Belagavi

ಕರೊನಾ ಹಿನ್ನೆಲೆ ಸರಳ ಗಣರಾಜ್ಯೋತ್ಸವ : ತಹಶೀಲ್ದಾರ ಗುಂಡಪ್ಪಗೊಳ


ಯರಗಟ್ಟಿ: ಕರೊನಾ ರೋಗದ ಹಿನ್ನೆಲೆ ಸರಕಾರದ ಆದೇಶದಂತೆ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳ ಮತ್ತು ಸಾರ್ವಜನಿಕ ಸಭೆ ಕರೆದು ಅದ್ಧೂರಿಯಾಗಿ ತಹಶೀಲ್ದಾರ ಕಾರ್ಯಲಯದಿಂದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಎಲ್ಲಾ ಶರಣರ ಹಾಗೂ ದೇಶಕ್ಕಾಗಿ ಶ್ರಮಿಸಿ ದೇಶಭಕ್ತರ ಜಯಂತಿಯನ್ನುಆರಿಸಲಾಗುವುದು ಎಂದು ತಹಶೀಲ್ದಾರ ಎಮ್. ವಿ. ಗುಂಡಪ್ಪಗೊಳ ಹೇಳಿದರು.
ಯರಗಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ 72ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಯರಗಟ್ಟಿ ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತಕುಮಾರ ದೇಸಾಯಿ, ಯರಝರ್ವಿ ಜಿಲ್ಲಾ ಪಂಚಾಯತ ಸದಸ್ಯರಾದ ವಿದ್ಯಾರಾಣಿ ಸೊನ್ನದ, ಉಪ ತಹಶೀಲ್ದಾರರಾದ ಎಸ್. ಜಿ. ದೊಡ್ಡಮನಿ, ಕಂದಾಯ ನಿರೀಕ್ಷಕರಾದ ವಾಯ್. ಎಫ್. ಮೂರ್ತನ್ನವರ, ನಿವೃತ್ತ ತಹಶೀಲ್ದಾರರಾ ಬಿ. ಬಿ. ತಳವಾರ, ಗ್ರಾಮ ಲೇಕ್ಕಾಧಿಕಾರಿಗಳಾದ ಎಲ್. ಬಿ. ದಳವಾಯಿ, ದಾನೇಶ್ವರಿ ಮಠ, ವಕೀಲರಾದ ಆಯ್. ಬಿ. ಗೌಡರ, ಎ.ಪಿ.ಎಮ್.ಸಿ. ಸಿಬ್ಬಂದಿಯಾದ ಹನಮಂತ ಗೋರಾಬಾಳ, ಗಂಗಪ್ಪ ಹೂಲಿಕಟ್ಟಿ, ಗ್ರಾಮ ಸಹಾಯಕರಾ ಮಡಿವಾಳಪ್ಪ ವನ್ನೂರ ಹಾಗೂ ಇನ್ನಿತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply