Koppal

ಕುಷ್ಟಗಿ ಸೋಲಾರ್ ಘಟಕದಿಂದ 72ನೇ ಗಣರಾಜ್ಯೋತ್ಸವ ಆಚರಣೆ


ಕುಷ್ಟಗಿ: ಸೋಲಾರ್ ಘಟಕದಲ್ಲಿ ಇಂದು 72ನೇ ಗಣರಾಜ್ಯೋತ್ಸವ ಆಚರಣೆಯನ್ನು ಆಚರಿಸಲಾಯಿತು
ಧ್ವಜಾರೋಹಣವನ್ನು ದಿನೇಶ್ ಚಹರ್ ರವರು ಮಾಡಿದರು.ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಪೆನ್, ನೋಟ್ ಬುಕ್, ವಿತರಣೆ ಮಾಡಿದರು.ಸೆಕ್ಯುರಿಟಿ ಸುಪರ್ ವೈಜರ್ ಬಸನಗೌಡ ರವರು ಧ್ವಜಾರೋಹಣ ಕ್ಕೆ ದಿನೇಶ್ ಚಾಹರ್ ರವರನ್ನು ಗೌರವದಿಂದ ಬರಮಾಡಿ ಕೊಂಡರು.ಈ ಒಂದು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಗುಮಗೇರಾ ಗ್ರಾಮ ಪಂಚಾಯತಿ ಸದಸ್ಯರು, ಹಿರೇಮನ್ನಾಪುರ ಗ್ರಾಮದ ಮುಖಂಡರು ಸೋಲಾರ್ ಘಟಕದ ಎಲ್ಲಾ ಹಿರಿಯ,ಕಿರಯ ಸಿಬ್ಬಂದಿಗಳು, ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಕುಷ್ಠಗಿ ಸೋಲಾರ್ ಘಟಕದ ಮಂಜುನಾಥ ವಂದನೆಗಳನ್ನು ಸಲ್ಲಿಸಿದರು.


Leave a Reply