bagalkotBallaryBelagavibidarGadaggulburgakarwar uttar kannadaKoppalStatevijayapur

ಬೆಳಗಾವಿ- ನಾಸಿಕ ವಿಮಾನ ಯಾನ ಪ್ರಾರಂಭ


ಬೆಳಗಾವಿ- ನಾಸಿಕ್ ನಡುವೆ ನೇರ ವಿಮಾನ ಯಾನ ಇಂದಿನಿಂದ ಆರಂಭವಾಗಿದೆ .  ಸ್ಟಾರ್ ಏರ್ ಜ.25ರಿಂದ  ಬೆಳಗಾವಿ- ನಾಸಿಕ್ ನಡುವೆ ನೇರ ವಿಮಾನ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಜಿಸಿದೆ ಎಂದು ಸ್ಟಾರ್ ಏರ್ ನ ನಿರ್ದೇಶಕ  ಶ್ರೇಣಿಕ್ ಘೋಡಾವತ್ ಹೇಳಿದರು.

 ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ಇನ್ನು ಅನೇಕ ಪ್ರಾದೇಶಿಕ ಪ್ರದೇಶಗಳನ್ನು ಗಮನಿಸಿ ಬೇರೆ ಬೇರೆ ಶಾಲೆಗಳ ನಡುವೆ ವಿಮಾನಗಳ ಹಾರಾಟವನ್ನು  ಪ್ರಾರಂಭಿಸಲಾಗುವುದು.  ಎರಡು ವರ್ಷಗಳ ಹಿಂದೆ  ತನ್ನ ಮೊದಲ ವಾಣಿಜ್ಯ ಹಾರಾಟವನ್ನು ನಡೆಸಿತು.ಆರಂಭದಲ್ಲಿ 1ಹೆಲಿಕಾಪ್ಟರ್ ನಂತರ ಅದು 3ಹೆಲಿಕ್ಯಾಪ್ಟರ್ಗೆ ವಿಸ್ತರಿಸಲ್ಪಟ್ಟಿತು .2017 ಕೇಂದ್ರ ಸರ್ಕಾರ ಹೊಸ ನೀತಿಯನ್ನು ಪ್ರಕಟಿಸಿದೆ ಅದರನ್ವಯ ವಿಮಾನ ಕಂಪನಿಗಳಿಗೆ ಅನುಕೂಲ ಆಗುತ್ತದೆ .ಹೀಗಾಗಿ ವಿಮಾನ ಸೇವೆಯನ್ನು ವಿಸ್ತರಿಸಲು ಕಂಪನಿ ಯೋಚಿಸಿತ್ತು ಆರ್ ಸಿಎಸ್ ಉಡಾನ್ ಯೋಜನೆಯ ಅಡಿ ಎರಡನೇ ಶ್ರೇಣಿಯ ಮತ್ತು ಮೂರನೇ ಶ್ರೇಣಿಯ ನಗರಗಳನ್ನು ಸಂಪರ್ಕಿಸಲು ಕಂಪನಿ ಯೋಜಿಸಿದೆ  ಎಂದರು 

ಗ್ರಾಹಕರನ್ನು ಸೆಳೆಯಲು ನಾವು ರಿಯಾಯತಿ ದರಗಳನ್ನು ಕೂಡ ಪ್ರಕಟಿಸಿದ್ದೇವೆ. ಶೀಘ್ರದಲ್ಲೇ ಜೋಧಪುರ ಗೆ ಕೂಡ ಹಾರಾಟ ನಡೆಸಲಿದ್ದೇವೆ.

ಈಗಾಗಲೇ ‌ ಅಹಮದಾಬಾದ್ ಅರ್ ( ಕಿಶನ್‌ಗಢ ) , ಬೆಳಗಾವಿ , ಬೆಂಗಳೂರು , ದೆಹಲಿ ( ಹಿಂಡನ್ ) ಹುಬ್ಬಳ್ಳಿ , ತಿರುಪತಿ ಇಂದೋರ್ , ಕಲಬುರಗಿ , ಮುಂಬೈ ಮತ್ತು ಸೂರತ್ ಸೇರಿದಂತೆ 13 ಸ್ಮಳಗಳಿಗೆ 26 ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತದೆ , ಸ್ವಾರ್‌ ಏರ್‌ ತನ್ನ ಮೊದಲ ಹಾರಾಟದಿಂದ ಸುಮಾರು 1.6 ಲಕ್ಷ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ .

ಪ್ರಮುಖ ಯಾತ್ರಾ ಸ್ಥಳವಾಗಿರುವ ಶಿರಡಿಗೆ ನಾಸಿಕ್ ವಿಮಾನ ನಿಲ್ದಾಣ ಹತ್ತಿರವಾಗುತ್ತದೆ ಹೀಗಾಗಿ ಬೆಳಗಾವಿ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಲಕ್ಷಾಂತರ ಪ್ರವಾಸಿಗರು ಶಿರಡಿಗೆ ಪ್ರಯಾಣಿಸುತ್ತಿರುತ್ತಾರೆ ಅವರನ್ನು ಆಕರ್ಷಿಸಲು ಬೆಳಗಾವಿ ನಾಸಿಕ್ ವಿಮಾನಯಾನ ಇದು ಉತ್ತಮ ಮಾರ್ಗ ವಾಗುತ್ತದೆ ಎಂದರು .

ಕೋವಿಡ-19 ಮಾರ್ಗಸೂಚಿ ಗಳಿಂದಾಗಿ ವಿಮಾನಗಳಲ್ಲಿ  ಬರ್ತಡೇ ಸೆಲೆಬ್ರೇಷನ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ,ಮುಂದಿನ ದಿನಗಳಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ಮತ್ತೆ ಪುನರಾರಂಭಿಸಲಾಗುತ್ತದೆ ಎಂದರು  ಸ್ಟಾರ್ ಏರ್ ನ ಸಿಇಒ ಸಿಮ್ರನ್ ಸಿಂಗ್ ತಿವಾನಾ ಸೇರಿದಂತೆ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು .


Leave a Reply