Belagavi

ಅಯೋಧ್ಯೆಯ ಶ್ರೀರಾಮ ಮಂದಿರ, ರಾಷ್ಟç ಮಂದಿರವಾಗಲಿದೆ: ಹೆಗಡೆ


ಬೈಲಹೊಂಗಲ ೨೨: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ರಾಷ್ಟç ಮಂದಿರ ಈ ಎರಡು ಒಟ್ಟಿಗೆ ನಿರ್ಮಾಣ ಮಾಡುವ ಕೆಲಸ ಬರದಿಂದ ನಡೆದಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಹಾಬಳೇಶ್ವರ ಹೆಗಡೆ ಹೇಳಿದರು.
ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರೊAದಿಗೆ ಚರ್ಚಿಸಿ ಮಾತನಾಡಿದರು. ‘ಹಣ ಕೊಟ್ಟರೆ ಒಂದೆರಡು ವರ್ಷದಲ್ಲಿ ರಾಮ ಮಂದಿರ ನಿರ್ಮಾಣವಾಗಿ ಬಿಡುತ್ತದೆ. ರಾಷ್ಟç ಮಂದಿರ ನಿರ್ಮಾಣವಾಗಬೇಕಾದರೆ ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕರು ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮದೆಯಾದ ಅತ್ಯಅಮೂಲ್ಯ ಕೊಡುಗೆ ನೀಡಬೇಕು. ಜೀವನದ ಸಾರ್ಥಕತೆ ಹೊಂದಬೇಕು’ ಎಂದರು.
‘ದೇಶದಲ್ಲಿ ಮತಾಂತರ, ಲವ್ ಜಿಹಾದ್, ದೇಶಕ್ಕೆ ಅಪಮಾನ ಮಾಡುವವರ ಸಂಖ್ಯೆ ಬಹಳ ದೊಡ್ಡದಿದೆ. ಇವೆಲ್ಲಕ್ಕೂ ಇತಿಶ್ರೀ ಹಾಡಬೇಕಿದೆ. ದೇಶಕ್ಕೆ ಒಂದೇ, ಒಂದು ಸಣ್ಣ ಅಪಮಾನ ಮಾಡಿದರು ಸಹಿಸಿಕೊಳ್ಳಲು ಅಸಾಧ್ಯವಾಗದಷ್ಟು ಜನರು ಪ್ರತಿಭಟನೆ ನಡೆಸಬೇಕು. ದೇಶಭಕ್ತಿ ನಿರ್ಮಾಣವಾಗಬೇಕು. ಆಗ ರಾಷ್ಟç ನಿರ್ಮಾಣ ಕಾರ್ಯಕ್ಕೆ ಅರ್ಧ ಸಿಗುತ್ತದೆ. ಈ ರೀತಿ ಆಗಬೇಕೆಂಬ ಅಪೇಕ್ಷೆ ಇದೆ. ದೇಶಕ್ಕೆ ಯಾವುದೇ ಸಂಕಷ್ಟ ಎದುರಾದಾಗ ಒಕ್ಕೂರಲಿನ ಧ್ವನಿಯಿಂದ ಎದುರಿಸಿ ಜಯಶಾಲಿಯಾಗಬೇಕು. ದೇಶಕ್ಕೆ ಅಪಮಾನವಾದಾಗ ಜನ ಸಿಡಿದೇಳುತ್ತಾರೋ ಆವಾಗ ರಾಷ್ಟç ಮಂದಿರ ನಿರ್ಮಾಣದ ಕಾರ್ಯ ಸಫಲತೆ ಕಾಣುತ್ತದೆ ಎಂದರು. ಮಾಜಿ ಶಾಸಕ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ವಿಶ್ವ ಹಿಂದೂ ಪರಿಷತ್ ಗೌರವ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ, ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಮುಖಂಡರಾದ ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ ಇದ್ದರು.


Leave a Reply