Belagavi

ಸಂಗೊಳ್ಳಿ ರಾಯಣ್ಣ ಹಾಗೂ ಶ್ರೀ ಭಕ್ತ ಕನಕದಾಸರ ಮೂರ್ತಿ ಉದ್ಘಾಟನಾ ಸಮಾರಂಭ


ರಾಮದುರ್ಗ : 72ನೇ ಗಣರಾಜ್ಯೋತ್ಸವ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆಯ ಅಂಗವಾಗಿ ಇಂದು ರಾಮದುರ್ಗ ತಾಲ್ಲೂಕಿನ ಮುದೇನೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಶ್ರೀ ಭಕ್ತ ಕನಕದಾಸ ರ ಮೂರ್ತಿ ಅನಾವರಣಗೊಳಿಸಲಾಯಿತು.

ಖ್ಯಾತ‌ ಉದ್ಯಮಿ ಸಮಾಜ ಸೇವಕ ಮಹಾದಾನಿಗಳಾದ ಚಿಕ್ಕ ರೇವಣ್ಣನವರನ್ನು ಮುದೇನೂರ ಗ್ರಾಮದ ಗ್ರಾಮಸ್ಥರು ಹಾಗೂ ಡೊಳ್ಳಿನ ಮೇಳದವರು ಸಕಲ ವಾದ್ಯ ಮೇಳಗಳಿಂದ ಚಿಕ್ಕ ರೇವಣ್ಣ ನವರಿಗೆ ಭವ್ಯ ಸ್ವಾಗತ ಕೋರಿದರು.

ಖ್ಯಾತ‌ ಉದ್ಯಮಿ ಸಮಾಜ ಸೇವಕ ಮಹಾದಾನಿಗಳಾದ ಚಿಕ್ಕ ರೇವಣ್ಣನವರು ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸರ ಮೂರ್ತಿ ಉದ್ಘಾಟನೆ ಮಾಡಿ ನಂತರ 72 ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡಿ ಧ್ವಜ ವಂದನೆ ಸಲ್ಲಿಸಿದರು.

ನಂತರ ಮುದೇನೂರ ಗ್ರಾಮದ ಬಿರಲಿಂಗೇಶ್ವರ ದೇವಸ್ಥಾನದ ಸಮುದಾಯದ ಭವನದಲ್ಲಿ ಆಯೋಜಿದ ಮೂರ್ತಿ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ
ಖ್ಯಾತ‌ ಉದ್ಯಮಿ ಸಮಾಜ ಸೇವಕ ಮಹಾದಾನಿಗಳಾದ ಚಿಕ್ಕ ರೇವಣ್ಣನವರ ಸಮಾರಂಭವನ್ನು ನಿರ್ವಹಿಸಿದರು.

(ವರದಿ ಈರಣ್ಣಾ ಹುಲ್ಲೂರ)


Leave a Reply