ಯರಗಟ್ಟಿ ನಗರಕ್ಕೆ ಬೇಟಿನೀಡಿದ ಮಾಜಿ ಸಚಿವ ಸತೀಶ ಜಾರಕಿಹೋಳಿ

ಯರಗಟ್ಟಿ: ಸ್ಥಳೀಯ ಯರಗಟ್ಟಿಯ ಪ್ರವಾಸಿ ಮಂದಿದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪೂರ್ವ ಭಾವಿ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೋಳಿ ಗ್ರಾಮ ಪಂಚಾಯಿತ ಚುನಾವಣೆಯಲ್ಲಿ ಜೈಯಶಾಲಿಯಾದ ಅಭ್ಯರ್ಥಿಗಳಿಗೆ ಅಭಿನಂದನೆಸಲ್ಲಿಸಿದರು ಹಾಗೂ ಮುಂಬರುವ ಲೋಕಸಭಾ ಉಪ ಚುನಾವಣೆ ಮತ್ತು ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆಯ ಪೂರ್ವ ಸಿದ್ಧತೆಯ ಕುರಿತು ಮಾತನಾಡಿದರು ಹಾಗೂ ರೈತ ಮಸೂದೆಯಿಂದ ರೈತರಿಗೆ ಅನ್ಯಾಯ ವಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಚನಗೌಡ್ರ ದ್ಯಾಮನಗೌಡ, ಕಾಂಗ್ರೆಸ್ ಮುಖಂಡರಾದ ವಿಶ್ವಾಸ ವೈದ್ಯ, ಶಿವಾನಂದ ಕರಿಗೋಣ್ಣವರ, ರವಿಂದ್ರ ಯಲಿಗಾರ, ಮಲಿಕ ಬಾಗವಾನ, ಪಂಚಪ್ಪ ಮಲ್ಲಾಡ, ಬಂಗಾರೆಪ್ಪ ಹರಳಿ, ಈರಣ್ಣಾ ಸಂಗಪ್ಪನವರ, ಮಂಜುನಾಥ ತಡಸಲೂರ, ಮಲ್ಲು ಜಕಾತಿ, ಅಲ್ತಾಪ ಮುಲ್ಲಾ, ಸೌರಭ ಚೋಪ್ರಾ, ಪ್ರಜ್ವಲ ಗೌಡರ, ಯಶಂವತ ಯಲಿಗಾರ ಹಾಗೂ ಸುತ್ತಮುತ್ತಲಿನ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)