Koppal

ಎಂ.ಗುಡದೂರ ಗ್ರಾಮದ ರೈತರು ಬೆಳೆದ ಕಡಲೆ ಬೆಳೆಗೆ ಬೆಂಕಿ ಹಚ್ಚಿದ ದುಶ್ಕರ್ಮಿಗಳು.


ಕುಷ್ಠಗಿ:ಕಳೆದ ಶನಿವಾರ ರಾತ್ರಿ ಎಂ ಗುಡದೂರ ಗ್ರಾಮದ ರೈತರಾದ ಗುರುಬಸಪ್ಪ ಕಂಬಳಿ ಎಂಬುವರ ಅಂದಾಜು 3 ಎಕರೆ ಜಮೀನಿನಲ್ಲಿ ಕಠಾವಿಗೆ ಬಂದಿದ್ದ ಕಡಲೆ ಬೆಳೆಯನ್ನು ರೈತ ಕಿತ್ತಿ ಒಂದು ರಾಶಿ ರೂಪದಲ್ಲಿ ಒಂದು ಹಾಕಲಾಗಿತ್ತು. ತಡರಾತ್ರಿ ಶನಿವಾರದಂದು ಯಾರೋ ದುಶ್ಕರ್ಮಿ ಗಳು ಆ ಕಡಲೆ ಬೆಳೆಗೆ ಬೆಂಕಿ ಹಚ್ಚಿ ಹಾಳುಮಾಡಿದ್ದಾರೆ.ಈಗಾಗಲೇ ಮಳೆಯನ್ನೇ ಅವಲಂಭಿಸಿದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನವೇ ರೈತನ ಪರಿಸ್ಥಿತಿ ಚಿಂತಾಜನಕವಾಗಿದೆ.ಇಂತಹ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳ ಕೃತ್ಯದಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಘಟನಾ ಸ್ಥಳಕ್ಕೆ ಬೇಟಿ ನೀಡಿದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ,ಇಂತಹ ಕೆಲಸ ಮಾಡುವವರು ಹೇಡಿಗಳು, ರೈತರ ಜಮೀನಿನಲ್ಲಿ ಈ ರೀತಿ ಮಾಡಬಾರದು. ಇದು ಅಕ್ಷಮ್ಯ ಅಪರಾಧ, ಇಂತವರಿಂದ ಗ್ರಾಮಕ್ಕೆ ಕೆಟ್ಟ ಹೆಸರು ,ಜೊತೆಗೆ ತಪ್ಪು ಮಾಡಿದ ವ್ಯಕ್ತಿ ಯಾರೇ ಆಗಲಿ ಅವನಿಗೆ ಶಿಕ್ಷೆ ಯಾಗಬೇಕು ಎಂದರು. ವೈಯಕ್ತಿಕ ವಾಗಿ 10 ಸಾವಿರ ರೂಪಾಯಿಗಳನ್ನು ನೀಡಿ ರೈತರಿಗೆ ಆತ್ಮ ಸ್ಥೈರ್ಯ ತುಂಬಿದರು. ಇದರ ಜೊತೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವದು ಎಂದರು .ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು, ಗ್ರಾಮಸ್ಥರು ಉಪಸ್ಥಿತರಿದ್ದರು.


Leave a Reply