Koppal

ಕೊಪ್ಪಳದಲ್ಲಿ ಇಟಗಿ ಉತ್ಸವ : ಮೂರು ಸಮ್ಮೇಳನಕ್ಕೆ ಭರದ ಸಿದ್ಧತೆ

ಕೊಪ್ಪಳ, ಜ. ೨೨: ಕೊಪ್ಪಳ ಜಿಲ್ಲೆಯ ಐತಿಹಾಸಿಕ ಇಟಗಿ ಮಹಾದೇವ ದೇವಾಲಯದ ನೆನಪಿನಲ್ಲಿ ನಡೆಯುವ ಇಟಗಿ ಉತ್ಸವವನ್ನು ಕೋವಿಡ್ ೧೯ ಕಾರಣಕ್ಕಾಗಿ ಕೊಪ್ಪಳದ ಸಾಹಿತ್ಯ ಭವನದಲ್ಲಿ ಜನವರಿ ೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ. ಉತ್ಸವದ ಅಂಗವಾಗಿ ಜಾನಪದ ಸಮ್ಮೇಳನ, ಕವಿ ಸಮ್ಮೇಳನ ಹಾಗೂ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ ಆಯೋಜಿಸಲಾಗಿದೆ.

ಜಾನಪದ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ್ ಮೋರನಾಳ ಅವರನ್ನು ಆಯ್ಕೆ ಮಾಡಲಾಗಿದೆ. ಕವಿ ಸಮ್ಮೇಳನವನ್ನು ಹಿರಿಯ ಉಪನ್ಯಾಸಕ ಸಾಹಿತಿ ಡಾ. ಪಕೀರಪ್ಪ ವಜ್ರಬಂಡಿ ಅವರು ವಹಿಸಿಕೊಂಡಿದ್ದಾರೆ. ಮಕ್ಕಳ ಸಾಂಸ್ಕೃತಿಕ ಸಮ್ಮೇಳನವನ್ನು ಬಾಲ ಕಲಾವಿದೆ ಸಾಹಿತ್ಯ ಎಂ. ಗೊಂಡಬಾಳ ನಿರ್ವಹಿಸಲಿದ್ದಾರೆ. ಈ ಮೂವರನ್ನು ಅಧಿಕೃತವಾಗಿ ಸಮ್ಮೇಳನಗಳಿಗೆ ಸರಳವಾದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಆಹ್ವಾನಿಸಲಾಯಿತು. ಸಭೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ಸಾಹಿತಿ ಹನುಮಂತಪ್ಪ ಅಂಡಗಿ ಅವರು ಮಾತನಾಡಿದರು.

ಉತ್ಸವದ ರುವಾರಿ ಮಹೇಶ್ ಬಾಬು ಸುರ್ವೆ, ಸಾಹಿತಿಗಳಾದ ಜಿ.ಎಸ್. ಗೋನಾಳ್, ಶ್ರೀನಿವಾಸ್ ಚಿತ್ರಗಾರ, ಮಂಜುನಾಥ ಜಿ. ಗೊಂಡಬಾಳ, ಶಿಕ್ಷಕ ಉಮೇಶ್ ಬಾಬು ಸುರ್ವೆ, ಸಂಘಟಕರಾದ ಶರಣಯ್ಯ ಇಟಗಿ, ಶಿವಕುಮಾರ ಹಿರೇಮಠ, ಮಲಿಕ್‌ಸಾಬ್ ನೂರ್‌ಭಾಷಾ, ಉಮೇಶ್ ಪೂಜಾರ್, ಮಹಿಬೂಬ್ ಖಾನ್, ರಾಮು ಪೂಜಾರ, ಪಾಂಡು ಶಿಳ್ಳಿಕ್ಯಾತರ, ಗೌರಮ್ಮ ನೀಲಮ್ಮನವರ, ಜ್ಯೋತಿ ಎಂ. ಗೊಂಡಬಾಳ, ಸತೀಶ್ ಕಾತರಕಿ ಮುಂತಾದವರು ಉಪಸ್ಥಿತರಿದ್ದರು. ರಾಷ್ಟಿçÃಯ ಮಕ್ಕಳ ಪ್ರತಿಬಾ ಕೇಂದ್ರ ಕೊಪ್ಪಳ ಮತ್ತು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ಜಂಟಿಯಾಗಿ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker