Belagavi

112 ಸಹಾಯವಾಣಿಗೆ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕರೆ ಮಾಡಿ ಪಿ ಎಸ್ ಐ ಪ್ರವೀಣ ಗಂಗೋಳ್ಳಿ


ಯರಗಟ್ಟಿ : ಸ್ಥಳೀಯ ಯರಗಟ್ಟಿಯ ಸಂಗೋಳ್ಳಿ ರಾಯಣ್ಣ ವೃತ್ತಿಯಲ್ಲಿ ಏರ್ಪಡಿಸಿದ್ದ 112 ಸಹಾಯವಾಣಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಿ ಎಸ್ ಐ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕೆಂದು.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಹೆಚ್ಚು ಅಪಘಾತ ಸಂಭವಿಸುತ್ತಿವೆ ಹಾಗಾಗಿ ಸರಕಾರ ಜನರ ಪ್ರಾಣ ರಕ್ಷಣೆಗಾಗಿ ಒಂದೆ ತುರ್ತು ಕರೆ ಸಂಖ್ಯೆ 112 ತುರ್ತು ಸ್ಪಂದನಾ ಸಹಾಯವಾಣಿಯನ್ನು ತಾಲೂಕಿನ ಸಾರ್ವಜನಿಕ, ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೂಳ್ಳಬೇಕು ಎಂದು ಮುರಗೋಡ ಠಾಣೆ ಪಿಎಸ್ಐ ಪ್ರವೀಣ್ ಗಂಗೋಳ್ಳಿ ತಿಳಿಸಿದ್ದರು.
ಈ ಸಂದರ್ಭದಲ್ಲಿ ಯರಗಟ್ಟಿ ಉಪ ಠಾಣೆಯ ಎ ಎಸ್ ಯ್, ಎಮ್ ಪಿ ನಂದೇರ,ಸಿಬ್ಬಂದಿಯಾದ ಸಿದ್ದಪ್ಪ ದೊಡ್ಡವಾಡ, ಯಲ್ಲಪ್ಪ ಕಡಕೋಳ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply