Belagavi

ಜ. ೨೩ ರಂದು ೬ನೇ ಬೈಲಹೊಂಗಲ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ


ಬೆಳಗಾವಿ:೨೧-ಬೈಲಹೊಂಗಲ ತಾಲೂಕಾ ೬ನೇ ಕನ್ನಡ ಸಾಹಿತ್ಯ ಸಮ್ಮೇಳನವು ಶನಿವಾರ ದಿ:೨೩/೦೧/೨೦೨೧ ರಂದು ಮುಂಜಾನೆ ೮ ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಡಾಲ ಗ್ರಾಮದಲ್ಲಿ ನಡೆಯಲಿದೆ.
ಯರಡಾಲದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂಜಾನೆ ೮:೩೦ಕ್ಕೆ ಯರಡಾಲ ಗ್ರಾಮದ ಗಣ್ಯರು ಶ್ರೀ ದುಂಡಯ್ಯಸ್ವಾಮಿ ಹಿರೇಮಠ ಭುವನೇಶ್ವರಿ ದೇವಿ ಭಾವಚಿತ್ರದ ಪೂಜೆ ನೆರವೇರಿಸುವರು. ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು ವಹಿಸಲಿದ್ದು, ರಾಜ್ಯ/ರಾಷ್ಟç ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಅನ್ನಪೂರ್ಣಾ ಕನೋಜ ಅವರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದು, ಬೈಲಹೊಂಗಲ ತಾಲೂಕಿನ ಶಾಸಕರಾದ ಸನ್ಮಾನ್ಯ ಶ್ರೀ ಮಹಾಂತೇಶ ಕೌಜಲಗಿ ಇವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಡಾ.ಬಸು ಬೇವಿನಗಿಡದ, ಡಾ.ವ್ಹಿ ಆಯ್ ಪಾಟೀಲ, ಡಾ.ಈಶ್ವರ ಉಳ್ಳಾಗಡ್ಡಿ, ಶ್ರೀ ಅನಿಲ ಮೇಕಲಮರ್ಡಿ, ಶ್ರೀಮತಿ ಪಾರ್ವತಿ ನರೆಂದ್ರ, ಶ್ರೀಮತಿ ರೋಹಿಣಿ ಪಾಟೀಲ, ಶ್ರೀ ಯ ರು ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶ್ರೀ ವಿಜಯ ಶ್ರೀ ಮೆಟಗುಡ್ಡ, ಶ್ರೀ ಸಿ ಆರ್ ಪಾಟೀಲ, ಶ್ರೀ ವ್ಹಿ ಎಸ್ ಪಾಟೀಲ, ಅತಿಥಿಗಳಾಗಿ ಆಗಮಿಸುವರು. ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಆಶಯ ನುಡಿ ಮಂಡಿಸುವರು.
ಈ ಸಮ್ಮೇಳನದಲ್ಲಿ ಗ್ರಂಥ ಲೋಕಾರ್ಪಣೆ, ಚಿಂತನ ಗೋಷ್ಠಿ, ಕವಿಗೋಷ್ಠಿ, ಸಂಸ್ಕೃತಿ ಸೌರಭ, ಸಮಾರೋಪ ಸಮಾರಂಭ ನಡೆಯಲಿದ್ದು, ಕ.ಸಾ.ಪ ಎಲ್ಲ ತಾಲೂಕಾ ಅಧ್ಯಕ್ಷರುಗಳು ಉಪಸ್ಥಿತರಿರುವರು. ಈ ಕಾರ್ಯಕ್ರಮಕ್ಕೆ ಸಮಸ್ತ ಕನ್ನಡಾಭಿಮಾನಿಗಳು ಆಗಮಿಸಬೇಕೆಂದು, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಮತ್ತು ಬೈಲಹೊಂಗಲ ತಾಲೂಕಾ ಅಧ್ಯಕ್ಷರಾದ ಶ್ರೀಮತಿ ಗೌರಾದೇವಿ ತಾಳಿಕೋಟಿಮಠ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply