bagalkotBallaryBelagavibidarGadaggulburgakarwar uttar kannadaKoppalStatevijayapur

ಸರಕಾರದ ನಡೆ ವಿರುದ್ಧ ಜನಾಂದೋಲನ: ಹೊಂಗಲ್


 

ಧಾರವಾಡ: ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಿಸಲು ಸುಗ್ರೀವಾಜ್ಞೆ ಜಾರಿಗೆ ತಂದ ಸರಕಾರದ ನಡೆ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಹೇಳಿದರು.
ರವಿವಾರ ಇಲ್ಲಿನ ಥಿಂಕರ್ಸ್ ಫೋರಮ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗ್ರೀವಾಜ್ಞೆಯಿಂದ ಬರುವ ಏಪ್ರೀಲ್ 1ರಿಂದ ಬೆಂಗಳೂರನ್ನು ಬಿಟ್ಟು ಇತರೆ ಮಹಾ ನಗರ ಪಾಲಿಕೆಗಳು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಆರೇಳು ಪಟ್ಟು ಹೆಚ್ಚಾಗಲಿದೆ ಎಂದರು.
ಎಲ್ಲಾ ಕಾನೂನುಗಳ ತಿದ್ದುಪಡಿ ತರಲು ಸುಗ್ರೀವಾಜ್ಞೆ ತರುವುದಾದರೆ ಶಾಸನ ಸಭೆಗಳು ಏಕಿರಬೇಕು? ಎಂದು ಪ್ರಶ್ನಿಸಿದ ಅವರು, ಅತಿ ಜರೂರು ಸಂದರ್ಭಗಳಲ್ಲಿ ಸುಗ್ರೀವಾಜ್ಞೆಯನ್ನು ತರಲು ಅವಕಾಶ ಕಲ್ಪಿಸಿರುವ ಸಂವಿಧಾನದ 213ನೇ ವಿಧಿಯನ್ನು ಸರಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದೂ ಹೇಳಿದರು.
ಎಪಿಎಮ್ಸಿ ಕಾನೂನು ತಿದ್ದುಪಡಿಗೆ ಸುಗ್ರೀವಾಜ್ಞೆ.., ಕರ್ನಾಟಕ ಭೂಸುಧಾರಣೆ ಕಾನೂನಿಗೆ ಸುಗ್ರೀವಾಜ್ಞೆ, ಕಾರ್ಮಿಕ ಕಾಯ್ದೆಗೆ ಸುಗ್ರೀವಾಜ್ಞೆ, ಜಲ್ಲಿ ಕ್ರಶರ್ ಘಟಕಗಳ ಕಾನೂನಿಗಾಗಿ ಸುಗ್ರೀವಾಜ್ಞೆ.., ಈಗ ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್ಎಎಸ್) ಹೆಚ್ಚಳದ ಕಾನೂನಿಗೆ ಸುಗ್ರೀವಾಜ್ಞೆ ತಂದಿರುವ ನಡೆ ಹಾಸ್ಯಾಸ್ಪದವಾಗಿದೆ.
ಮಹಾ ನಗರ ಪಾಲಿಕೆಗಳು, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿದಾರರು 2021-22ನೇ ವರ್ಷದಿಂದ ಚಾಲ್ತಿ ವರ್ಷದ ಮಾರ್ಗಸೂಚಿ ದರದ ಶೇ. 25ರ ಮೊತ್ತ ಆಧಾರವಾಗಿಟ್ಟುಕೊಂಡು ತೆರಿಗೆ ಲೆಕ್ಕಾಚಾರ ಮಾಡಬೇಕೆಂಬ ನೀತಿ ತುಂಬಾ ಅಪಾಯಕಾರಿಯಾಗಿದೆ. ಇನ್ನುಮುಂದೆ ಕಟ್ಟಡವನ್ನು ಆವರಿಸಿರುವ ಖಾಲಿ ಜಾಗೆಗೂ ತೆರಿಗೆ ಹೇರಲಾಗಿದೆ. ಪ್ರತಿ ವರ್ಷವೂ ಆಸ್ತಿ ತೆರಿಗೆ ಶೇ. 3ರಿಂದ 5ರವರೆಗೆ ಹೆಚ್ಚುತ್ತದೆ. ಇದು ಅವೈಜ್ಞಾನಿಕ ಎಂದು ಅವರು ವಿವರಿಸಿದರು.
15 ವರ್ಷಗಳಿಂದ ಜಾರಿಯಲ್ಲಿರುವ ಆಸ್ತಿ ತೆರಿಗೆ ಪದ್ಧತಿ ನಗರಾಭಿವೃದ್ಧಿ, ಪೌರಾಡಳಿತ ಇಲಾಖೆಯಲ್ಲಿನ ಅಧಿಕಾರಿಗಳಿಗೇ ಇಂದಿಗೂ ಅರ್ಥವಾಗಿಲ್ಲ. ಇಂಥ ಸ್ಥಿತಿಯಲ್ಲಿ ಜನಪರ ಸಂಘಟನೆಗಳು, ಜನ ಪ್ರತಿನಿಧಿಗಳೊಂದಿಗೆ ಚರ್ಚಿಸದೇ ತೆರಿಗೆ ಹೆಚ್ಚಿಸಿ ಸುಗ್ರೀವಾಜ್ಞೆ ಜಾರಿಗೊಳಿಸಿದ್ದು ಸರಿಯಲ್ಲ ಎಂದು ಥಿಂಕರ್ಸ್ ಫೋರಮ್ನ ಅಧ್ಯಕ್ಷ ಹಾಗೂ ನ್ಯಾಯವಾದಿ ಪಾಂಡುರಂಗ ನಿರಲಕೇರಿ ತಿಳಿಸಿದರು.
ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಕಲಬುಗರ್ಿ, ವಿಜಯಪುರ ಮಹಾನಗರ ಪಾಲಿಕೆ ಮಾರ್ಗಸೂಚಿ ದರಗಳಲ್ಲಿ ವ್ಯತ್ಯಾಸಗಳಿವೆ. ಅದೇರೀತಿ ಬಾಗಲಕೋಟೆ, ರಾಣೆಬೆನ್ನೂರು, ಹರಿಹರ, ಗದಗ, ಹಾಸನದ ಮಾರ್ಗಸೂಚಿ ದರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದು ಅವೆಲ್ಲವೂ ಸರಿಯಾಗಬೇಕು ಎಂದರು.
ಪ್ರಜಾ ಪ್ರ್ರಭುತ್ವಕ್ಕೆ ಶೋಭೆಯಲ್ಲದ ಈ ಸುಗ್ರೀವಾಜ್ಞೆಯನ್ನು ಸರಕಾರ ತಕ್ಷಣವೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಜನಪರ ಸಂಘಟನೆಗಳೊಂದಿಗೆ ಚರ್ಚಿಸಿ ತೀವ್ರ ಸ್ವರೂಪದ ಹೋರಾಟಗಳನ್ನು ನಡೆಸಲಾಗುವುದು ಎಂದು ನಿರಲಕೇರಿ ತಿಳಿಸಿದರು.


Leave a Reply