Belagavi

ಕಾರ್ಯಕರ್ತರು ಸಮಾಜದ ಶಕ್ತಿ- ಸಚಿವ ರಮೇಶ ಜಾರಕೀಹೊಳಿ


ಅಂಕಲಗಿ. ೨೭.  –  ದೇಶಾಭಿವೃದ್ಧಿ ಸದಾ ನಮ್ಮ ಮನಸ್ಥಿತಿ ಯಾಗಿರಬೇಕು. ಎಲ್ಲದಕ್ಕೂ ನಮಗೆ ರಕ್ಷಣೆ ಕೊಟ್ಟಿರುವ ದೇಶ ಅತ್ಯಂತ ಹಿರಿದು. ಕಾರ್ಯಕರ್ತರು ಸಮಾಜದ ಮತ್ತು ಪಕ್ಷದ  ಅತೀ ದೊಡ್ಡ ಶಕ್ತಿ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕೀಹೊಳಿ ಹೇಳಿದರು. ಅವರು ಮಂಗಳವಾರ ಬೆಳಗಾವಿ ಸರ್ಕಿಟ್ ಹೌಸ್ ನಲ್ಲಿ ಅಂಕಲಗಿ ಕುಂದರನಾಡ ಜನತಾ ಶಿಕ್ಷಣ ಸಂಸ್ಥೆಗೆ ನೂತನ ನಿರ್ದೇಶಕರಾಗಿ ಆಯ್ಕೆಗೊಂಡ
ಗುಜನಾಳ ದ ಅಡಿವೆಪ್ಪಾ ನಾವಲಗಟ್ಟಿ ಮತ್ತು ಉದ್ಯಮಿ ಶಂಕರ ಭೂಸಣ್ಣವರ ಅವರಿಂದ ಸನ್ಮಾನ ಪಡೆದು ಮಾತನಾಡಿದರು.
ಕ್ಷೇತ್ರದಲ್ಲಿಯ ಅಭಿವೃದ್ಧಿಗೆ ಕಾರ್ಯಕರ್ತ ರ ಮತ್ತು ಪಕ್ಷ ನಿಷ್ಠರ ಶ್ರಮ  ಮತ್ತು ಕೊಡುಗೆ ನಿಜಕ್ಕೂ ಶ್ಲ್ಯಾಘನೀಯ.
ಕ್ಷೇತ್ರದಲ್ಲಿಯ ಪ್ರತಿಯೊಂದು ಸಮಾಜದ ಕುಂದು,ಕೊರತೆಗಳನ್ನು ಅರಿತು ಅವುಗಳ ಇತ್ಯರ್ಥಕ್ಕೆ ಶ್ರಮ ಪಡಬೇಕು, ಸಮಾಜ ಸೇವೆ ಪ್ರತಿಯೊಬ್ಬರ ಉಸಿರಾಗಬೇಕು. ಅಂದಾಗ ಅಂಥಹ ಕಾರ್ಯಕರ್ತರು ಸಮಾಜದ ಪ್ರಶಂಸೆಗೆ ಪಾತ್ರರಾಗುವರು.  ಸಮಾಜ ಪ್ರತಿಯೊಬ್ಬರ ನಡೆ,ನುಡಿಗಳನ್ನು ಸದಾ ಗಮನಿಸುತ್ತಿರುತ್ತದೆ  ಕಾರ್ಯಕರ್ತರು ಇದನ್ನು ಅರಿತಿರಬೇಕು ಎಂದರು.  ಈ ಸಂದರ್ಭದಲ್ಲಿ ಕೆ.ಜೆ.ಎಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಭೀಮಗೌಡ ಪೋಲಿಸಗೌಡರ   ನಿರ್ದೇಶಕ ಬಸವರಾಜ ಪಟ್ಟಣಶೆಟ್ಟಿ,  ಗೋಕಾಕ ಬಿ.ಜೆ.ಪಿ.ಮಂಡಳ ಅಧ್ಯಕ್ಷ ನ್ಯಾಯವಾದಿ ರಾಜೇಂದ್ರ ಗೌಡಪ್ಪಗೋಳ,  ಮುನ್ನಾ ಗಣಾಚಾರಿ, ವಿರುಪಾಕ್ಷಿ ಅಂಗಡಿ ಸೇರಿದಂತೆ ಅಭಿಮಾನಿಗಳು, ಕಾರ್ಯಕರ್ತರು ಉಪಸ್ತಿತರಿದ್ದರು.

Leave a Reply