bagalkotBallaryBelagavibidarGadaggulburgakarwar uttar kannadaKoppalStatevijayapur

ಡಬ್ಬಿ ಕಟ್ಕೊಂಡ್ ಬಂದೇವ್ರಿ …


 

ಬೆಳಗಾವಿ  : ” ಮುಂಜಾನೆ 7 ಗಂಟೆಕ ರಿಹರ್ಸಲ್ ಚಾಲು ಮಾಡೋದೈತಿ ಅಂತ್ಹೇಳಿದ್ರ ರೀ ಸರ್ ಅದಕ ಲಗೂನ ಎದ್ದ ನಾಷ್ಟಾ ಮಾಡಕ್ ಡಬ್ಬಿ ಇಲ್ಲೇ ಕಟ್ಕೊಂಡ್ ಬಂದೇವ್ರಿ ”

” ಮಧ್ಯಾಹ್ನದಾಗ ನಾವು ಯಾರೂ ಮನಿಗ್ಹೋಗುದಿಲರಿ ಅದಕ್ಕ ಊಟಾನೂ ಕಟ್ಕೊಂಡ ಬರ್ತೇವ್ರಿ ”

ಬೆಳಗಾವಿಯ  ನಾಟಕಕಾರ ಮತ್ತು ನಿರ್ದೇಶಕ ಬಾಬಾಸಾಹೇಬ ಕಾಂಬಳೆ ಅವರ ಶಿಷ್ಯರ ಮಾತುಗಳಿವು.ಬೆಳಿಗ್ಗೆ 7ಗಂಟೆಗೆ ರಿಹರ್ಸಲ್ ಶುರುವಾಗಿತ್ತು .ಒಂಥರಾ ಖುಷಿ ಆಯ್ತು ನೋಡಿಯೇ ಬರೋಣ ಅಂತ ಹೋದೆ , ನನ್ನೊಂದಿಗೆ ನಮ್ಮ ಸಿನಿಮಾದ ಹೀರೋ ಅನಿಲ್ ಮತ್ತು ಸ್ಕ್ರಿಪ್ಟ್ ರೈಟರ್ ಅಪ್ಪು ಕೂಡ ಇದ್ದರು . ಹೋಗುವಾಗ ನಾವೂ ಸಹ ಅವರೊಂದಿಗೆ ನಾಷ್ಟಾ ಮಾಡಲು ಡಬ್ಬಿ ಕಟ್ಟಿಕೊಂಡು ಹೋಗಿದ್ದೆವು ಅವರೊಂದಿಗೆ ನಾಷ್ಟಾ ಆಯಿತು , ದೂರದ ಊರಿನಿಂದ ರಿಹರ್ಸಲ್ ಗಾಗಿ ಒಬ್ಬೊಬ್ಬರಾಗಿ ಬರುತ್ತಿದ್ದರು .ಅವರವರ ಕ್ಯಾರೆಕ್ಟರ್ ಗೆ ಸಂಬಂಧಿಸಿದಂತೆ ರಿಹರ್ಸಲ್ ನಡೆದೇ ಇತ್ತು

.ತಾಸಿಗೂ ಅಧಿಕ ಕಾಲ ರಿಹರ್ಸಲ್ ನೋಡಿ ಆನಂದಿಸಿದೆ ,ಅವರಿಗೆ ಡಿಸ್ಟರ್ಬ್ ಆಗಬಾರದು ಎಂಬ ಕಾರಣಕ್ಕೆ ಅಲ್ಲಿಂದ ಹೊರಟು ಬರಬೇಕಾಯಿತು .
ಟಿವಿ ಮತ್ತು ಮೊಬೈಲ್ ನಿಂದ ಕೆಲವು ಗಂಟೆಗಳ ಕಾಲ ದೂರ ಇದ್ದು ಖುಷಿ ಖುಷಿಯಾಗಿ ನಾಟಕ ಕಲಿಯುವ ಮಕ್ಕಳೊಂದಿಗೆ ಕಳೆದೆ.

ತಿಂಗಳ ಅಂತ್ಯದಲ್ಲಿ ಬೆಳಗಾವಿಯಲ್ಲಿ ನಾಟಕ ಪ್ರದರ್ಶನವಾಗಲಿದೆ ,ನಂತರ ಧಾರವಾಡದಲ್ಲಿಯೂ ನಾಟಕ ಪ್ರದರ್ಶನವಾಗಲಿದೆ .


Leave a Reply