Koppal

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ


ಕೊಪ್ಪಳ:- ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ, ಕೊಪ್ಪಳದಲ್ಲಿ ದಿನಾಂಕ ೨೩.೦೧.೨೦೨೧ ರಂದು ೨೦೧೮-೧೯ರ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕಾರ್ಯಕ್ರಮ ಹಾಗೂ ನೇತಾಜಿ ಸುಭಾಸ ಚಂದ್ರ ಭೋಸರವರ ೧೨೫ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿ ಪ್ರಸ್ತುತ ಕೆ.ಎ.ಎಸ್ ಗ್ರೇಡ-೧ ಅಧಿಕಾರಿಯಾಗಿರುವ ಮಂಜುನಾಥ ಮಲ್ಲಪ್ಪ ಗುಂಡೂರ ಅವರು ವಿದ್ಯಾರ್ಥಿಗಳಿಗೆ ನಗದು ಪಾರಿತೋಷಕ ವಿತರಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಬಡತನವನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಸ್ವಪ್ರಯತ್ನ, ತಾಳ್ಮೆ, ಅಧ್ಯಯನಗಳ ಮೂಲಕ ಯಾವುದೇ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಉತ್ತೀರ್ಣರಾಗಬಹುದು. ಜೀವನದ ಕಷ್ಟದ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಹಿಡಿದ ಗುರಿಯನ್ನು ಸಾಧಿಸುವ ಛಲವಿದ್ದರೇ ಮಾತ್ರ ಇಂದಿನ ಕಾಲದಲ್ಲಿ ಯಶಸ್ಸು ಸಾಧ್ಯವಾಗುತ್ತದೆ.
ತಮ್ಮ ಬದುಕಿನಲ್ಲಿ ಎದುರಿಸಿದ ಹಲವಾರು ಕಷ್ಟ ಕಾರ್ಪಣ್ಯಗಳನ್ನು ವಿವರಿಸುತ್ತ ಕಷ್ಟದಲ್ಲಿಯೇ ವಿದ್ಯಾರ್ಜನೆ ಮಾಡಿ ಹತ್ತು ಸ್ಫರ್ಧಾತ್ಮಕ ಪರೀಕ್ಷೆಗಳನ್ನು ತೇರ್ಗಡೆ ಹೊಂದಿ ನನ್ನ ಕನಸಾದ ಕೆ.ಎ.ಎಸ್ ಅಧಿಕಾರಿಯ ಹುದ್ದೆಯನ್ನು ಪಡೆದುಕೊಂಡ ವಿಧಾನವನ್ನು ವಿವರಿಸಿದರು. ಶಿಕ್ಷಕರಾದವರು ಯಾವತ್ತು ಕೂಡ ವಿದ್ಯಾರ್ಥಿಗಳ ಸಾಧನೆ ನೋಡಿ ಸಂಭ್ರಮಿಸುತ್ತಾರೆ. ಶಿಕ್ಷಕ ವೃತ್ತಿಯಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯ ಬಂದರೂ ವಿದ್ಯಾರ್ಥಿಗಳಿಗೆ ಎಂದೂ ಅನ್ಯಾಯ ಮಾಡುವದಿಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಸಮಯ ವ್ಯರ್ಥ ಮಾಡದೇ ಸಾಧನೆ ಮಾಡಿ ಪೂಜ್ಯತ್ರಯರಾದ ತಾಯಿ, ತಂದೆ ಹಾಗೂ ಗುರುಗಳಿಗೆ ಗೌರವ ತಂದು ಕೊಡಬೇಕು. ಸಮಾಜದಲ್ಲಿರುವ ವಿವಿಧ ಕೀಳರಮೆಗಳನ್ನು ಮೆಟ್ಟಿ ನಿಲ್ಲುವ ಸಾಮಾರ್ಥ್ಯ ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವದರಿAದ ಅಂತಹ ಸಾಮಾರ್ಥ್ಯವನ್ನು ಸ್ವಯಂ ಪ್ರಯತ್ನದ ಮೂಲಕ ಸಾಧನೆಯಡೆಗೆ ಕೊಂಡಯ್ಯಬೇಕು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಸ್ತಾವಿಕವಾಗಿ ಅಧ್ಯಾಪಕರಾದ ಶರಣಬಸಪ್ಪ ಬಿಳೆಯಲಿಯವರು ಮಾತನಾಡುತ್ತ ಇಂದು ಜನೆವರಿ ೨೩, ನೇತಾಜಿ ಸುಭಾಸ ಚಂದ್ರ ಭೋಸರವರ ೧೨೫ನೇ ಜನ್ಮ ದಿನಾಚರಣೆಯಾಗಿದ್ದು ವಿದ್ಯಾರ್ಥಿಗಳು ನೇತಾಜಿಯವರ ಧೆೆÊರ್ಯ, ಸ್ಥö್ಯರ್ಯ, ಕಾರ್ಯ ತತ್ಪರತೆಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಮ್ಮ ಪರಾಕ್ರಮವನ್ನು ಸಾಧಿಸಬೇಕೆಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಡಾ. ದಯಾನಂದ ಸಾಳುಂಕೆಯವರು ೨೦೧೯-೨೦ರ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ.ಜೆ.ಎಸ್.ಪಾಟೀಲ ರವರು ವಿದ್ಯಾರ್ಥಿಗಳು ಸಣ್ಣ ಸಣ್ಣ ಸಮಸ್ಯೆಗಳಿಗೆ ಎದೆಗುಂದದೇ ಹೆಗ್ಗುರಿಗಳನ್ನಿಟ್ಟುಕೊಂಡು ಸಾಧನೆ ಮಾಡಬೇಕು. ಸಾಧಿಸುವ ಸಂದರ್ಭದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ಸಾಧನೆ ಮಾಡಿ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತರಬೇಕೆಂದರು. ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯವು ಎಲ್ಲ ವಿಧದಿಂದ ಪ್ರೊತ್ಸಾಹಿಸಲು ಸಿದ್ಧವಿದೆ. ಇಂತಹ ಪ್ರೊತ್ಸಾಹಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು.
ಮಹಾವಿದ್ಯಾಲಯದ ರ‍್ಯಾಂಕ ಗಳಿಸಿರುವ ವಿದ್ಯಾರ್ಥಿನಿ ಗೌರಮ್ಮಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಅಧ್ಯಾಪಕರಾದ ಪ್ರಶಾಂತ ಕೊಂಕಲ್ ನಿರ್ವಹಿಸಿದರು. ವೇದಿಕೆಯ ಮೇಲೆ ನಿವೃತ್ತ ಪ್ರಾಚಾರ್ಯರಾದ ಶ್ರೀಯುತ ಸಿ.ವಿ.ಕಲ್ಮಠ ಹಾಗೂ ಪಾಲಕರ ಪ್ರತಿನಿಧಿಯಾದ ಗವಿಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.


Leave a Reply