಕಾರಿಗಳಾಗಿ ವರ್ಗಾವಣೆ ಮಾಡಲಾಗಿದೆ.
ಹೂವಿನಹಡಗಲಿ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರರಾಗಿದ್ದ ಕೆ.ರಾಧಾ ಅವರಿಗೆ ಬಡ್ತಿ ನೀಡಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗ್ರೇಡ್-2 ತಹಸೀಲ್ದಾರರನ್ನಾಗಿ, ಸಿರಗುಪ್ಪ ತಹಸೀಲ್ದಾರ ಕಚೇರಿಯಲ್ಲಿದ್ದ ಎಂ.ಆರ್.ಷಣ್ಮುಖ ಅವರನ್ನು ಸಿಂಧನೂರು ತಾಲೂಕಿನ ಗ್ರೇಡ್-2 ತಹಸೀಲ್ದಾರರನ್ನಾಗಿ, ಬಳ್ಳಾರಿ ಡಿಸಿ ಕಚೇರಿಯಲ್ಲಿದ್ದ ಶಿರಸ್ತೇದಾರ ಎಂ.ಸತ್ಯಪ್ರಸಾದರಾವ್ ಅವರನ್ನು ಕಲಬುರಗಿ ಜಿಲ್ಲೆಯ ಯಡ್ರಾಮಿ ಗ್ರೇಡ್-2 ತಹಸೀಲ್ದಾರ್‍ರನ್ನಾಗಿ, ಹರಪನಳ್ಳಿ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಎಂ.ಕೆ.ಮಂಜುನಾಥ ಅವರನ್ನು ಕನಕಗಿರಿ ತಾಲೂಕು ಗ್ರೇಡ್-2 ತಹಸೀಲ್ದಾರ್‍ರನ್ನಾಗಿ ಬಡ್ತಿ ನೀಡಿ ವರ್ಗಾಯಿಸಲಾಗಿದೆ.
ಬಳ್ಳಾರಿ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸ್ತೇದಾರ್ ಕುಮಾರಸ್ವಾಮಿ ಅವರನ್ನು ಬಳ್ಳಾರಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಬಳ್ಳಾರಿ ತಹಸೀಲ್ದಾರ್ ಕಚೇರಿಯಲ್ಲಿರುವ ಮೇಘಾ@ಶರ್ಮಿಳಾ ಅವರನ್ನು ಹೊಸಪೇಟೆ ಗ್ರೇಡ್-2 ತಹಸೀಲ್ದಾರರನ್ನಾಗಿ, ಕುರುಗೋಡು ತಹಸೀಲ್ದಾರ್ ಕಚೇರಿಯಲ್ಲಿರುವ ಸೈಯದ್ ಷವಾಲಿ ಅವರನ್ನು ಬಳ್ಳಾರಿಯ ಕೆಯುಐಡಿಎಫ್‍ಸಿ,ಎನ್‍ಕೆಯುಎಸ್‍ಐಪಿ ಯೋಜನಾ ನಿರ್ದೇಶಕರ ಕಚೇರಿಯ ವಿಶೇಷ ತಹಸೀಲ್ದಾರರನ್ನಾಗಿ ಮತ್ತು ಬಳ್ಳಾರಿ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಎ.ರತ್ನಮ್ಮ ಅವರನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್ ಗ್ರೇಡ್-2 ತಹಸೀಲ್ದಾರನ್ನಾಗಿ,ಸಿರಗುಪ್ಪ ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾಥ ಮುರಡಿ ಅವರನ್ನು ಕಾರಟಗಿ ತಾಲೂಕು ಕಚೇರಿಗೆ ಗ್ರೇಡ್-2ತಹಸೀಲ್ದಾರರನ್ನಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.


Leave a Reply