bagalkotBallaryBelagavibidarGadaggulburgakarwar uttar kannadaKoppalStatevijayapur

ಹುಕ್ಕೇರಿ ಪುರಸಭೆ ನೌಕರರಿಂದ ಪ್ರತಿಭಟನೆ


ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ರವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆಯನ್ನು ಖಂಡಿಸಿ ಇಂದು ಹುಕ್ಕೇರಿ ಪುರಸಭೆ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಕೋರ್ಟ್ ಸರ್ಕಲ್ ದಿಂದ ಪ್ರತಿಭಟನಾ ರ್ಯಾಲಿ  ನಡೆಸಿದರು
ದುಷ್ಕರ್ಮಿಗಳ ವಿರುದ್ಧ ಘೋಷಣೆ ಕೂಗುತ್ತಾ ಮಿನಿ ವಿಧಾನಸೌಧಕ್ಕೆ ತೆರಳಿ ತಹಸಿಲ್ದಾರ ಅಶೋಕ ಗುರಾಣಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಚಿಂಚೋಳಿ ಪುರಸಭೆ ಮುಖ್ಯಧಿಕಾರಿಯಾದ ಅಭಯಕುಮಾರ ರವರ ಮೇಲೆ ಬುಧುವಾರ ಚಿಂಚೋಳಿ ಪುರಸಭೆ ಸದಸ್ಯರಾದ ಆನಂದಕುಮಾರ ಟೈಗರ್ ಮತ್ತು ಶಶಿಕುಮಾರ ಮೇತ್ರಿ ಎಂಬುವವರು ನಕಲಿ ಬಿಲ್ಲ್ ಮಾಡುವಂತೆ ಒತ್ತಾಯಿಸಿದ್ದಾರೆ, ಅದಕ್ಕೆ ಒಪ್ಪದ ಮುಖ್ಯಾಧಿಕಾರಿ ಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ , ಕಾರಣ ಹಲ್ಲೆಗೆ ಯತ್ನಿಸಿದವರನ್ನು ಕೂಡಲೆ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು ಮತ್ತು ಇಂತಹ ಕೃತ್ಯಗಳು ರಾಜ್ಯದ ಯಾವದೆ ಸ್ಥಳಿಯ ಸಂಸ್ಥೆಗಳ ಅಧಿಕಾರಿ ,ನೌಕರರಿಗೆ ಆಗದಂತೆ ಭದ್ರತೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದ ಹುಕ್ಕೇರಿ ಘಟಕ ಅದ್ಯಕ್ಷರಾದ ಶಂಕರ ಕರನಿಂಗ, ಉಪಾದ್ಯಕ್ಷ ಎ ಜಿ ಮೋಕಾಶಿ, ಕಾರ್ಯದರ್ಶಿ ಎಮ್ ಬಿ ಗುಡಕೇತರ, ಬಸವರಾಜ ಥಿಲಾರಿ, ಬಿ ಎ ಪಾಟೀಲ್, ಎಸ್ ಎಸ್ ನಾಯಿಕ, ಡಿ ಬಿ ನವಲೆ, ಬೆಳಗಾವಿ ಜಿಲ್ಲಾ ಅಧ್ಯಕ್ಷ ರಾದ ಆರ ಎ ಭರಮನ್ನವರ,ಸಂತೋಷ ಹೋಳೆನ್ನವರ ಮೊದಲಾದವರು ಉಪಸ್ಥಿತರಿದ್ದರು.


Leave a Reply