bagalkotBallaryBelagavibidarGadaggulburgaKarnatakakarwar uttar kannadaKoppalvijayapur

ಪಂಚಮಸಾಲಿ ಸಮಾಜ ೨ಎ ಮೀಸಲಾತಿ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಾಲಚಂದ್ರ ಜಾರಕಿಹೋಳಿ ಭರವಸೆ 

 

ಮೂಡಲಗಿ: ಜ-೨೨ ಪಂಚಮಸಾಲಿ ಅಭಿವೃದ್ಧಿ ಸಮಿತಿವತಿಯಿಂದ, ಲಿಂಗಾಯತ ಪಂಚಮಸಾಲಿ ೨ಎ ಮೀಸಲಾತಿ ಕುರಿತು ಅರಭಾವಿ ಶಾಸಕ ಶ್ರೀ ಬಾಲಚಂದ್ರ ಜಾರಕಿಹೋಳಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಶಾಸಕ ಬಾಲಚಂದ್ರ ಜಾರಕಿಹೋಳಿ ಮನವಿಯನ್ನು ಸ್ವಿಕರಿಸಿ ಮಾತನಾಡಿದ ಅವರು ಪಂಚಮಸಾಲಿ ಸಮುದಾಯ ಬಂದುಗಳು ನಡೆಸುತ್ತಿರುವ ೨ಎ ಮೀಸಲಾತಿಯ ಪಡೆಯುವಲು ನಡೆಸುತ್ತಿರುವ ಪಾದಯಾತ್ರೆಗೆ ಸಂರ್ಪೂಣವಾಗಿ ಸಹಕಾರ ಇದೆ ಮತ್ತು ಅದು ಯಶಶ್ವಿಯಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ ಮಾತನಾಡಿ ಪಂಚಮಸಾಲಿ ಬಂದುಗಳು ಶಿಕ್ಷಣ ಮತ್ತು ಉದ್ಯೂಗದಲ್ಲಿ ಕೇಳುತ್ತಿರುವ ೨ಎ ಮೀಸಲಾತಿಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮೂಡಲಗಿ ಪಂಚಮಸಾಲಿ ತಾಲೂಕು ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ, ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರವಿ ಮಹಾಲಿಂಗಪೂರ, ಸಮಾಜದ ಮುಖಂಡರಾದ,ಬಸವಪ್ರಭು ನಿಡಗುಂದಿ,ಶಿವಲಿಂಗಪ್ಪಾ ಗೋಕಾಕ,ಪರುಶುರಾಮ ಗೋಕಾಕ, ಸದಾಶಿವ ನಿಡಗುಂದಿ ,ದೀಪಕ ಜುಂಜರವಾಡ,ಮಲ್ಲು ಗೋಡಿಗೌಡರ, ಈಶ್ವರ ಢವಳೇಶ್ವರ , ನಿಂಗಪ್ಪಾ ಪಿರೋಜಿ,ಆನಂದ ಮುಗಳಖೋಡ,ರಾಘವೇಂದ್ರ ಕುಡಚಿ, ಪ್ರಶಾಂತ ನಿಡಗುಂದಿ, ಗುರುಲಿಂಗಪ್ಪ ಗೋಕಾಕ,ಮಹಾದೇವ ಗೋಕಾಕ,ಶಿವಬಸು ಶೇಗುಣಶಿ ಇನ್ನಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker