
ಶಾಸಕರ ವಾರ್ಡ್ ನಲ್ಲಿ ತಿಂಗಳುಗಳಿ೦ದ ಹರಿಯುತ್ತದೆ ಡ್ರೈನೇಜ್ ಮಾಲಿನ್ಯ.!! ,ಬಳ್ಳಾರಿ.(25) ಕಡ್ಲೆ ಇದ್ದರೆ,ಹಲ್ಲುಗಳು ಇಲ್ಲದಂತೆ, ಹಲ್ಲುಗಳು ಇದ್ದರೆ ಕಡ್ಲೆ ಇಲ್ಲದಂತೆ “ಗಾದೆ”ಮಾತು ಅಗಿದೆ. ಬಳ್ಳಾರಿ ಅಂದ್ರೆ ಗಣಿ ನಾಡು ಇಲ್ಲಿ ಯಾವುದೇ ಸಾರ್ವಜನಿಕರ ಸಮಸ್ಯಗಳು,ಇಲ್ಲ ಎಂದು ಜನರ ಮನೋಭಾವ ಅಗಿದೆ. ಆದರೆ ಇಲ್ಲಿ ಎಲ್ಲವು ವಿರುದ್ಧ,ವಾಗಿದೆ. ನಗರದ ಯಾವುದೆ ವಾರ್ಡ್ ನೋಡಿದರೂ ಒಂದಲ್ಲಾ ಒಂದು ಸಮಸ್ಯೆ ಇದೆ. ಇಲ್ಲಿನ ಜನ ಪ್ರತಿನಿಧಿಗಳ,ಅಧಿಕಾರಿಗಳ ಪೂಣ್ಯದಿ೦ದ ವಾರ್ಡ್ ಗಳಲ್ಲಿ ಡ್ರೈನೆಜ್(ಒಳಚರಂಡಿ) ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ.ಪ್ರತಿ ವಾರ್ಡ್ ಗಳಲ್ಲಿ ಮಲಮೂತ್ರಗಳು ನಡು ರಸ್ತೆಯಲ್ಲಿ ಹರಿಯುತ್ತಿವೆ. ಇನ್ನೂ ಕೆಲ ಕಡೆ ಕುಡಿಯುವ ನೀರಿನಲ್ಲಿ ಮಿಶ್ರಿತ ಆಗುತ್ತವೆ,ಇಲ್ಲಿನ ಪಾಲಿಕೆ ಅಧಿಕಾರಿಗಳು ಇದ್ದೂ ಇಲ್ಲದಂತೆ ಅಗಿದ್ದಾರೆ.
ಇನ್ನೊಂದು ಗಂಭೀರ ಸಂಗತಿ ಎಂದರೆ ಬಳ್ಳಾರಿಗೆ ಬರುವ ಕುಡಿಯುವ ನೀರು 60 ಕಿಲೊಮೀಟರ್ ದೂರದ ಹೊಸಪೇಟೆ ತುಂಗಭದ್ರಾ ಕಾಲುವೆದಿಂದ ಬರಬೇಕು. ಅಲ್ಲಿಂದ ಇಲ್ಲಿಯವರೆಗೆ ಕಾಲುವೆ ಮೇಲೆ ಅಕ್ರಮವಾಗಿ ನಿರ್ಮಾಣ ಮಾಡಿಕೊಂಡ ಬಡವರು ಬಹುತೇಕರು ಬಾತರೂಮ್ ಪೈಪ್ ಲೈನ್ ಗಳನ್ನು ಕಾಲುವೆಗೆ ಬಿಟ್ಟಿದ್ದಾರೆ . ಇನ್ನು ತಿಪ್ಪೆಗುಂಡಿಗಳು,ಜಾನುವಾರು ಗಳು, ಕಟ್ಟುತ್ತಾರೆ, ಅವುಗಳ ಮಲಮೂತ್ರ ನೇರವಾಗಿ ಕಾಲುವೆಗೆ ಸೇರ್ಪಡೆಯಾಗುತ್ತದೆ ಇಂತಹ ನೀರನ್ನು ಎಷ್ಟರ ಮಟ್ಟಿಗೆ ಫಿಲ್ಟರ್ ಮಾಡಿ ಪಾಲಿಕೆ ಜನರಿಗೆ ಸರಬರಾಜು ಮಾಡುತ್ತದೆ ಏಂದು ಸಾರ್ವಜನಿಕರು ವಿಚಾರ ಮಾಡಬೇಕಾಗಿದೆ .
ಶುದ್ದೀಕರಣ ಘಟಕಗಳನ್ನು ನೋಡಿದರೆ ಜನರು ಯಾರೂ ಪಾಲಿಕೆ ನೀರು ಕುಡಿಯಲು ಸಾಧ್ಯವಾಗದು. ನಗರದಲ್ಲಿ ಶಾಸಕರು ವಾಸಿಸುವ ಸ್ಥಳ ಸ್ವಲ್ಪ ದೂರದಲ್ಲಿ ಹವಂಬಾವಿ ಅಶೋಕ್ನ ನಗರ ಇದೆ.ಅಲ್ಲಿಯೇ HLC ಕಾಲುವೆ ಇದೆ ಅಲ್ಲಿನ ಕಾಲುವೆ ಮೇಲೆ ನಿವಾಸಿಗಳು ಇದ್ದಾರೆ ಇಲ್ಲಿ ಒಂದು ಒಳಚರಂಡಿ ಓಪನ್ ಅಗಿ 8 ತಿಂಳಗಳು ಕಳೆದರೂ ಯಾರೂ ತಲೆಕೆಡಿಸಿಕೊಂಡಿಲ್ಲ ಮತ್ತು ಏನೂ ಮಾಡಲು ಸಾಧ್ಯವಾಗಿಲ್ಲ. ಇಲ್ಲಿ ಹರಿಯುವ ಮಾಲಿನ್ಯ ನೇರವಾಗಿ ಕಾಲುವಗೆ ಹೋಗುತ್ತದೆ.ಅಲ್ಲಿಯೆ ಮಕ್ಕಳು ಸ್ನಾನ, ಮಾಡುತ್ತಾರೆ ಬಟ್ಟೆ ಒಗೆಯುತ್ತಾರೆ ಪಾತ್ರೆಗಳನ್ನು, ಕ್ಲಿನ್ ಮಾಡುತ್ತಾರೆ. ಅಲ್ಲಿನ ಜನರು ಸಚಿವ ಶ್ರೀ ರಾಮುಲು ಗೆ ಹೇಳಿದರೂ ಪ್ರಯೋಜನವಾಗಿಲ್ಲ ಏಂದು ಬೇಸರ ವ್ಯಕ್ತಪಡಿಸಿದರು. ಅನಾರೋಗ್ಯ ದಿಂದ ಸಾಯುತ್ತಾಇದ್ದಿವಿ.ಏಂದು ಆಕ್ರೋಶ ವ್ಯಕ್ತಪಡಿಸಿದರು.
(ಕೆ.ಬಜಾರಪ್ಪ ವರದಿಗಾರರು,ಬಳ್ಳಾರಿ)