BallaryKoppal

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಬದಲಾವಣೆಗೆ ಆಗ್ರಹ


 

ಬಳ್ಳಾರಿ, ಜ.೨೫: ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು. ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ.
ಕನ್ನಡ ಸಾಹಿತ್ಯ ಲೋಕದ ದಿಗ್ಗಜರು, ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ, ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩ ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು, ಕವಿ ಗೋಷ್ಠಿಗಳು, ಸಂವಾದಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ. ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ ೨೬, ೨೭, ೨೮ ರಂದು ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವುದು ಬಹಳ ಸಂತೋಷಕರವಾದ ವಿಷಯ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾಕ್ಟರ್ ದೊಡ್ಡರಂಗೇಗೌಡ ರವರು ಹಿಂದಿ ಭಾಷೆಯ ಪ್ರಸ್ತಾಪ ಮಾಡುತ್ತಾ, ಇಂಗ್ಲಿಷ್ ಭಾಷೆಗೆ ವ್ಯಾಮೋಹವನ್ನು ಇಟ್ಟುಕೊಂಡಿರುವ ಕನ್ನಡಿಗರು ಹಿಂದಿ ಭಾಷೆಯನ್ನು ಏಕೆ ವಿರೋಧಿಸಬೇಕು ಎಂಬುದಾಗಿ ಮತ್ತು ಭಾರತದ ರಾಷ್ಟ್ರ ಭಾಷೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಕನ್ನಡ ವಿರೋಧಿ ನೀತಿಯನ್ನು ತೋರಿಸುತ್ತದೆ. ಆದುದರಿಂದ ಕನ್ನಡದ ಪರವಾಗಿ ಬದ್ಧತೆ ಇಲ್ಲದಿರುವ ಅನ್ಯಭಾಷೆಗಳನ್ನು ಸಮ್ಮೇಳನದ ಅಧ್ಯಕ್ಷರಾಗಿರುವುದು ಉಚಿತವಲ್ಲ, ಅಲ್ಲದೇ ರಾಜ್ಯದ ಮೇಲೆ ಹಿಂದಿ ಹೇರಿಕೆಯ ಬಗ್ಗೆ ಹಲವಾರು ದಶಕಗಳಿಂದ ಕನ್ನಡಪರ ಹೋರಾಟಗಾರರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಿಂದಿ ವಿರೋಧವನ್ನು ವ್ಯಕ್ತಪಡಿಸುತ್ತಾ, ಬೃಹತ್ ಹೋರಾಟಗಳನ್ನು ಹಮ್ಮಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ.
ಇತ್ತೀಚೆಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಸ್ಥಾಪನೆಯ ಶಿಲಾನ್ಯಾಸದಲ್ಲಿ ಕನ್ನಡ ಮಾಯವಾಗಿದ್ದು, ಹಿಂದಿ ಹೇರಿಕೆಯನ್ನು ರಾಜ್ಯದ ಮೇಲೆ ಹೇರಲಾಗಿದೆ. ಇದನ್ನು ವಿರೋಧಿಸಿ, ರಾಜ್ಯಾದ್ಯಂತ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿರುವು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಈ ನಿಟ್ಟಿನಲ್ಲಿ ೮೬ನೇ ಅಖಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಇವರನ್ನು ಕೂಡಲೇ ಬದಲಾಯಿಸಬೇಕೆಂದು ಕರ್ನಾಟಕ ಜನಸೈನ್ಯ ಆಗ್ರಹಿಸುತ್ತದೆ.
ಒಂದು ವೇಳೆ ಈ ವಿಷಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ನಿರ್ಲಕ್ಷö್ಯ ವಹಿಸಿದ ಸಂದರ್ಭದಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆಯ ವಿವಿಧ ಜಿಲ್ಲೆಯ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಸಮ್ಮೇಳನದ ದಿನದಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲಾಗುವುದು, ಇದೆಲ್ಲದಕ್ಕೂ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ದೊಡ್ಡರಂಗೇಗೌಡರು ಸಾರ್ವಜನಿಕರಿಗೆ ಉತ್ತರ ನೀಡಲೇಬೇಕು.
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ನಡೆಯುತ್ತಿರುವುದರಿಂದ ಸರ್ವಜ್ಞ, ಕನಕದಾಸ ಹಾಗೂ ಇತರೆ ಸಂತರ ಜನಿಸಿ ಜಿಲ್ಲೆಯಾಗಿರುವುದರಿಂದ ಅಲ್ಲದೇ ವಿಶೇಷವಾಗಿ ಫೆಬ್ರವರಿ ೨೦ರಂದು ಸರ್ವಜ್ಞರ ಜನ್ಮದಿನ ಇರುವುದರಿಂದ ಕರ್ನಾಟಕದ ಹೆಸರಾಂತ ಜಾನಪದ ಸಂತ ಕವಿ ತ್ರಿಪದಿಬ್ರಹ್ಮ ಎಂದೇ ಹೆಸರಾಗಿರುವ ಸರ್ವಜ್ಞರ ಹೆಸರನ್ನು ಜಿಲ್ಲೆಯಲ್ಲಿ ನಡೆಯುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ದ್ವಾರ ಹಾಗೂ ವೇದಿಕೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಈ ಮೂಲಕ ಒತ್ತಾಯಿತ್ತಾಯ ಮಾಡಿದರು. ನಗರದ ಪತ್ರಕಾಭವನದ ಗೋಷ್ಠಿ ನಲ್ಲಿ ಜನಸೇನೆಸಂಸ್ಥಾಪಕ ರಾಜ್ಯಅಧ್ಯಕ್ಷರು ಏರ್ರಿಸ್ವಾಮಿ.ಮಾತನಾಡಿದರು
ಈ ಸಂದರ್ಭದಲ್ಲಿ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಚೆಂಚಯ್ಯ ಉತ್ತರ ಕರ್ನಾಟಕ ಉಪಾಧ್ಯಕ್ಷರಾದ ಫಯಾಜ್ ಭಾಷಾ ಮಂಜುನಾಥ್ ರಾಘವೇಂದ್ರ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.


Leave a Reply