Uncategorized

ಗದಗ : ಅಂಬಿಗರ ಚೌಡಯ್ಯ ಜಯಂತಿ ಆಚರಣೆ


ಗದಗ   ಜ.21 : ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವದರ ಮೂಲಕ ಗೌರವ ಸಮರ್ಪಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸಮಾಜದ ಮುಖಂಡರಾದ ಬಿ.ಎಸ್.ಯರನಾಳ, ಸಿ.ಬಿ.ಬಾರಕೇರ, ಜೆ.ಬಿ.ಗಾರವಾಡ, ವಿ.ಜಿ.ಬಾರಕೇರ, ಮಂಜು ಸುಣಗಾರ, ವಿರೇಶ ಸುಣಗಾರ, ನಿಂಗಪ್ಪ ಜಾಲಗಾರ, ದಿಲೀಪ ಮುಂಡರಗಿ, ಶ್ರೀಧರ ಸುಲ್ತಾನಪುರ, ವಾಸು ಲಕ್ಷ್ಮೇಶ್ವರ, ಸುಭಾಶ ಕದಡಿ, ರಮೇಶ ಕದಡಿ, ರಂಗಪ್ಪ ಮದೆಕಾರ, ದೇವೆಂದ್ರ ಅಂಬಿಗೇರ, ನಾರಾಯಣ ನರಗುಂದ, ದೇವು ಲಮಾಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರದ್ದರು.


Leave a Reply