Belagavi

ಜನೇವರಿ ೨೫ ರಂದು ನಿಪ್ಪಾಣಿ ತಾಲೂಕಾ ೨ನೇ ಕನ್ನಡ ಸಾಹಿತ್ಯ ಸಮ್ಮೇಳನ


ಬೆಳಗಾವಿ:೨೩-ನಿಪ್ಪಾಣಿ ತಾಲೂಕಾ ೨ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸೋಮವಾರ ದಿ:೨೫ ರಂದು ಮುಂಜಾನೆ ೭:೩೦ಕ್ಕೆ ಕೆ.ಎಲ್.ಇ.ಸಂಸ್ಥೆ ಆಶೀರ್ವಾದ ಸಾಂಸ್ಕೃತಿಕ ಭವನ ನಿಪ್ಪಾಣಿಯಲ್ಲಿ ನÀಡೆಯಲಿದೆ.
ನಿಪ್ಪಾಣಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂಜಾನೆ ೮ ಗಂಟೆಗೆ ಸನ್ಮಾನ್ಯ ಶ್ರೀ ಮಹಾವೀರ ಬೋರಣ್ಣವರ ಅವರು ಭುವನೇಶ್ವರಿ ದೇವಿ ಭಾವಚಿತ್ರದ ಪೂಜೆ ನೆರವೇರಿಸುವರು. ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ.ಮ.ನಿ.ಪ್ರ.ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ವಹಿಸಲಿದ್ದು, ಶ್ರೀ.ಮ.ನಿ.ಪ್ರ.ಸ್ವ.ಅಲ್ಲಮಪ್ರಭು ಮಹಾಸ್ವಾಮಿಗಳು, ಶ್ರೀ.ಮ.ನಿ.ಪ್ರ.ಸ್ವ.ಸಂಪಾದನಾ ಮಹಾಸ್ವಾಮಿಗಳು ಇವರ ಸಮ್ಮುಖದಲ್ಲಿ ನಡೆಯಲಿದ್ದು, ಸನ್ಮಾನ್ಯ ಶ್ರೀಮತಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಸಾಹಿತಿಗಳಾದ ಪ್ರೊ.ಶಾಂತಿನಾಥ ತ ಲಗಾರೆ ಅವರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಆಶಯ ನುಡಿ ಮಂಡಿಸುವರು. ಡಾ.ಪ್ರಭಾಕರ ಕೋರೆ, ಶ್ರೀ ಅಣ್ಣಾಸಾಹೇಬ ಜೊಲ್ಲೆ, ಶ್ರೀ ಮಹಾಂತೇಶ ಕವಟಗಿಮಠ, ಶ್ರೀ ಗಣೇಶ ಹುಕ್ಕೇರಿ, ಶ್ರೀಮತಿ ಅನುರಾಧಾ ಚೌಗಲೆ, ಶ್ರೀಮತಿ ಅನಿತಾ ದೇಸಾಯಿ, ಶ್ರೀ ಜಯವಂತ ಭಾಟಲೆ, ಶ್ರೀಮತಿ ನೀತಾ ಬಾಗಡೆ, ಶ್ರೀ ಸದ್ದಾಮ ನಗಾರಜಿ, ಶ್ರೀ ಅಮಿತ ಸಾಳವೆ, ಶ್ರೀ ಚಂದ್ರಕಾAತ ಕೋಠಿವಾಲೆ, ಶ್ರೀ ಎಂ ಪಿ ಪಾಟೀಲ, ಶ್ರೀ ವಿಶ್ವನಾಥ ಕಮತೆ, ಶ್ರೀ ಗಜಾನನ ಮನ್ನಿಕೇರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಶ್ರೀ ಪ್ರಕಾಶ ಹುಕ್ಕೇರಿ, ಶ್ರೀ ವೀರಕುಮಾರ ಪಾಟೀಲ, ಶ್ರೀ ಕಾಕಾಸಾಹೇಬ ಪಾಟೀಲ, ಶ್ರೀ ಸುಭಾಷ ಜೋಶಿ, ಶ್ರೀ ಉತ್ತಮ ಪಾಟೀಲ, ಡಾ.ರಾಜೇಶ ನೇರ್ಲಿ, ಶ್ರೀ ಲಕ್ಷö್ಮಣರಾವ ಚಿಂಗಳೆ, ಶ್ರೀ ಅಶೋಕಕುಮಾರ ಅಸೂದೆ, ಶ್ರೀ ಬಿ ಆರ್ ಪಾಟೀಲ, ಡಾ.ಎಸ್ ಆರ್ ಪಾಟೀಲ, ಶ್ರೀ ಸುರೇಶ ಶೆಟ್ಟಿ, ಶ್ರೀ ಚಂದ್ರಕಾAತ ಕುರಬೆಟ್ಟಿ, ಶ್ರೀ ಅನೀಲ ನೇಷ್ಠಿ, ಶ್ರೀ ವಜ್ರಕಾಂತ ಸದಲಗೆ, ಶ್ರೀ ಅಣ್ಣಾಸಾಹೇಬ ಖೋತ, ಶ್ರೀ ಸುನೀಲ ಪಾಟೀಲ, ಚಂದ್ರಕಾAತ ತಾರಳೆ, ಆರ್ ವಾಯ್ ಪಾಟೀಲ, ಶ್ರೀ ವಿಜಯ ಮೇತ್ರಾಣಿ, ಶ್ರೀ ಅಮರ ಬಾಗೇವಾಡಿ, ಶ್ರೀ ಅಣ್ಣಾಸಾಹೇಬ ಹವಲೆ ಅತಿಥಿಗಳಾಗಿ ಆಗಮಿಸುವರು.
ಈ ಸಮ್ಮೇಳನದಲ್ಲಿ ಗ್ರಂಥ ಲೋಕಾರ್ಪಣೆ, ಚಿಂತನ ಗೋಷ್ಠಿ, ಕವಿಗೋಷ್ಠಿ, ಸಂಸ್ಕೃತಿ ಸೌರಭ, ಸಮಾರೋಪ ಸಮಾರಂಭ ನಡೆಯಲಿದ್ದು, ಕ.ಸಾ.ಪ ಎಲ್ಲ ತಾಲೂಕಾ ಅಧ್ಯಕ್ಷರುಗಳು ಉಪಸ್ಥಿತರಿರುವರು. ಈ ಕಾರ್ಯಕ್ರಮಕ್ಕೆ ಸಮಸ್ತ ಕನ್ನಡಾಭಿಮಾನಿಗಳು ಆಗಮಿಸಬೇಕೆಂದು, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಮತ್ತು ನಿಪ್ಪಾಣಿ ತಾಲೂಕಾ ಅಧ್ಯಕ್ಷರಾದ ಶ್ರೀಮತಿ ವಿಧ್ಯಾವತಿ ಜನವಾಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply