vijayapur

ಜನವರಿ ೩೧ ರಂದು ೧೪ ಮತ್ತು ೧೭ ವಯೋಮಿತಿ ಬಾಲಕ ಹಾಗೂ ಬಾಲಕಿಯರ ಪುಟ್ಬಾಲ್ ಆಯ್ಕೆ ಟ್ರಯಲ್ಸ್


ವಿಜಯಪುರ ೨೭: ಕರ್ನಾಟಕ ರಾಜ್ಯ ಪುಟ್ಬಾಲ್ ಸಂಸ್ಥೆ ಬೆಂಗಳೂರು ಹಾಗೂ ದಿ.
ವಿಜಯಪುರ ಜಿಲ್ಲಾ ಪುಟ್ಬಾಲ್ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ
ದಿನಾಂಕ ೩೧-೦೧-೨೦೨೧ ರಂದು ೧೪ ಮತ್ತು ೧೭ ವರ್ಷ ವಯೋವಿತಿ ಹೊಂದಿರುವ ಬಾಲಕ
ಹಾಗೂ ಬಾಲಕಿಯರ ಪುಟ್ಬಾಲ್ ಆಯ್ಕೆ ಟ್ರಯಲ್ಸ್ನ್ನು ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್
ಪದವಿಪೂರ್ವ ಕಾಲೇಜು ಪುಟ್ಬಾಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತ ಕ್ರೀಡಾಪಟುಗಳು ದಿನಾಂಕ ೨೮-೦೧-೨೦೨೧ರ ಒಳಗಾಗಿ ತಮ್ಮ ಹೆಸರನ್ನು
ನೊಂದಾಯಿಸಿಕೊಳ್ಳಬಹುದಾಗಿದೆ ೧೪ ವರ್ಷದ ಬಾಲಕ ಹಾಗೂ ಬಾಲಕಿಯರ ೧ನೆ ಜನವರಿ
೨೦೦೬ರಂತೆ ಹಾಗೂ ೧೭ ವರ್ಷದ ಬಾಲಕ ಬಾಲಕಿಯರು ೧ನೇ ಜನವರಿ ೨೦೦೩ ರಂತೆ
ವಯೋಮಿತಿ ಹೊಂದಿರಬೇಕು. ಜನನ ಪ್ರಮಾಣ ಪತ್ರ ಹಾಗೂ ಆಧಾರ ಕಾರ್ಡ್ ಝರಾಕ್ಸ್
ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ವಿಜಯಪುರ ಜಿಲ್ಲಾ ಪುಟ್ಬಾಲ್
ಅಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷರಾದ ಗುರುಪಾದಯ್ಯ ( ಗುರು)
ಗಚ್ಚಿನಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಮೋ ಸಂಖ್ಯೆ:
೯೮೪೫೦೦೭೩೪೨ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply