BallaryKoppal

ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್ ಹಂಪಿಗೆ ಭೇಟಿ


ಬಳ್ಳಾರಿ/ಹೊಸಪೇಟೆ,ಜ.22 : ಕರ್ನಾಟಕ ಸರಕಾರದ ಗೃಹ ಕಾರ್ಯದರ್ಶಿಗಳು ಹಾಗೂ ಹಿರಿಯ ಐಎಎಸ್ ಅಧಿಕಾರಿಗಳಾದ ರಜನೀಶ್ ಗೋಯಲ್ ಅವರು ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಹಂಪಿಯ ವಿವಿಧ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.
ರಜನೀಶ್ ಗೋಯಲ್ ಅವರು ತಮ್ಮ ಮಗಳು ಹಾಗೂ ತಂದೆ-ತಾಯಿಯರೊಂದಿಗೆ ಹಂಪಿಗೆ ಆಗಮಿಸಿ ವಿಜಯ ವಿಠ್ಠಲ ದೇವಸ್ಥಾನ,ವಿರೂಪಾಕ್ಷೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಸ್ಥಳಗಳನ್ನು ವೀಕ್ಷಿಸಿದರು. ನಂತರ ಅವರು ಹಂಪಿ ಸಮೀಪದ ಕಮಲಾಪುರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ನಲ್ಲಿ ಕುಟುಂಬ ಸಮೇತ ಸಫಾರಿ ಕೈಗೊಂಡರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು,ಪುರಾತತ್ವ,ಜೂಲಾಜಿಕಲ್ ಪಾರ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇತರರು ಇದ್ದರು.


Leave a Reply