Ballary

ಎಲ್ಲಾ ಅತಿಥಿ ಉಪನ್ಯಾಸಕರನ್ನೂ ಕೂಡಲೇ ಸೇವೆಗೆ ನಿಯೋಜಿಸಲು ಆಗ್ರಹ


ಬಳ್ಳಾರಿ ಜ ೨೨. ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಜಿಲ್ಲಾ ನಾಯಕರಾದ ಜಗದೀಶ್ ನೇಮಕಲ್ ಮಾತನಾಡಿ – ಪದವಿ ಕಾಲೇಜುಗಳು ತಡವಾಗಿ ಆರಂಭವಾದ್ದರಿAದ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಹಲವು ಪಟ್ಟು ಉಲ್ಬಣಗೊಂಡಿದೆ. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ, ೧೫ ಅತಿಥಿ ಉಪನ್ಯಾಸಕರು ಆತ್ಮಹತ್ಯೆಯಿಂದಲೂ ಮತ್ತು ಗಂಭೀರ ಖಾಯಿಲೆಗಳಿಂದಲೂ ನರಳಿ ಸಾವಿಗೀಡಾಗಿದ್ದಾರೆ. ಇನ್ನೂ ಹಲವರ ಬದುಕಿನ ಬವಣೆ ಹೇಳತೀರದು ಎಂಬುದು ತಮ್ಮ ಗಮನದಲ್ಲಿದೆಯಷ್ಟೇ! ಎಷ್ಟೋ ಅತಿಥಿ ಉಪನ್ಯಾಸಕರು ತಳ್ಳುವ ಗಾಡಿಯಲ್ಲಿ ಹಣ್ಣು-ಹಂಪಲು, ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದಾರೆ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಸಂಸಾರದ ಆರ್ಥಿಕ ಹೊರೆಯ ಜೊತೆಯಲ್ಲಿ ಮಾನಸಿಕ ಒತ್ತಡವೂ ಅವರನ್ನು ತೀವ್ರವಾಗಿ ಕುಗ್ಗಿಸಿದೆ. ಸತತ ನಡೆದ ಹೋರಾಟದ ಫಲವಾಗಿ, ಇತ್ತೀಚೆಗೆ, ಅವರ ಸಮಸ್ಯೆಯನ್ನು ಮನಗಂಡು ತಮ್ಮ ಸರ್ಕಾರವು ಅವರ ೫ ತಿಂಗಳ ಬಾಕಿ ವೇತನವನ್ನು ಬಿಡುಗಡೆ ಮಾಡಿದ್ದು ಶ್ಲಾಘನೀಯ ಕ್ರಮವಾಗಿತ್ತು. ಇದೀಗ, ನವೆಂಬರ್ ೧೭, ೨೦೨೦ರಿಂದ ೨೦೨೦-೨೧ನೇ ಸಾಲಿನ ಪದವಿ ತರಗತಿಗಳು ಪ್ರಾರಂಭವಾಗಿದ್ದು, ಅದೇ ದಿನಾಂಕದಿAದ ಕಳೆದ ವರ್ಷ ಸೇವೆ ಸಲ್ಲಿಸಿದ್ದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರೆಸಬೇಕೆAದು ತಾವು ನಿರ್ದೇಶನ ನೀಡಿದ್ದಿರಿ. ಆದರೆ ಮಾನ್ಯ ಆಯುಕ್ತರ ಕಛೇರಿಯಿಂದ ಹೊರಬಿದ್ದಿರುವ ೧೯-೦೧-೨೦೨೧ರ ಸುತ್ತೋಲೆಯು ರಾಜ್ಯದ ೧೫,೦೦೦ಕ್ಕೂ ಹೆಚ್ಚು ಇರುವ ಅತಿಥಿ ಉಪನ್ಯಾಸಕರಿಗೆ ಬಹುದೊಡ್ಡ ಆಘಾತವನ್ನು ನೀಡಿದೆ. ಕಳೆದ ವರ್ಷ ಕಾರ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರಲ್ಲಿ ಕೇವಲ ಶೇ.೫೦ರಷ್ಟು ಉಪನ್ಯಾಸಕರನ್ನು ಮಾತ್ರ ಸೇವೆಗೆ ಸೇರಿಸಿಕೊಳ್ಳಬೇಕು ಹಾಗೂ ಮಾರ್ಚ್೨೦೨೧ರವರೆಗೆ ಮಾತ್ರ ಅವರ ಸೇವೆಯನ್ನು ಬಳಸಿಕೊಳ್ಳಬೇಕೆಂದು ಸುತ್ತೋಲೆಯಲ್ಲಿ ಹೇಳಿರುವುದು ಅತ್ಯಂತ ಅಸಮಂಜಸ. ಇದನ್ನು ತತ್‌ಕ್ಷಣವೇ ಹಿಂಪಡೆಯಬೇಕೆAದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯು ಆಗ್ರಹಿಸುತ್ತದೆ. ನಾಲ್ಕೂವರೆ ತಿಂಗಳು ತಡವಾಗಿ, ಕಾಲೇಜುಗಳು ಆರಂಭವಾಗಿದ್ದರೂ ಸಹ, ಇನ್ನೂ ಶತಪ್ರತಿಶತ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ‘ಈಗಾಗಲೇ ಕಾಲೇಜುಗಳು ಪ್ರಾರಂಭಗೊAಡಿರುವುದರಿAದ’ ಎನ್ನುವ ತರ್ಕ ಮತ್ತು ‘ಅತಿಥಿ ಉಪನ್ಯಾಸಕರನ್ನು ಮಾರ್ಚ್ ೨೦೨೧ರವರೆಗೆ ಮಾತ್ರ ನೇಮಕ ಮಾಡಿಕೊಳ್ಳತಕ್ಕದ್ದು’ ಎನ್ನುವ ನಿರ್ದೇಶನಗಳು ಅವೈಜ್ಞಾನಿಕ, ಅಮಾನವೀಯ ಮತ್ತು ಅಸಮರ್ಥನೀಯವೆಂದು ಹೋರಾಟ ಸಮಿತಿಯು ಒತ್ತಿ ಹೇಳುತ್ತದೆ. ಈ ಕ್ರಮದಿಂದ ಸಮಯಾವಕಾಶದ ಅಲಭ್ಯತೆಯ ಒತ್ತಡಕ್ಕೆ ಸಿಲುಕಿ, ಪಾಠಪ್ರವಚನಗಳು ಸರಿಯಾಗಿ ನಡೆಯದೇ, ಒಂದೆಡೆ ಅತಿಥಿ ಉಪನ್ಯಾಸಕರು ನಿರುದ್ಯೋಗದ ಕೂಪಕ್ಕೆ ತಳ್ಳಲ್ಪಟ್ಟರೆ, ಇನ್ನೊಂದೆಡೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅದು ಕಂಟಕವಾಗಿ ಪರಿಣಮಿಸುತ್ತದೆ. ಆದ್ದರಿಂದ ೧೯-೦೧-೨೦೨೧ರ ಸುತ್ತೋಲೆಯನ್ನು ಹಿಂಪಡೆದು ಈ ಹಿಂದೆ ತಾವು ನೀಡಿದ್ದ ವಾಗ್ದಾನÀದಂತೆ ೨೦೧೯-೨೦ರಲ್ಲಿ ಕಾರ್ಯ ನಿರ್ವಹಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ೨೦೨೦-೨೧ ಸಾಲಿಗೆ ಈ ಕೂಡಲೇ ಸೇವೆಗೆ ನಿಯೋಜಿಸಬೇಕು ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯು ಒತ್ತಾಯಪೂರ್ವಕವಾಗಿ ಆಗ್ರಹಿಸಿದೆ.ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಜಿಲ್ಲಾ ನಾಯಕರಾದ ಎ.ಪಂಪಾಪತಿ ಮತ್ತು ಬಳ್ಳಾರಿಯ ಅತಿಥಿ ಉಪನ್ಯಾಸಕರುಗಳಾದ ಡಾ.ದುರುಗಪ್ಪ, ಮಹ್ಮದ್ ರಫೀಕ್, ಸುಂಕಣ್ಣ, ಶರಣಪ್ಪ ಇನ್ನಿತರು ಭಾಗವಹಿಸಿದ್ದರು.


Leave a Reply