Belagavi

ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ


ಬೆಳಗಾವಿ-೨೫ – ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎನ್ನುವುದು ಸರಳವಾದ ಸಹಜವಾದ ಸಂಗತಿ. ಈ ಹಿನ್ನಲೆಯಲ್ಲ ಕರ್ನಾಟಕ ಸರ್ಕಾರವು ನವೆಂಬರ್ ೧ ೨೦೨೦ ರಿಂದ ಅಕ್ಟೋಬರ್ ೩೧ ೨೦೨೧ ರ ವರೆಗಿನ ಅವಧಿಯನ್ನು ‘ಕನ್ನಡ ಕಾಯಕ ವರ್ಷ’ ಎಂದು ಕರೆದದ್ದು ಅದರ ಅನುಷ್ಠಾನ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಹಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕನ್ನಡ ಜಾಗೃತಿ ಮತ್ತು ಮಹಾನಗರ ಕನ್ನಡ ಜಾಗೃತ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಇದೇ ದಿ. ೨೬ ಮಂಗಳವಾರದಿAದ ಮೂರು ದಿನಗಳ ಕಾಲ ಕೇಂದ್ರ, ರಾಜ್ಯ ಸರ್ಕಾರ ಕಚೇರಿ, ಸಂಘ ಸಂಸ್ಥಗಳು ಅಲ್ಲದೇ ಅಂಗಡಿ ಮುಗ್ಗಟ್ಟುಗಳ ಮುಂಬಾಗದಲ್ಲಿ ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಡಾ. ಅರವಿಂದ ಕುಲಕರ್ಣಿ ಇಂದು ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಸಾಹಿತ್ಯ ಭವನದಲ್ಲಿ ಕರೆಯಲಾಗಿದದ್ದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ದಿ. ೨೬ ಮಂಗಳವಾರದAದು ಮುಂಜಾನೆ ೧೦-೩೦ ಗಂಟೆಗೆ ಟಿಳಕವಾಡಿಯ ಆರ್.ಪಿ.ಡಿ. ರಸ್ತೆಯ ಅಂಗಡಿಗಳ ೧೧.೩೦ ಕ್ಕೆ ಸಂಭಾಜಿ ಚೌಕ ೧೨.೩೦ ಕ್ಕೆ ರಾಮದೇವ ಹೊಟೇಲ ಮುಂದೆ ಕನ್ನಡ ಜಾಗೃತಿ ಅಭಿಯಾನ ಅಂಗವಾಗಿ ಭಿತ್ತಿ ಪ್ರದರ್ಶನ ಮಾಡಲಾಗುವುದು. ದಿ. ೨೭ ಬುಧವಾರದಂದು ೧೦-೩೦ ಕ್ಕೆ ಕ್ಲಬ್‌ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರಿ ಕಚೇರಿಗಳಲ್ಲಿ ೧೨ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಉಳಿದ ಕಚೇರಿ ಎದುರು ಹಾಗೂ ದಿ. ೨೮ ಗುರುವಾರದಂದು ಮುಂಜಾನೆ ೧೦-೩೦ ಕ್ಕೆ ಟಿಳಕವಾಡಿ ಸಮೀಪ ಕೇಂದ್ರ ಸರ್ಕಾರ ಕಚೇರಿಗಳ ಮುಂದೆ ೧೨ ಕ್ಕೆ ಕೇಂದ್ರೀಯ ವಿದ್ಯಾಲಯಗಳ ಮುಂದೆ ಕನ್ನಡ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಕನ್ನಡ ನಾಡು ನುಡಿಗಾಗಿ ದುಡಿದ ಮಹನಿಯರನ್ನು ನೆನಪಿಸುವ ಹಾಗೂ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡಬೇಕಾದುದು ಇಂದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಹೆಸರಿಲ್ಲದ ರಸ್ತೆಗಳಿಗೆ, ಹೊಸ ಬಡಾವಣೆಗಳು, ವೃತ್ತಗಳು, ಉದ್ಯಾನಗಳಿಗೆ ಕನ್ನಡ ನಾಮಾಂಕಿತ ಕವಿಗಳು, ಚಿಂತಕರು ಹಾಗೂ ಸ್ಥಳಿಯ ಮಹತ್ವದ ವ್ಯಕ್ತಿಗಳ ಹೆಸರುಗಳನ್ನಿಡುವ ಅವಶ್ಯಕತೆಗಳಿದ್ದು ಶುದ್ಧ ಕನ್ನಡ ನಾಮಫಲಕ ಅಭಿಯಾನ ಹಮ್ಮಿಕೊಂಡಿದ್ದು ಪಟ್ಟಣಗಳ ಕನ್ನಡಿಕರಣಕ್ಕಾಗಿ ಹಾಗೂ ಕನ್ನಡ ಎಲ್ಲಲ್ಲಿಯೂ ಕಣ್ಣಿಗೆ ಕಾಣುವಂತೆ ಮಾಡುವ ಯೋಜನೆಯನ್ನು ಹೊಂದಿದೆ. ಉದ್ಯಾನವನಗಳಲ್ಲಿ ನಗರದ ವಿವಿಧ ಸೂಕ್ತ ಸ್ಥಳಗಳಲ್ಲಿ ಕನ್ನಡ ಕವಿಗಳ ಉಕ್ತಿಗಳನ್ನು ಹಾಗೂ ಚಿತ್ರಗಳನ್ನು ಬಿಡಿಸಬಹುದಾಗಿದೆ.
ದೀಪಿಕಾ ಚಾಟೆ, ಡಾ. ಎಚ್.ಐ ತಿಮ್ಮಾಪೂರ ಮಾತನಾಡಿದರು. ಡಾ. ನಿರ್ಮಲಾ ಬಟ್ಟಲ, ಜ್ಯೋತಿ ಬದಾಮಿ, ಡಾ, ಜಗದಿಶ ಹಾರುಗೊಪ್ಪ, ಶ್ರೀ ರಂಗ ಜೋಶಿ, ಆರ್. ಬಿ. ಕಟ್ಟಿ, ಸುನಂದ ಎಮ್ಮಿ, ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Leave a Reply