Belagavi

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಣರಾಜ್ಯೋತ್ಸವ ಆಚರಣೆ


ಯರಗಟ್ಟಿ : ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಡಾ. ಬಿ. ಎಸ್. ಬಳ್ಳೂರ ಮುಖ್ಯ ವೈದ್ಯಾಧಿಕಾರಿಗಳು ಧ್ವಜಾರೋಹಣವನ್ನು ನೆರವೇರಿಸಿದರು. ಸದರಿ ಕಾರ್ಯಕ್ರಮ ದಲ್ಲಿ ಡಾ.ಸ್ವರೂಪಾ ಬಿರಾದಾರ, ಡಾ.ರಮಾಶ್ರೀ
ಕಣಗಲಿ, ಡಾ.ಮೇಘಾ ಪಾಟೀಲ,
ಶ್ರೀ ವಿ. ಎಸ್. ಅರಬಳ್ಳಿ, ಶ್ರೀ ದೇವಿ ಹಾವನ್ನವರ, ರುದ್ರಗೌಡ ಪಾಟೀಲ, ರಜನಿಕಾಂತ ಬಾಳಿಗಡ್ಡಿ, ವಿ. ಎಸ್. ಬಿಜಾಪೂರ ಮೋಯಿನು, ವಾಯ್. ಕೆ. ಜಾಂಬೋಟಿ, ಮಹಾಂತೇಶ ಕತ್ತಿ, ಮಂಜು ಸಿಂಗನ್ನವರ, ದೀಪಾ ಪಾಟೀಲ, ಪ್ರಕಾಶ ಮಾಂಗ, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಹಾಜರಿದ್ದರು.
ನಮ್ಮ ಭಾರತದೇಶ ಸಂಪದ್ಭರಿತ ವಾಗಿತ್ತು. ಪರಕೀಯರ ಆಳ್ವಿಕೆಯಿಂದ ಅದೆಲ್ಲ ಕೊಳ್ಳೆ ಹೊಡಿಯಲ್ಪಟ್ಟಿತು..1947 ರಿಂದ ಸ್ವಾತಂತ್ರ್ಯ ಸಿಕ್ಕ ನಂತರ ಲಿಖಿತ ರೂಪದ ಸಂವಿಧಾನ ಇರಲಿಲ್ಲ.
ಅದನ್ನು ಡಾ.ಬಿ.ಆರ್.ಅಂಬೇಡ್ಕರ್ ಲಿಖಿತರೂಪದಲ್ಲಿ ತಯಾರಿಸಿ ದೊಡ್ಡ ಕೊಡುಗೆ ನೀಡಿದರು ಪ್ರಾಸ್ತಾವಿಕ ವಾಗಿ ಮಾತನಾಡಿ ದ ಸುನಿಲ ಕಾಶನ್ನವರ ಹೇಳಿದರು.

ಭಾರತ ಸಂವಿಧಾನ ಸ್ವಾತಂತ್ರ್ಯ ಪೂರ್ವ ದಲ್ಲಿ ಲಿಖಿತ ರೂಪದಲ್ಲಿ ಇರಲಿಲ್ಲ.
ಡಾ.ಅಂಬೇಡ್ಕರ್ ರವರು 60 ದೇಶಗಳನ್ನು ಸುತ್ತಿ 2ವರ್ಷ 11ತಿಂಗಳ ನಂತರ ಲಿಖಿತ ರೂಪದಲ್ಲಿ ಜಗತ್ತಿಗೆ ಮಾದರಿ ಸಂವಿಧಾನ ನೀಡಿದರು.
ಇದರಲ್ಲಿ ಸಮಾನತೆ.ಸರಳತೆ.ಏಕತೆ.ಇದೆ.ಸರ್ವರೂ ಸಮಾನ ರಾಗಿದ್ದು ಅವರಿಗಾಗಿ ಹಕ್ಕು ಮತ್ತು ಕರ್ತವ್ಯ ಗಳಿವೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಆಯ್. ಆರ್. ಗಂಜಿ ಹೇಳಿದರು.
ಪ್ರಜೆಗಳಿಂದ ಪ್ರಜೆಗಳಿಗೊಸ್ಕರ ಪ್ರಜೆಗಳಿಗಾಗಿ ಇರುವ ಲಿಖಿತ ರೂಪದಲ್ಲಿ ಇರುವ ಸಂವಿಧಾನದ ಬಗ್ಗೆ ತಿಳಿದುಕೊಂಡು. ಅದನ್ನು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿ ಕೊಳ್ಳಬೇಕೆಂದು ಹಿರಿಯ ಪಾರ್ಮಸಿ ಅಧಿಕಾರಿಗಳಾದಶ್ರೀ ವಿ. ಎಸ್. ಅರಬಳ್ಳಿ ಹೇಳಿದರು. ಮಾಂತೇಶ ಹಿರೇಮಠ ನಿರೂಪಣೆ ಮಾಡಿ, ಎಂ. ಟಿ. ಕುಂಬಾರ, ಸ್ವಾಗತಿಸಿ
ಸರಸ್ವತಿ ಬಾಲನ್ನವರ ವಂದಿಸಿದರು
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply