State

ಶುದ್ಧ ಕನ್ನಡ ನಾಮಫಲಕ ಅಭಿಯಾನ


ಮೈಸೂರು : ಕರ್ನಾಟಕ ಸರ್ಕಾರವು ಘೋಷಿಸಿರುವ ಕನ್ನಡ ಕಾಯಕ ವರ್ಷ ದ ಅನುಷ್ಠಾನಕ್ಕಾಗಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ‌.ಎಸ್ ನಾಗಾಭರಣ ಅವರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಮೈಸೂರು ಉಸ್ತುವಾರಿ ಡಾ‌.ಗುಬ್ಬಿಗೂಡು ರಮೇಶ್ ಅವರ ಕರೆಯ ಮೇಲೆ ಗಣರಾಜ್ಯೋತ್ಸವದಂದು ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನದ ಸಲುವಾಗಿ ಇಂದು
ನಗರಪಾಲಿಕೆ ವಲಯ ಕಚೇರಿ ೬ ರಿಗೆ ಸೇರಿರುವ ದೇವರಾಜ ಅರಸು ರಸ್ತೆ , ಶಿವರಾಂ ಪೇಟೆ , ಕೊತ್ವಾಲ್ ರಾಮಯ್ಯ ರಸ್ತೆಯ ಸುತ್ತ ಮುತ್ತ ವಾಣಿಜ್ಯ ಮಳಿಗೆಗಳ ಅಂಗಡಿ ಮುಂಗಟ್ಟಿನ ನಾಮಫಲಕ ಜಾಗೃತಿ ಹಕ್ಕೊತ್ತಾಯ ಮಾಡಿ ಸರ್ಕಾರದ ನಡಾವಳಿ ಪ್ರಕಾರ ನಾಮಫಲಕಗಳಲ್ಲಿ ಶೇಕಡ ೬೦% ಕನ್ನಡ ಬಳಕೆ ಇಲ್ಲದ ೩೦ ಅಂಗಡಿಗಳಿಗೆ ಭೇಟಿ ನೀಡಿ ಮಾಲೀಕರಿಗೆ ಹಕ್ಕೊತ್ತಾಯ ಮಾಡಿ ಅಂಗಡಿಗಳ ನಾಮಫಲಕ ಪರಿಶೀಲನೆ ಮಾಡಲಾಯಿತು.
ಭೇಟಿ ನೀಡಿದ ದಿನದಿಂದ ಒಂದು ತಿಂಗಳು ಸಮಯಾವಕಾಶ ನೀಡಿ ನಂತರವೂ ನಾಮಫಲಕಗಳು ಬದಲಾವಣೆ ಆಗದಿದ್ದಲ್ಲಿ ವಲಯ ಕಚೇರಿಯ ಆಯುಕ್ತರು ಸೂಕ್ತ ಕ್ರಮ ತೆಗೆದುಕೊಳ್ಳವ ಬಗ್ಗೆ ಕನ್ನಡ ಜಾಗೃತಿ ಸಮಿತಿ ವತಿಯಿಂದ ಲಿಖಿತವಾಗಿ ನೀಡಲಾಗುತ್ತದೆ ನಂತರ ನಗರ ಪಾಲಿಕೆ ಕ್ರಮ ತೆಗೆದುಕೊಳ್ಳುತ್ತದೆ .

ಕನ್ನಡಕ್ಕೆ ಅಗ್ರ ಸ್ಥಾನ ನೀಡದ ಅಂಗಡಿಗಳೇ ಹೆಚ್ಚಾಗಿ ಕಂಡು ಬಂದಿತು ಹಾಗೂ ಗ್ರಾಹಕರಿಗೆ ನೀಡುವ ರಶೀದಿಗಳಲ್ಲೂ ಕನ್ನಡ ಬಳಕೆ ಇಲ್ಲದಿರುವುದು ಕಂಡು ಬಂತು ಮತ್ತು ಮೋರ್ ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿದಾಗ ಅಲ್ಲಿ ಕೂಡ ಒಳಗೆ ಇರುವ ಪದಾರ್ಥಗಳ ದರ ಹಾಗೂ ಕೊಡುಗೆಗಳಿರುವ ನಾಮಫಲಕಗಳಲ್ಲಿ ಹಾಗೂ ರಶೀದಿಗಳಲ್ಲಿ ಕನ್ನಡ ಬಳಕೆ ಇಲ್ಲದಿರುವುದು ಹಾಗೂ ಗ್ರಾಹಕರಿಗೆ ವಸ್ತುಗಳ ಬಗ್ಗೆ ಪ್ರತಿ ಕ್ಷಣ ನೀಡುವ ಕೊಡುಗೆಗಳ ಮಾಹಿತಿಗಳ ಘೋಷಣೆ ಕೂಡ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ನೀಡುತ್ತಿದ್ದು ಸಂಪೂರ್ಣ ಕನ್ನಡ ಕಡೆಗಣನೆ ಮಾಡಿ ಪೂರ್ಣ ಅಂಗ್ಲ ಭಾಷೆಯ ಬಳಕೆ ಹೆಚ್ಚಾಗಿತ್ತು ಇದನ್ನು ಮೋರ್
ಸೂಪರ್ ಮಾರುಕಟ್ಟೆಯ ವ್ಯವಸ್ಥಾಪಕರಿಗೆ ತಿಳಿಸಿ ಒಂದು ತಿಂಗಳ ಕಾಲಾವಕಾಶ ನೀಡಿ ಬರಲಾಯಿತು.

ಈ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ವೈ.ಡಿ ರಾಜಣ್ಣ ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಎಸ್ ನಾಗರಾಜ್ , ಅರವಿಂದ್ ಶರ್ಮ , ಸಾತನೂರು ದೇವರಾಜ್ , ಎನ್.ಜಿ ಗಿರೀಶ್, ಡಾ. ಸೌಗಂಧಿಕಾ . ವಿ. ಜೋಯಿಸ್ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಭೇರ್ಯ ರಾಮಕುಮಾರ್ ಮತ್ತು ಮೈಸೂರು ನಗರ ಪಾಲಿಕೆ ವತಿಯಿಂದ
ವಲಯ ಕಛೇರಿ ೬ ರ ಕಂದಾಯ ಅಧಿಕಾರಿ, ಆಶಾ , ಎ.ಇ.ಇ ಮೃತ್ಯುಂಜಯ , ಎ.ಅರ್.ಓ ಸಿದ್ದರಾಜು , ಅರೋಗ್ಯ ಪರಿವೀಕ್ಷಕರು ರಾಜೇಶ್ವರಿ , ಕಂದಾಯ ಪರಿಶೀಲಕರು ಯೋಗೇಂದ್ರ , ಆಶಾ , ರೇಣುಕ ಮಂಜುಳ ಅವರುಗಳು ಉಪಸ್ಥಿತರಿದ್ದರು.


Leave a Reply