Belagavi

ಮೂರನೇ ವರ್ಷದ ವಾಲ್ಮೀಕಿ ಮಹರ್ಷಿ ಜಾತ್ರೆಯ ಪೂರ್ವಭಾವಿ ಸಭೆ


ಯರಗಟ್ಟಿ: ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ರಾಜನಹಳ್ಳಿ ಯಲ್ಲಿ ಜರಗುವ ಮೂರನೇ ವರ್ಷದ ವಾಲ್ಮೀಕಿ ಮಹರ್ಷಿ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ ನಿವೃತ್ತ ನ್ಯಾಯಮೂರ್ತಿ ಯಾದ ಮೋಹನದಾಸ ಆಯೋಗ ವರದಿಯಂತೆ ನಾಯಕ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಬೇಕು ಎಂದು ವರದಿ ಕೊಟ್ಟಿದೆ ಆದರೆ ಸರಕಾರಗಳು ಇನ್ನೂ ಮೀಸಲಾತಿ ಬಗ್ಗೆ ಯೋಚಿಸುತ್ತಿಲ್ಲ ಆದ್ದರಿಂದ ನಮ್ಮ ಹಕ್ಕು ಪಡೆದುಕೊಳ್ಳುವ ಸಲುವಾಗಿ ವಾಲ್ಮೀಕಿ ನಾಯಕ ಸಮಾಜದವರು ಮುಂದಿನ ತಿಂಗಳು ಐತಿಹಾಸಿಕವಾಗಿ ಜರುಗುವ 8,9ನೇ ತಾರೀಕಿನಂದು ಮೂರನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಹೋರಾಟ ಮಾಡೋಣ ಎಂದು ಹೇಳಿದರು ಇದಕ್ಕಿಂತ ಮುಂಚೆ ಭರ್ಜರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ರಥದಲ್ಲಿ ಮೆರವಣಿಗೆ ಮಾಡಲಾಯಿತು ಮೆರವಣಿಗೆಯಲ್ಲಿ ಅನೇಕ ವಾದ್ಯವೃಂದಗಳ ಡೊಳ್ಳು ಭಜನೆ ಸುಮಂಗಲಿಯರಿಂದ ಆರತಿ, ಕುಂಭಮೇಳ, ಗ್ರಾಮದ ಪ್ರಮುಖ ಬೀದಿಗಳಲ್ಲಿಸಂಚರಿಸಿ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿರುವ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗ್ರಾಮದೇವಿ ದೇವಸ್ಥಾನದ ಅವರಣದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು ನೂತನವಾಗಿ ಗ್ರಾಮಪಂಚಾಯಿತಿಗೆ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಲಾಯಿತು ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು ಡಾಕ್ಟರ್ ಶಂಕರಲಿಂಗಪ್ಪ ಅಂಗಡಿ ಈರಣ್ಣ ಚಳ ಕೊಪ್ಪ, ಯರಗಟ್ಟಿ ತಾಲೂಕ ವಾಲ್ಮೀಕಿ ಜಾತ್ರಾ ಕಮಿಟಿಯ ಅಧ್ಯಕ್ಷರಾದ ಎಸ್ ಎಸ್ ನಾಯ್ಕ ರ,ಗ್ರಾಮದ ಹಿರಿಯರಾದ ಬಸವರಾಜ್ ಮುತ್ತನ್ನವರ್,ಪಕೀರಪ್ಪ ಲಿಂಗರೆಡ್ಡಿ ಪ್ರಕಾಶ್ ಮುರುಗೋಡ್,ಪರಶುರಾಮ್ ಸಿಂಗಣ್ಣವರ್,ಸಿದ್ದಪ್ಪ ದಾಸಪ್ಪನವರ,ಸದಾಶಿವ ದಾಸಪ್ಪನವರ,ಪ್ರಕಾಶ್ ಲಿಂಗಾರೆಡ್ಡಿ ಸುರೇಶ್ ಮುರುಗೋಡ,ಸಿದ್ದಪ್ಪಾಜಿ ಶಂಕರ್ ದಳವಾಯಿ, ರಾಘವೇಂದ್ರಪೂಜೇರಿ, ಹೇಮಂತ್ ಗೋಪಾಳಿ ಮತ್ತು ಯರಗಟ್ಟಿ ತಾಲೂಕಿನ ಸಮಸ್ತ ವಾಲ್ಮೀಕಿ ನಾಯಕ ಜನಾಂಗದ ಬಾಂಧವರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply