bagalkotBallaryBelagavibidarGadaggulburgaKarnatakakarwar uttar kannadaKoppalvijayapur

12 ಲಕ್ಷ ಮೌಲ್ಯದ 1040 ಚೀಲ ರೇಷನ್ ಅಕ್ಕಿ ವಶ

ಬೆಳಗಾವಿ  : ಅಕ್ರಮವಾಗಿ ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ 12 ಲಕ್ಷ ಮೌಲ್ಯದ ತಲಾ 50ಕೆಜಿಯ 1040 ಚೀಲ ರೇಷನ್ ಅಕ್ಕಿ, ಎರಡು ಲಾರಿ, 4 ಮೋಬೈಲ್ ಪೋನ್‍ಗಳನ್ನು ಕಿತ್ತೂರು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಕಿತ್ತೂರು ಪೋಲಿಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಹಾವೇರಿಯಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯ ಲಾರಿಗಳನ್ನು ಕಿತ್ತೂರು ಗಜರಾಜ ಪ್ಯಾಲೇಸ್ ಎದುರಿಗೆ ರಾಷ್ಟ್ರಿಯ ಹೆದ್ದಾರಿ 4 ರಲ್ಲಿ ವಶಕ್ಕೆ ಪಡೆದು, ಚಾಲಕರು ಹಾಗೂ ಕ್ಲೀನರ್‍ಗಳನ್ನು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕವಲೂರಿನ ಸಂತೋಷ ಅಶೋಕ ಕಾಮೋಜಿ (21), ಮಹೇಶ ಶರಣಯ್ಯ ಕುರವತ್ತಿಮಠ (20), ಸವದತ್ತಿ ತಾಲೂಕಿನ ಕಗರಾಳ ಗ್ರಾಮದ ಬುಡಾನ್‍ಸಾಬ ಅಗಸರ(24), ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದ ಸುಲೇಮಾನ್ ಅಗಸರ(20) ಬಂಧಿತರು. ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿ ಜಾಲದ ಹಿಂದಿರುವ ಮತ್ತೊಬ್ಬ ಆರೋಪಿ  ಬಂಧನಕ್ಕೆ ಕಿತ್ತೂರು ಪೋಲಿಸರು ಜಾಲ ಬೀಸಿದ್ದಾರೆ.ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker