bagalkotBallaryBelagavibidarFeatured-ArticleGadaggulburgakarwar uttar kannadaKoppalStatevijayapur

ಸೂಕ್ತ ಮಾರ್ಗಸೂಚಿಗಳಿಲ್ಲದ ವರ್ಕ್ ಫ್ರಮ್ ಹೋಮ್ ಪದ್ಧತಿ


ಕಂಪನಿಗಳ ನೌಕರರು, ಹಲವು ಸಂಸ್ಥೆಗಳು ಕಛೇರಿಗಳಲ್ಲಿ ಕಾರ್ಯನಿರ್ವಹಿಸುವವರು, ಲ್ಯಾಪ್‌ಟಾಪ್ ಅಥವಾ ಗಣಕಯಂತ್ರಗಳ ಮೂಲಕವೇ ತಮ್ಮ ಕೆಲಸವನ್ನು ಅವರವರ ಮನೆಗಳಲ್ಲೇ ಇದ್ದು ಪೂರ್ಣಗೊಳಿಸುವ ದಿನನಿತ್ಯ ಇವರ ಕೆಲಸವನ್ನು ಇದೇ ಪದ್ಧತಿಯಲ್ಲಿ ಮುಂದುವರೆಸುವ ಪ್ರಕ್ರಿಯೆಗೆ ಮನೆಯಿಂದ ಕೆಲಸ ಅಥವಾ ವರ್ಕ್ ಫ್ರಮ್ ಹೋಮ್ ಎಂದು ಕರೆಯುತ್ತಾರೆ. ಈ ಪದ್ಧತಿ ಪ್ರಪಂಚದಾದ್ಯAತ ಕೋವಿಡ್-೧೯ ಪ್ರಬಲವಾಗಿ ಹರಡಿದ ಮೇಲೆ, ಇನ್ನಷ್ಟು ಮಹತ್ವ ಪಡೆದುಕೊಂಡಿತು. ಇದರಿಂದಾಗಿ ಪ್ರತಿದಿನ ಕೆಲಸ ಮಾಡುವ ಕಛೇರಿ, ಸಂಸ್ಥೆ ಅಥವಾ ಕಂಪನಿಗಳಿಗೆ ಹೋಗುವ ಅವಶ್ಯಕತೆ ಇಲ್ಲ. ರಿಮೋಟ್ ಯಾವ ರೀತಿ ದೂರದಿಂದ ಕೆಲಸ ಮಾಡುವುದೋ ಅದೇ ರೀತಿ ವರ್ಕ್ ಫ್ರಮ್ ಹೋಮ್ ಎನ್ನುವ ಈ ಪದ್ಧತಿಯಲ್ಲಿ ಕೆಲಸದ ಸ್ಥಳದಿಂದ ಸಂಬAಧವಿಲ್ಲದAತೆ ಎಲ್ಲೋ ದೂರದ ಪ್ರದೇಶಗಳಿಂದ ಕೆಲಸ ಮಾಡುತ್ತಾರೆ.
ಇನ್ನು ಸಂಸ್ಥೆಯ ಮ್ಯಾನೇಜರ್ ಅಥವಾ ವ್ಯವಸ್ಥಾಪಕ ನಿರ್ದೇಶಕರ ಅಥವಾ ಯಜಮಾನರಿಗೆ, ಅವರ ಉದ್ಯೋಗಸ್ಥರಿಗೆ ಪ್ರತಿದಿನ ವಾಹನ ಒದಗಿಸುವುದು ತಪ್ಪುತ್ತದೆ, ಇದಕ್ಕೆ ತಗಲುವ ವೆಚ್ಚ ಅಲ್ಲದೆ, ವಿದ್ಯುತ್ ಬಿಲ್, ನೀರಿನ ಬಿಲ್, ಕಛೇರಿಗಳು ಉದ್ಯೋಗಿಗಳಿಂದ, ಬಂದುಹೋಗುವುದರಿAದÀ ತುಂಬಿತುಳುಕುವಾಗ ಆಗುತ್ತಿರುವ ಕಾಣದ ಖರ್ಚುಗಳು ಉಳಿಯುತ್ತವೆ. ಇನ್ನು ಉದ್ಯೋಗಸ್ಥರು ಮನೆಯಲ್ಲಿಯೇ ಆಫೀಸ್ ಕೆಲಸ ಮಾಡುತ್ತಾ ಕುಟುಂಬದ ಸದಸ್ಯರೊಡನೆ ಕಣ್ಣೆದುರಿಗೆ ಇದ್ದು ಕಾಲ ಕಳೆಯುತ್ತಾರೆ. ಬೇಕಾದಾಗ ಮನೆಕೆಲಸಕ್ಕೆ ಸಮಯ ಮೀಸಲಿಟ್ಟು ಕಛೇರಿಯ ಕೆಲಸವೂ ಮಾಡುತ್ತಿರಬಹುದು. ಕಛೇರಿ ಅಥವಾ ಸಂಸ್ಥೆಯಲ್ಲಿ ತಾನು ಕೆಲಸ ಮಾಡುವಾಗ, ಈ ಸಮಯದಲ್ಲಿ ಮನೆಯಲ್ಲಿ ನಾನು ಇಲ್ವಲ್ಲಾ, ಈ ಕಾರ್ಯಕ್ರಮಕ್ಕೆ ಅಥವಾ ಚರ್ಚೆಯಲ್ಲಿ, ಸಂತೋಷದಲ್ಲಿ ಭಾಗಿಯಾಗಬೇಕಿತ್ತು ಎನ್ನುವ ಕೊರಗು ಇರುತ್ತಿತ್ತು. ಆದರೆ ವರ್ಕ್ ಫ್ರಮ್ ಹೋಮ್ ಪ್ರಕ್ರಿಯೆಯಲ್ಲಿ ಈ ಕೊರಗು ನೀಗಬಹುದು. ಮನೆಗೆ ಮೀಸಲಾಗಿ, ಮನೆಯಲ್ಲಿಯ ಎಲ್ಲಾ ಸದಸ್ಯರೊಡನೆ ಸ್ಪಂದಿಸುತ್ತಾ ಹಾಯಾಗಿರಬಹುದು. ಈ ಪದ್ಧತಿಯಲ್ಲಿ ಹಲವು ನೂನ್ಯತೆಗಳು ಇಲ್ಲದಿಲ್ಲ.
ರಾಜ್ಯ ಅಥವಾ ಕೇಂದ್ರ ಸರ್ಕಾರಗಳಿಂದ ವರ್ಕ್ ಫ್ರಮ್ ಹೋಮ್ ಪದ್ಧತಿಗೆ ನಿರ್ದಿಷ್ಟ ಸೂಚನೆಗಳು, ನಿಬಂಧನೆಗಳು ಇಲ್ಲದಿರುವುದು, ಇಲ್ಲಿ ಸಂಬAಧಿತ ಖಾಸಗಿ ಸಂಸ್ಥೆಗಳೇ ಅವರು ರೂಪಿಸಿದ ಸೂಚನೆಗಳನ್ನು ಸಿಬ್ಬಂದಿ ಪಾಲಿಸಲು ತಿಳಿಸುವುದು ಇರುವುದರಿಂದ, ಈ ಪದ್ಧತಿಯಲ್ಲಿ ಒಂದು ನಿರ್ದಿಷ್ಟವಾದ ಹೊಂದಾಣಿಕೆಯ ಕೊರತೆ ಎದ್ದು ಕಾಣುವುದು ಉದ್ಯೋಗಸ್ಥನಿಗೂ, ಮಾಲೀಕ, ಮ್ಯಾನೇಜರ್, ಅಥವಾ ಸಂಬAಧಿತ ಅಧಿಕಾರಿಗೂ ಸಮನ್ವಯ ಇಲ್ಲದೇ ಸಂಸ್ಥೆಗೆ ಕಷ್ಟವಾಗುತ್ತದೆ.
ಪ್ರಪಂಚದಾದ್ಯAತ ಐ.ಟಿ. ಉದ್ಯಮಗಳಲ್ಲಿ ೨೦೧೮ರ ಹೊತ್ತಿಗೆ ಶೇ.೭೦ ರಷ್ಟು ಉದ್ಯೋಗಸ್ಥರು ವಾರಕ್ಕೊಮ್ಮೆ ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಶೇ.೫೩ ರಷ್ಟು ಜನ ವಾರದಲ್ಲಿ ೧/೨ ದಷ್ಟು ದಿನಗಳಲ್ಲಿ ಈ ರೀತಿ ಕೆಲಸ ಮಾಡುವ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಿದ್ದರು. ನಮ್ಮ ದೇಶದಲ್ಲಿ ಐ.ಟಿ. ಮತ್ತು ಐ.ಟಿ. ಆಧಾರಿತ ಸಂಸ್ಥೆಗಳಲ್ಲಿ ೪೦.೩೬ ಲಕ್ಷ ಜನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಮತ್ತು ಕೋವಿಡ್-೧೯ ಪ್ರಭಾವದಿಂದಾಗಿ ಶೇ.೮೫ ರಷ್ಟು ಉದ್ಯೋಗಿಗಳು ಮನೆಗಳಿಗೆ ಸೀಮಿತವಾಗಿ ವರ್ಕ್ ಫ್ರಮ್ ಹೋಮ್ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಪ್ರತಿಷ್ಠಿತ ಗೂಗಲ್, ಫೇಸ್‌ಬುಕ್, ಸೇಲ್ಸ್ ಫರ‍್ಸ್, ಅಡೋಬ್ ನಂತಹ ಸಂಸ್ಥೆಗಳು ೨೦೨೦ ಮತ್ತು ೨೦೨೧ರ ಕೊನೆಯ ಭಾಗದವರೆಗೆ ವರ್ಕ್ ಫ್ರಮ್ ಹೋಮ್ ಸೂಚನೆಗಳನ್ನು ನೀಡಿರುತ್ತವೆ. ಟ್ವಿಟ್ಟರ್ ಸಂಸ್ಥೆಯು ಇನ್ನೊಂದು ಹೆಜ್ಜೆ ಮುಂದೆ ಇಟ್ಟು ತನ್ನ ಉದ್ಯೋಗಸ್ಥರು ಶಾಶ್ವತವಾಗಿ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಿದೆ. ಟಿ.ಸಿ.ಎಸ್. ಸಂಸ್ಥೆಯು ೨೦೨೫ರ ಹೊತ್ತಿಗೆ ತನ್ನ ಉದ್ಯೋಗಸ್ಥರಲ್ಲಿ ಶೇ.೭೫% ರಷ್ಟು ಜನರನ್ನು ಮನೆಯಿಂದಲೇ ಕೆಲಸ ನಿರ್ವಹಿಸುವ ಯೋಜನೆಯನ್ನು ರೂಪಿಸಿದೆ. ಮುಂದಿನ ಮೂರು ವರ್ಷದಿಂದ ಐದು ವರ್ಷದ ಅವಧಿಯಲ್ಲಿ ಐ.ಟಿ. ವಿಭಾಗದಲ್ಲಿ ಶೇ.೬೦ ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡಬಹುದೆಂದು ನಾಸ್ಕಾಂ ತಿಳಿಸಿದೆ. ಹತ್ತು ವರ್ಷದ ಕೆಳಗೆ ಈ ಪದ್ಧತಿ ಭಾರತದಲ್ಲಿ ಪ್ರಚಲಿತವಾಗಿದ್ದರೂ, ಕೋವಿಡ್-೧೯ ಕಷ್ಟ ಸಮಯದಲ್ಲಿ ಬಹಳಷ್ಟು ಕಂಪನಿಗಳು, ಈ ಪದ್ಧತಿಯನ್ನು ತಮ್ಮ ಸಿಬ್ಬಂದಿಗೆ ಅಳವಡಿಸಿಕೊಂಡವು.
ಇದರಿAದಾಗಿ ಒಂದು ದಿನಕ್ಕೆ ಸುಮಾರು ೨:೦೦ ಘಂಟೆಯವರೆಗೆ ಪ್ರಯಾಣದ ಸಮಯ ಉಳಿತಾಯವಾಗುತ್ತಿದೆಯಲ್ಲದೆ ಒಂದು ತಿಂಗಳಿಗೆ ಸುಮಾರು ರೂ. ೫,೦೦,೦೦೦/- ಗಳವರೆಗೆ ಒಬ್ಬ ಸಿಬ್ಬಂದಿಯ ಖರ್ಚುವೆಚ್ಚಗಳ ಉಳಿತಾಯವಾಗಲಿದೆ ಎಂಬುವುದಾಗಿ ತಜ್ಞರು ಹೇಳಿದ್ದಾರೆ. ಮನೆಯಿಂದ ಕೆಲಸ ಮಾಡುತ್ತಾ, ಮನೆಮಂದಿಯೊಡನೆ, ಮನೆಯೂಟ ಸವಿಯುವ ಭಾಗ್ಯ ಒಂದೆಡೆಯಾದರೆ, ಈ ಮನೆಯಿಂದ ಕೆಲಸಕ್ಕೆ ಸಂಬAಧಿಸಿದAತೆ ಕಷ್ಟಗಳು ಸಹ ಇಲ್ಲದಿಲ್ಲ. ಮನೆಯಲ್ಲೇ ಇರುವುದರಿಂದ ದೀರ್ಘಾವಧಿಯ ಕೆಲಸವನ್ನು ನಿರ್ವಹಿಸುವ ಪರಿಸ್ಥಿತಿ ಬರುತ್ತದೆ. ನೀಡಿದ ಕೆಲಸವನ್ನು ಪೂರ್ಣಗೊಳಿಸದೆ ಸಂಸ್ಥೆಯ ಅಧಿಕಾರಿಗಳನ್ನು ತೃಪ್ತಿಗೊಳಿಸಲಾಗುವುದಿಲ್ಲ, ಹಾಗೆಂದು ತಾನು ಮಾಡುವ ಕರ್ತವ್ಯ ನಿರ್ಲಕ್ಷö್ಯ ಮಾಡಲು ಆ ಉದ್ಯೋಗಿಗಳಿಗೆ ಮನಸ್ಸು ಬರುವುದಿಲ್ಲ. ಇದರಿಂದಾಗಿ ಕಡಿಮೆ ವಿಶ್ರಾಂತಿ, ಕಂಪ್ಯೂಟರ್‌ಗೆ ಅಂಟಿಕೊAಡು ಕೂರುವುದರಿಂದ ಕಣ್ಣಿನ ರೋಗ, ತಲೆನೋವು, ದೇಹಕ್ಕೆ ಸಂಬAಧಿಸಿದ ಸಮಸ್ಯೆಗಳು ಬರಬಹುದು.
ಇಂತಹ ಅನೇಕ ಸಮಸ್ಯೆಗಳನ್ನು ಗಮನಿಸಿದ ಒಂದು ಆನ್‌ಲೈನ್ ಸಂಸ್ಥೆ ಸರ್ವೇ ನಿರ್ವಹಿಸಿ ಶೇ.೫೫ ರಷ್ಟು ಜನ ಸಾಮಾಜಿಕ ಏಕಾಂಗಿತನವನ್ನು ಅನುಭವಿಸುತ್ತಿರುವುದಾಗಿ ತಿಳಿಸಿದೆ. ಉಳಿದಂತೆ ಸ್ನೇಹಿತರೊಡನೆ, ಬಂಧುಗಳೊಡನೆ, ಹೆಂಡತಿಮಕ್ಕಳೊಡನೆ ಮುಖ್ಯವಾದ ವಿಷಯ, ಸಂದರ್ಭಗಳು ಬಂದಾಗ ಮಾತನಾಡಲು ಹಲವು ಸಮಯ ಆಗದೇ ಇರಬಹುದು. ಇನ್ನು ಮಹಿಳಾ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಎಂದಾಗ ಅವರಿಗೆ ಸರಿ ಹೊಂದುತ್ತದೆ ಎಂದು ಎಲ್ಲರೂ ಅಂದುಕೊಳ್ಳಬಹುದು ಆದರೆ, ನಿಜಕ್ಕೂ ಹೆಣ್ಣುಮಕ್ಕಳಿಗೆ ಬಹಳಾ ತೊಂದರೆಗಳಿವೆ. ಕಂಪನಿ ಕೆಲಸದೊಂದಿಗೆ ಅಡುಗೆ ಕೆಲಸ, ಮಕ್ಕಳ ಊಟ, ಓದು, ಲಾಲನೆಪಾಲನೆ, ಬಹಳಕಷ್ಟ. ಗರ್ಭಿಣಿಯರಾದರೆ ಇನ್ನು ಹೇಳಲಿಕ್ಕಾಗದ ಕಷ್ಟಗಳು ಮತ್ತು ಮಗು ಆದಾಗಲಂತೂ ಆ ಮಹಿಳೆಯ ತೊಳಲಾಟ ಅಷ್ಟಿಷ್ಟಲ್ಲ. ಕಂಪನಿ ಕೆಲಸ ಮತ್ತು ಮಗು, ಅಡುಗೆ, ದಿನನಿತ್ಯ ವ್ಯವಹಾರಗಳು, ಆರೋಗ್ಯ ಒಂದೇ, ಎರಡೇ ಕಷ್ಟಗಳ ಸರಮಾಲೆಯೇ ಇರುತ್ತದೆ.
ಯಾವುದೇ ಕೆಲಸ ನಿರ್ವಹಣೆಯಲ್ಲಿ ಲೋಪದೋಷಗಳು, ಲಾಭಗಳು ಇರುತ್ತದೆ. ಆದರೆ ಈ ಪದ್ಧತಿಯಲ್ಲಿಯ ಆಗುಹೋಗುಗಳನ್ನು ಚೆನ್ನಾಗಿ ಪರಿಶೀಲಿಸಿ, ಮಾಡಬೇಕಾದ ಸುಧಾರಣೆಗಳನ್ನು ಮಾಡಿ, ಸಂಸ್ಥೆಗೆ, ಸಿಬ್ಬಂದಿಗೆ ಉಪಯೋಗ ಹಾಗೂ ಲಾಭವಾಗುವಂತಹ ಯೋಜನೆಗಳನ್ನು ರೂಪಿಸಿ ಜಾರಿ ಮಾಡಿದಲ್ಲಿ ಈ ವರ್ಕ್ ಫ್ರಮ್ ಹೋಮ್ ಎಲ್ಲ ವಿಧವಾಗಿ ಯಶಸ್ವಿಯ ಹಾದಿಹಿಡಿದು ನಮ್ಮ ದೇಶವನ್ನು ಸರ್ವತೋಮುಖಾಭಿವೃದ್ಧಿ ಕಡೆಗೆ ಮುನ್ನಡೆಸುವುದರಲ್ಲಿ ಸಂಶಯವಿಲ್ಲ.

ಎಸ್.ಎಲ್. ಶ್ರೀಧರಮೂರ್ತಿ,
ನಿವೃತ್ತ ಸಹಾಯಕ ಆಡಳಿತ ಅಧಿಕಾರಿ, ಪೊಲೀಸ್ ಇಲಾಖೆ,
# ೩೧, ೨ನೇ ಮುಖ್ಯ ರಸ್ತೆ, ಗುರುರಾಜ ಲೇಔಟ್,
ಬೆಂಗಳೂರು-೫೬೦ ೦೨೮ ಮೊ: ೯೬೩೨೪ ೫೩೪೮೩


Leave a Reply