bagalkotBallaryBelagavibidarGadaggulburgakarwar uttar kannadaKoppalStatevijayapur

ಹುಕ್ಕೇರಿಶರ ವಚನವನ್ನು ಹಾಡಿದ ಸಚಿವೆ ಶಶಿಕಲಾ ಜೊಲ್ಲೆ


ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹುಕ್ಕೇರಿಶಾ ಅಂಕಿತದಲ್ಲಿ ರಚಿಸಿದ ವಚನಗಳು ವಚನಗಳು ದೇಶ-ವಿದೇಶದಲ್ಲಿ ಖ್ಯಾತಿಯಾಗಿದೆ ವಿಶೇಷವಾಗಿ ನಿಪ್ಪಾಣಿಯಲ್ಲಿ ಜರಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಶ್ರೀಪತಿ ಸಮಾನತೆಯತ್ತ ಮಹಿಳಾ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಯವರು ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ರಚಿಸಿದ ಮಹಿಳೆಯರ ಕುರಿತಾದ ವಚನವನ್ನು ರಾಗಬದ್ಧವಾಗಿ ಹೇಳಿ ಎಲ್ಲ ಮಹಿಳೆಯರಿಗೂ ಮನದಟ್ಟಾಗು ಹಾಗೆಯೇ ಉಪನ್ಯಾಸವನ್ನು ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಶಿಕಲಾ ಜೊಲ್ಲೆಯವರು ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಚನಗಳು ಎಲ್ಲರ ಮೇಲೆ ಪ್ರಭಾವವನ್ನು ಬೀರಿವೆ ಇವರಿಂದ ನಾವು ಕಲಿಯಬೇಕಾಗಿರುವ ಇಷ್ಟೇ ಮಕ್ಕಳಿಗೆ ಎದೆಹಾಲು ತುಂಬಾ ಮುಖ್ಯ ಇದನ್ನು ನಾವೆಲ್ಲರೂ ಕೂಡ ತಿಳಿದುಕೊಂಡು ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ಮಾತನಾಡಿ ಮಹಿಳೆ ಇವತ್ತು ಎಲ್ಲಾ ದೃಷ್ಟಿಕೋನದಿಂದ ಮುಂದೆ ಬಂದಿದ್ದಾರೆ ಇನ್ನು ಹೆಚ್ಚಿನ ಕಾರ್ಯವನ್ನು ಮಾಡಬೇಕು ಮನೆ ಮತ್ತು ತನ್ನ ಕೆಲಸದಲ್ಲಿ ನಿಗಾ ಇಟ್ಟು ಮುಂದೆ ಬರಬೇಕು ಎಂದರು ಸಾನಿಧ್ಯವನ್ನು ವಹಿಸಿಕೊಂಡ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ ಮಹಿಳೆಯರು ಇವತ್ತು ಎಲ್ಲಾ ರಂಗದಲ್ಲಿ ಮುಂದೆ ಬಂದಿದ್ದಾರೆ ನಾನು ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವಷ್ಟು ಬೆಳೆದು ನಿಂತಿದ್ದಾರೆ ಇನ್ನೂ ಬೆಳೆಯಬೇಕು ನೀವು ಚೆನ್ನಾಗಿ ಸಂಸ್ಕಾರ ಕೊಟ್ಟರೆ ದೇಶ ಚೆನ್ನಾಗಿರುತ್ತದೆ ಎಂದರು ಈ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕ್ರಮ ನಿರ್ದೇಶಕರು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ಮಂಜುಳಾರವರು ಮತ್ತು ಶ್ರೀಮತಿ ಅನಿತಾ ಸಾಗರ ದೇಸಾಯಿ ಉಪಾಧ್ಯಕ್ಷರು ತಾಲೂಕು ಪಂಚಾಯಿತಿ ಅನುರಾಧ ಚೌಗುಲೆ ಅಧ್ಯಕ್ಷರು ತಾಲೂಕು ಪಂಚಾಯಿತಿ ನಿಪ್ಪಾಣಿ ಹಾಗೂ ಅನೇಕರು ಉಪಸ್ಥಿತರಿದ್ದರು


Leave a Reply