Belagavi

ಸಾರ್ವಜನಿಕ ಧ್ವಜಾರೋಹಣ ನೇರವೆರಿಸಿ ಜಿಲ್ಲಾ ಪಂಚಾಯತ ಸದಸ್ಯ ಅಜೀತಕುಮಾರ ದೇಸಾಯಿ

ಯರಗಟ್ಟಿ: ಸ್ಥಳೀಯ ಯರಗಟ್ಟಿಯ ಶ್ರೀಮಠದ ಹತ್ತಿರ ಆಯೋಜಿಸಿದ ಸಾರ್ವಜನಿಕ ಧ್ವಜಾರೋಹಣವನ್ನು ಯರಗಟ್ಟಿ ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತಕುಮಾರ ದೇಸಾಯಿ ನೇರವೆರಿಸಿದು.

ಧ್ವಜಾರೋಹಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಪಿ. ಎಚ್. ಪಾಟೀಲ ಇದು ಗಾಂಧಿಯಂತಹ ಮಹಾತ್ಮರು ನಡೆದಾಡಿದ ನೆಲ. ಅದಕ್ಕೂ ಪೂರ್ವದಲ್ಲಿ ಚನ್ನಮ್ಮ, ರಾಯಣ್ಣರು ಸ್ವಾಭಿಮಾನಕ್ಕಾಗಿ ಆತ್ಮ ಸಮರ್ಪಣೆ ಮಾಡಿಕೊಂಡ ನೆಲ. ಮಧ್ಯಯುಗದ ಚರಿತ್ರೆಯಲ್ಲಿ ಶರಣರು ನಡೆದಾಡಿದ ವೀರ ತಪೋಭೂಮಿಯಿದು. ಇಂತಹ ಉತ್ಕøಷ್ಟ ಜನ್ಮಭೂಮಿ ಬೆಳಗಾವಿಯದು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ.

1950 ರ ಜನವರಿ 26 ರಂದು ನಮ್ಮ ದೇಶವು ಗಣರಾಜ್ಯವಾಯಿತು. ಸಂವಿಧಾನವನ್ನು ವಿಧಿಬದ್ಧವಾಗಿ ಒಪ್ಪಿಕೊಂಡ ಈ ದಿನ ಭಾರತೀಯರೆಲ್ಲರಿಗೂ ಹೆಮ್ಮೆಯ ದಿನವಾಗಿದೆ. ನಮಗೆಲ್ಲರಿಗೂ ಸಾರ್ವಭೌಮ ಅಧಿಕಾರ ಕಲ್ಪಿಸಿಕೊಟ್ಟ ಮಹತ್ವದ ದಿನ ಇದಾಗಿದೆ.

ಡಾ. ಬಿ.ಆರ್.ಅಂಬೇಡ್ಕರ್ ಅವರಂಥಹ ಮಹಾನ್ ಮಾನವತಾವಾದಿಗಳು ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಹಗಲಿರುಳೆನ್ನದೆ ಚಿಂತಿಸಿ, ರಚಿಸಿದ ಭವ್ಯಭಾರತದ ಸತ್ಸಂಕಲ್ಪವಿದಾಗಿದೆ. ಗಣತಂತ್ರ ಭಾರತವು ಭಾರತದ ಪ್ರತಿ ಪ್ರಜೆಗೂ ಪರಮಾಧಿಕಾರವನ್ನು ಘೋಷಿಸಿದೆ. ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ನೀಡುವುದರ ಮೂಲಕ ಮೂಲಭೂತ ಹಕ್ಕುಗಳನ್ನು ದಯಪಾಲಿಸಿದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ತಾ.ಪಂ. ಸದಸ್ಯರಾದ ಮಂಜುಳಾ ಕರಿಗೋಣ್ಣವರ, ಪಂಚಾಯತ ಅಭಿವೃದ್ಧಿಅಧಿಕಾಯಾದ ಎಂ. ಆರ್. ಹಾರುಗೋಪ್ಪ, ಮಾಜಿ ಗ್ರಾ. ಪಂ. ಅಧ್ಯಕ್ಷರಾದ ಕಸ್ತೂರಿ ಕಡೇಮನಿ, ಮಾಜಿ ತಾ. ಪಂ. ಸದಸ್ಯರಾದ ರಾಜೇಂದ್ರ ವಾಲಿ, ಮಾಜಿ ಗ್ರಾ. ಪಂ. ಸದಸ್ಯರಾದ ಸದಾನಂದ ಹಣಬರ, ಎ.ಎಸ್. ಆಯ್. ಎಂ. ಪಿ. ನಂದೇರ, ಗ್ರಾ. ಪಂ. ಸಿಬ್ಬಂದಿಯಾದ ಎಸ್. ಎಸ್. ತಾಳಿಕೋಟಿ, ಎಂ. ಎಚ್. ಶೀಕ್ಕಲಗಿ, ಎ. ಎಂ. ಇಟಗೌಡರ, ಪಿ. ಎಂ. ಹಿರೇಮಠ ಮತ್ತು ಪ್ರೌಢ ಶಾಲಾ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಸಿಬ್ಬಂದಿ ವರ್ಗ,ಯರಗಟ್ಟಿ ನಗರದ ಸಾರ್ವಜನಿಕ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker