Ballary

ಹೆಣ್ಣು ಮಕ್ಕಳ ದಿನಾಚರಣೆಯ ಪೂರ್ವಬಾವಿ ಸಭೆ


ಬಳ್ಳಾರಿ.ಜ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬಳ್ಳಾರಿ ವತಿಯಿಂದ ಬಳ್ಳಾರಿ ತಾಲೂಕಿನ ರೂಪನಗುಡಿ ಗ್ರಾಮದ ಪ್ರೌಢಶಾಲೆಯಲ್ಲಿ ದಿನಾಂಕ ೨೪.೦೧.೨೦೨೧ ರಂದು ಹತ್ತೊಂಬತ್ತು ವರ್ಷದ ಒಳಗಿನ ಯುವತಿಯರ ಹೆಣ್ಣು ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಬಿ ಹೆಚ್ ಎಂ ವಿರುಪಾಕ್ಷಯ್ಯಸ್ವಾಮಿ ಮತ್ತು ಭಾಷಾ ರವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಕುರಿತು ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಸಭಾಂಗಣದಲ್ಲಿ ಪೂರ್ವಬಾವಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಬಿ ಹೆಚ್ ಎಂ ವಿರುಗಪಾಕ್ಷಯ್ಯ, ಭಾಷಾ, ಜಿಲ್ಲಾ ಯುವ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಜಿ ಹೆಚ್, ಉಪಾಧ್ಯಕ್ಷರಾದ ಕುಮಾರಿ ಎಂ ರಕ್ಷಿತಾ, ಸದಸ್ಯರಾದ ತಿಪ್ಪೇಸ್ವಾಮಿನಾಯ್ಕ್, ಸಲಹೆಗಾರರಾದ ಇಬ್ಬನಿ ವಿ ಬಿ ಮಲ್ಲಪ್ಪ, ಜಗನ್ನಾಥ್ ಅಂದ್ರಾಳ್, ಈ ಜಿ ರೆಡ್ಡಿ ಚರಕುಂಟೆ ಸೇರಿದಂತೆ ಸಂಸ್ಥೆಯ ಹಲವಾರು ರೇಂರ‍್ಸ್ ಮತ್ತು ರೋವರ್‌ಗಳು ಉಪಸ್ಥಿತರಿದ್ದರು.


Leave a Reply