ಡಾ. ಎಚ್ ಎಫ್ ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿ಼ಷ್ಠಾನದಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಗೌರವ ಪ್ರಶಸ್ತಿ ಪ್ರದಾನ

ಗದಗ ೨೦: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿಕ್ಷಕರು ಮಕ್ಕಳ ಕಲಿಕೆಯನ್ನು ಹೆಚ್ಚಿಸುವಲ್ಲಿ ಪರಿಶ್ರಮದಿಂದ ಮನ:ಪೂರ್ವಕವಾಗಿ ದುಡಿದಾಗ ಮಾತ್ರ ಗುಣಮಟ್ಟದ ಫಲಿತಾಂಶ ಬರಲು ಸಾಧ್ಯವೆಂದು ಗದಗ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ ಎಂ ಬಸವಲಿಂಗಪ್ಪ ನುಡಿದರು.
ಡಾ. ಎಚ್ ಎಫ್ ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿ಼ಷ್ಠಾನ ಧಾರವಾಡ ಅಪರ ಆಯುಕ್ತರ ಕಛೇರಿ ಧಾರವಾಡ ಉಪನಿರ್ದೇಶಕರು ಆಡಳಿತ ಹಾಗು ಅಭಿವೃದ್ಧಿ ಸಾ ಶಿ ಇಲಾಖೆ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಡಯಟ್ ಪ್ರಾಚಾರ್ಯ ಎಸ್ ಡಿ ಗಾಂಜಿ ಮಾತನಾಡಿ ೨೦೨೦ ಜೂನ್/ಜುಲೈನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ಕನ್ನಡ ಮಾಧ್ಯಮದ ಆರು ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿ ತಾಲೂಕಿನಿಂದ ಆರು ಶಿಕ್ಷಕರಿಗೆ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಒಬ್ಬ ವಿದ್ಯಾರ್ಥಿಗೆ ಗೌರವ ಪ್ರಶಸ್ತಿ ಪುರಸ್ಕಾರ ಡಾ. ಕಟ್ಟೀಮನಿ ಪ್ರತಿಷ್ಠಾನದಿಂದ ನಡೆದು ಬಂದಿರುವುದು ಶ್ರಮ ವಹಿಸಿದ ಶಿಕ್ಷಕರಿಗೆ ಗೌರವಿಸುವುದರಿಂದ ವೃತ್ತಿಯಲ್ಲಿ ನಾವಿನ್ಯತೆಯನ್ನು ಕಂಡುಕೊಳ್ಳಲು ಅನೂಕೂಲವಾಗುತ್ತದೆಂದರು.
ಪ್ರತಿ಼ಷ್ಠಾನ ಗೌರವ ಸಂಚಾಲಕ ಎಸ್ ಬಿ ಕೊಡ್ಲಿ ಮಾತನಾಡಿ ಶಿವಶಂಕರ ಹಿರೇಮಠ ರವರ ಪರಿಶ್ರಮದಿಂದ ಹಲವಾರು ದತ್ತಿದಾನಿಗಳ ದೇಣಿಗೆಯಿಂದ ಬರುವ ಬಡ್ಡಿಹಣದಿಂದ ಪ್ರತಿ ವರ್ಷ ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಾಲೂಕಿನ ಶಾಲೆಗಳು ಹಾಗೂ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವು ನಿರಂತರವಾಗಿ ನಡೆಯುತ್ತದೆಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಉಪನಿರ್ದೇಶ ಎ ಎನ್ ನಾಗರಳ್ಳಿ. ಆರ್ ಸಿ ಹಲಗತ್ತಿ. ಗೌರವ ಸಂಚಾಲಕ ಎಸ್ ಬಿ ಕೊಡ್ಲಿ. ಶಿಕ್ಷಣಾಧಿಕಾರಿ ಕೆ ಡಿ ಬಡಿಗೇರ. ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಜಿ ಎಲ್ ಬಾರಾಟಕ್ಕೆ. ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಎಸ್ ಕೆಳದಿಮಠ. ರಾಮಕೃಷ್ಣ ಸದಲಗಿ. ಶ್ರೀಮತಿ ಗಾಯತ್ರಿ ಸಜ್ಜನ್. ಶ್ರೀಮತಿ ರಾಜೇಶ್ವರಿ ಕುಡಚಿ.ಶ್ರೀಮತಿ ಎಲ್ ಎಸ್ ವಣಿಕ್ಯಾಳ. ಡಾ. ಕಟ್ಟಿಮನಿ ಪ್ರತಿಷ್ಠಾನ ಸಹಾಯಕ ನಿರ್ದೇಶಕ ಶಂಕರ ಗಂಗಣ್ಣವರ. ಕಾರ್ಯಕ್ರಮದ ನೋಡಲ್ ವಿ ಎಂ ಮೆಣಸಿನಕಾಯಿ. ವೇದಕೆಯ ಮೇಲೆ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಿಕ್ಷಣಾಧಿಕಾರಿ ಕೆ ಡಿ ಬಡಿಗೇರ ಸ್ವಾಗತಿಸಿದರು. ಡಿ ವೈ ಪಿ ಸಿ ಜಿ. ಎಲ್.ಬಾರಾಟಕ್ಕೆ ವಂದಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.