bagalkotBallaryBelagavibidarGadaggulburgakarwar uttar kannadaKoppalNationalStatevijayapur

ಲಿಂಗಾಯಿತ ಮಠಾಧೀಶರ ಒಕ್ಕೂಟಕ್ಕೆ ಅಧ್ಯಕ್ಷರಾಗಿ ಬಸವಲಿಂಗ ಪಟ್ಟದ್ದೇವರು


ಬೆಳಗಾವಿ ; ಸಮಸ್ತ ಲಿಂಗಾಯಿತ ಮಠಾಧೀಶರ ಒಕ್ಕೂಟಕ್ಕೆ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ 2 ದಿನಗಳ ಕಾಲ ಲಿಂಗಾಯತ ಮಠಾಧೀಶರ ಸಭೆ ನಡೆದಿತ್ತು . ನಾಡಿನ ವಿವಿಧ ಭಾಗಗಳ ಮಠಾಧೀಶರು ಈ ಸಭೆಯಲ್ಲಿ ಭಾಗವಹಿಸಿದ್ದರು.ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಂ ಜಾಮದಾರ್ ಸೇರಿ ಅನೇಕರು ಭಾಗವಹಿಸಿದ್ದರು .ಇದೇ ಸಭೆಯಲ್ಲಿ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ಆಯ್ಕೆಯಾಗಿದ್ದಾರೆ .

ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ಲಿಂಗಾಯತ ಮಠಾಧಿಪತಿಗಳು ಇದೇ ದಿನಾಂಕ ೨೨ ಮತ್ತು ೨೩ ರಂದು ಅನೇಕ ಪ್ರಸ್ತುತ ವಿಷಯಗಳನ್ನು ಕುರಿತು ಚಿಂತನ-ಮ0ಥನ ನಡೆಸುವುದಲ್ಲದೆ ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ ಎಂಬ ನೂತನ ಸಂಘಟನೆಯೊ0ದನ್ನು ಹುಟ್ಟು ಹಾಕಿದ ಐತಿಹಾಸಿಕ ಘಟನೆಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಸಾಕ್ಷಿಯಾಯಿತು.
ಬಸವನಿಷ್ಠ ಲಿಂಗಾಯತ ಮಠಾಧಿಪತಿಗಳು ಸಮಾಜದ ಎಲ್ಲ ಸಮಸ್ಯೆಗಳಿಗೆ ಈವರೆಗೆ ಸ್ಪಂದಿಸುತ್ತ ಬಂದಿದ್ದಾರೆ. ಅವರು ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಸೇವಾಕಾರ್ಯಗಳಿಗೆ ಇನ್ನಷ್ಟು ಒತ್ತು ನೀಡುವ ದೃಷ್ಟಿಯಿಂದ ಪ್ರಸ್ತುತ ವಿಷಯಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಡಾ. ಎಸ್. ಎಂ. ಜಾಮದಾರ, ಡಾ. ವೀರಣ್ಣ ರಾಜೂರ, ಡಾ. ಜೆ. ಎಸ್. ಪಾಟೀಲ ಹಾಗು ವಿಶ್ವಾರಾಧ್ಯ ಸತ್ಯಂಪೇಟೆ ಮುಂತಾದವರು ಬಸವಾದಿ ಶರಣರ ತತ್ತಾ÷್ವದರ್ಶಗಳು ಹಾಗು ಅವುಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸುವ ಬಗೆಯನ್ನು ವಿವರಿಸುತ್ತ ಲಿಂಗಾಯತ ಮಠಾಧಿಪತಿಗಳು ಈ ದಿಶೆಯಲ್ಲಿ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.
ಲಿಂಗಾಯತ ಧರ್ಮದಲ್ಲಿ ನೂರಾರು ಒಳಪಂಗಡಗಳಿದ್ದು, ಅವುಗಳಲ್ಲಿ ಸಾಮರಸ್ಯವನ್ನು ಸಾಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಎಲ್ಲರೂ ಒಟ್ಟಾಗಿ ಹೋರಾಡುವ ಮೂಲಕ ತಂದುಕೊAಡರೆ ಧರ್ಮದ ಅಸ್ಮಿತೆ ಹೆಚ್ಚುತ್ತದೆ. ಜಾಗತಿಕ ಮಟ್ಟದಲ್ಲಿ ಬಸವಣ್ಣನವರು ಸ್ಥಾಪಿಸಿದ ಈ ಧರ್ಮವನ್ನು ಗುರುತಿಸುವಂತಾಗುತ್ತದೆ. ಇದೂ ಅಲ್ಲದೆ ಅಲ್ಪಸಂಖ್ಯಾತ ಧರ್ಮವೆನಿಸಿಕೊಂಡರೆ ಲಿಂಗಾಯತರಿಗೆ ಶಿಕ್ಷಣ-ಉದ್ಯೋಗಗಳಲ್ಲಿ ಈಗಿರುವ ಮೀಸಲಾತಿಯ ಜೊತೆಗೆ ಇನ್ನೂ ಹೆಚ್ಚಿನ ಸೌಕರ್ಯಗಳು ದೊರೆಯುತ್ತವೆ. ಇದರಿಂದ ಲಿಂಗಾಯತ ಧರ್ಮೀಯರ ಏಕತೆ ಹಾಗು ಸಮಗ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಅಭಿವೃದ್ಧಿಯನ್ನು ಸಾಧಿಸಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸ್ವತಂತ್ರಧರ್ಮದ ಹೋರಾಟಕ್ಕೆ ಮತ್ತಷ್ಟು ಒತ್ತುಕೊಡುವ ದೃಷ್ಟಿಯಿಂದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ ಎಂದು ಗದಗ-ಡಂಬಳ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸುವುದಲ್ಲದೆ ಒಕ್ಕೂಟದ ಕಾರ್ಯ ಮತ್ತು ಧ್ಯೇಯೋದ್ದೇಶಗಳನ್ನು ಇದೇ ಸಂದರ್ಭದಲ್ಲಿ ವಿವರಿಸಿದರು. ಈ ಒಕ್ಕೂಟದ ಪ್ರಥಮ ಅಧ್ಯಕ್ಷರಾಗಿ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಅವಿರೋಧವಾಗಿ ಆಯ್ಕೆಯಾಗಿರುವುದನ್ನೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರುಗಳು, ಆನಂದಪುರAನ ಜಗದ್ಗುರು ಮಲ್ಲಿಕಾರ್ಜುನ ಸ್ವಾಮಿಗಳು, ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಮುಂತಾದ ನೂರಕ್ಕೂ ಅಧಿಕ ಶ್ರೀಗಳು ಭಾಗವಹಿಸಿದ್ದರು. ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ನೇತೃತ್ವ ವಹಿಸಿ ಸರ್ವರನ್ನೂ ಸ್ವಾಗತಿಸಿದರು. ಶೇಗುಣಸಿಯ ಮಹಾಂತದೇವರು ಕೊನೆಯಲ್ಲಿ ವಂದಿಸಿದರು.


Leave a Reply