Belagavi

ಶಾಲಾ ಸುಧಾರಣಾ ಕಾಮಗಾರಿಗೆ ಚಾಲನೆ


ಬೆಳಗಾವಿ ೨೫: ದಿ ೨೫. ರ ಸೋಮವಾರದಂದು ನಗರದಲ್ಲಿನ ಬಾಂದುರ ಗಲ್ಲಿಯಲ್ಲಿನ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ನಂ.೭ ರ ಶಾಲಾ ಸುಧಾರಣಾ ಕಾಮಗಾರಿಯನ್ನು ಕೈಗೊಳ್ಳಲು ಶಾಸಕ ಅನಿಲ ಬೆನಕೆರವರು ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃಧ್ದಿ ನಿದಿಯಡಿಯಲ್ಲಿ ಬಾಂದುರ ಗಲ್ಲಿಯಲ್ಲಿನ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ನಂ. ೭ ರ ಶಾಲಾ ಸುಧಾರಣೆ ಕಾಮಗಾರಿಯನ್ನು ಕೈಗೊಳ್ಳಲು ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಶಾಲೆಯ ಮುಖ್ಯೋಪಾದ್ಯಾಯರು, ಸಿಬ್ಬಂದಿ ವರ್ಗ, ಶಾಲಾ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರಾದ ವಿಕಾಸ ಗಾಂದಿ ಇತರರು ಉಪಸ್ಥಿತರಿದ್ದರು.


Leave a Reply