Koppal

ಇಟಗಿ ಉತ್ಸವದ ಅಂಗವಾಗಿ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ


ಕೊಪ್ಪಳ, ಜ. ೨೫: ಇಂದಿನ ಮಕ್ಕಳೇ ನಾಳಿನ ನಾಗರೀಕರು ಎಂಬ
ಮಾತನ್ನು ಸದಾ ನಾವೆಲ್ಲರು ಕೇಳುತ್ತಿರುತ್ತೇವೆ. ಆದರೆ, ಅದು
ತಪ್ಪಾದ ಸಂದೇಶ ಈ ದೇಶದಲ್ಲಿ ಜನಿಸಿದ, ಪ್ರತಿ ಒಂದು ಮಗು ಕೂಡ
ಭಾರತೀಯ ನಾಗರೀಕರೆ ಆಗಿರುತ್ತಾರೆ ಎಂದು ೧೦ನೇ ಮಕ್ಕಳ
ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷೆ ಸಾಹಿತ್ಯ ಎಂ. ಗೊಂಡಬಾಳ
ಹೇಳಿದರು.
ಅವರು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಇಟಗಿ ಮಹಾದೇವ
ದೇವಾಲಯದ ನೆನಪಿನಲ್ಲಿ ನಡೆಯುವ ಇಟಗಿ ಉತ್ಸವದ ಅಂಗವಾಗಿ
ಕೊಪ್ಪಳದ ಸಾಹಿತ್ಯ ಭವನದಲ್ಲಿ ಜರುಗಿದ ೧೦ನೇ ಮಕ್ಕಳ
ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷತೆಯ ಭಾಷಣದಲ್ಲಿ ಹಲವು
ವಿಷಯಗಳನ್ನು ಪ್ರಸ್ತಾಪ ಮಾಡಿ ಜನರ ಗಮನ ಸೆಳೆದರು.
ನನ್ನ ಸಣ್ಣ ಪ್ರತಿಭೆಯನ್ನು ಗುರುತಿಸಿ ದೊಡ್ಡ ಜವಾಬ್ದಾರಿ
ಕೊಟ್ಟ ಸಂಘಟಕರಾದ ಮಹೇಶಬಾಬು ಸುರ್ವೆ, ಎಲ್ಲಾ ಮುಖ್ಯಸ್ಥರಿಗೆ
ನಾನು ಆಭಾರಿಯಾಗಿದ್ದೇನೆ. ಕಳೆದ ೧೦ ವರ್ಷಗಳಿಂದ ಇಂತಹ
ಸಮ್ಮೇಳನ ಯುನಜನರಿಗೆ ಹಾಗೂ ವಿಶೇಷವಾಗಿ ಮಕ್ಕಳಿಗೆ ತಮ್ಮ
ಪ್ರತಿಭೆಯನ್ನು ಗುರುತಿಸಿಕೊಳ್ಳಲು ವೇದಿಕೆ ನಿರ್ಮಾಣ
ಮಾಡಿಕೊಟ್ಟಿರುವುದಕ್ಕೆ ಅವರಿಗೆ ಅಭಿನಂದನೀಯ
ಶುಭಾಶಯಗಳು.
ಪ್ರತಿ ಒಂದು ಕುಟುಂಬದಲ್ಲಿ ಪ್ರತಿ ಒಂದ ಮಗು ಕೂಡ
ಒಂದಲ್ಲಾ ಒಂದು ಪ್ರತಿಭೆ ಹೊಂದಿರುತ್ತೆ. ಅದನ್ನು ಗುರುತಿಸಿ
ತಂದೆ ತಾಯಿ ಪ್ರೋತ್ಸಾಹಿಸಿ ಅವರನ್ನು ಮುಂದೆ ತರಬೇಕಾಗಿದೆ. ಆ
ನಿಟ್ಟಿನಲ್ಲಿ ನಮಗೆಲ್ಲಾ ಇಂತಹ ವೇದಿಕೆಗಳು
ಅನುಕೂಲವಾಗುತ್ತವೆ. ನಾನು ಕೂಡ ಕಳೆದ ಎರಡು
ವರ್ಷಗಳಿಂದ ವಿವಿಧ ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ, ನನ್ನ
ಕುಟುಂಬದವರು ಪ್ರೋತ್ಸಾಹಿಸಿದರು ಅದಕ್ಕೆ ಬೆಳೆಯಲು
ಕಾರಣವಾಗಿದೆ.
ಈ ಸಮಯದಲ್ಲಿ ನಾವು ಓದುತ್ತಿರುವ ಶಾಲೆಯಲ್ಲಿ ಸಾಂಸ್ಕೃತಿಕ
ಚಟುವಟಿಕೆಗಳಿಗೆ ಸಮಯವೇ ಇಲ್ಲದಾಗಿದೆ. ಹಾಗಾಗಿ ಕುಟುಂಬ, ಶಾಲೆ,
ಸಮಾಜ ನಾವೆಲ್ಲರು ಸೇರಿ ಸಾಹಿತ್ಯ, ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಪರಿಸರ ಯುನಿಕೋಡ್ ಗೆ ಬದಲಾವಣೆಗೊಂಡ ಪಠ್ಯ..
ಉಳಿಸಲು ಪ್ರಯತ್ನ ಪಡಬೇಕು ಎಂಬುದು ನನ್ನ ಒತ್ತಾಯ.
ಇಂತಹ ಸಾಂಸ್ಕೃತಿಕ ಸಮ್ಮೇಳನ ನಿರ್ಮಾಣ ಮಾಡಬೇಕು. ನಮ್ಮ
ವಿದ್ಯಾಭ್ಯಾಸದೊಂದಿಗೆ ಸಾಂಸಕೃತಿಕ ಚಟುವಟಿಕೆಗಳು ನಮ್ಮನ್ನು
ಬೌದ್ಧಿಕ ಮತ್ತು ಮಾನಸಿಕವಾಗಿ ಸದೃಢ ಮಾಡುತ್ತವೆ.
ದೇಶದ ಭವಿಷ್ಯ ಇರುವುದು ವಯಸಿನಲ್ಲಿ ಅಲ್ಲಾ ಬದಲಾಗಿ
ಪ್ರತಿಭೆಯಲ್ಲಿ. ವಿಶ್ವ ಭಾರತವನ್ನು ಗಮನಿಸುವುದು ಇಲ್ಲಿನ
ಕಲೆ, ಸಾಹಿತ್ಯ, ಸಾಂಸ್ಕೃತಿಕ, ಐತಿಹಾಸಿಕ ಸ್ಮಾರಕ, ಗುರುಕುಲ
ವ್ಯವಸ್ಥೆ, ಕೌಟುಂಬಿಕ ಸಂಸ್ಕಾರ ಹಾಗೂ ವೈವಿದ್ಯಮಯ ಆಹಾರ
ಪದ್ದತಿ, ಧಾರ್ಮಿಕ ಆಚರಣೆ, ಉಡುಗೆ, ತೊಡುಗೆ ಹಾಗೂ
ಭಾಷೆಗಳು.
ಪ್ರಸ್ತುತ ಶಾಲಾ ಶಿಕ್ಷಣದ ಮಾದರಿ ನಮ್ಮ ಸಾಮರ್ಥ್ಯವನ್ನು
ಬಲಪಡಿಸುವ ಬದಲಾಗಿ ಕೇವಲ ನಿರ್ಧಿಷ್ಟವಾದ ವಿಷಯಗಳನ್ನು
ಕಲಿಸುತ್ತಿದೆ. ದೇಶಕ್ಕೆ ತುರ್ತಾಗಿ ಗುರುಕುಲ ಮಾದರಿಯ ಶಿಕ್ಷಣಕ್ಕೆ
ಬದಲಾಗುವ ಅಗತ್ಯವಿದೆ ಎಂಬುದು ನನ್ನ ಅಭಿಪ್ರಾಯ. ಶಾಲಾ
ಅವಧಿಯ ೬ ಗಂಟೆಯಲ್ಲಿ ಕನಿಷ್ಠ ೨ ಗಂಟೆಯನ್ನು ಪಠ್ಯೇತರ
ಚಟುವಟಿಕೆಗಳಾದ ಕಲೆ, ಕ್ರೀಡೆ ಹಾಗೂ ಮಾನಸಿಕ
ಸಾಮರ್ಥ್ಯವನ್ನು ಕಲಿಸುವ ಪಾಠಗಳು ಇರಬೇಕು ಜೊತೆಗೆ
ಅವುಗಳಿಗೆ ಅಂಕ ನೀಡಬೇಕು, ತೇರ್ಗಡೆ ಕಡ್ಡಾಯ ಮಾಡಿದರೆ
ಮಕ್ಕಳ ಅಕಾಲಿಕ ಸಾವುಗಳನ್ನು ತಪ್ಪಿಸಬಹುದು.
ಸರಕಾರಗಳು ಮಕ್ಕಳ ಸಂಘಟನೆಗಳು ಈ ನಿಟ್ಟಿನಲ್ಲಿ
ಕ್ರಮವಹಿಸಲಿ ಎಂಬುದು ನನ್ನ ಹಕ್ಕೊತ್ತಾಯ.
ಭಾಷಣದ ಆರಂಭದಲ್ಲಿ ನಾನು ಜೈ ವಿದ್ಯಾರ್ಥಿ ಎಂದೆ, ಅದು
ವಯಸ್ಸಿಗೆ ಸಂಬAಧಿಸಿದ್ದಲ್ಲ. ಈ ದೇಶದ ಸಂವಿಧಾನ ಶಿಲ್ಪಿ ಜ್ಞಾನದ ಕಣಜ,
ಡಾ|| ಬಿ.ಆರ್. ಅಂಬೇಡ್ಕರ ಅವರು ತಮ್ಮ ಕೊನೆ ಘಳಿಗೆಯವರೆಗೂ
ಅದೆಷ್ಟು ಓದುತ್ತಿದ್ದರು ಎಂಬುದನ್ನು ಪ್ರತಿಯೊಬ್ಬರೂ
ಅರಿತುಕೊಳ್ಳಬೇಕು. ಜ್ಞಾನ ಸಂಪಾದನೆ ಮನುಷ್ಯನಿಗೆ ಸಂಸ್ಕಾರ
ನೀಡುತ್ತದೆ. ನಾವೆಲ್ಲರೂ ಸದಾ ವಿದ್ಯಾರ್ಥಿಯಾಗೋಣ
ಸಂಸ್ಕಾರವAತರಾಗೋಣ. ಕೊನೆಯದಾಗಿ ಬಹುಮುಖ್ಯವಾದ ೩
ವಿಷಯಗಳನ್ನು ಗಮನಿಸಲೇಬೇಕು. ದೇಶದ ಹಿತಕ್ಕಾಗಿ
ಪಾಲಿಸಬೇಕು.
ಮೊದಲನೆಯದು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ
ಮೂಡಿಸಬೇಕು. ಅವುಗಳ ರಕ್ಷಣೆಗೆ ಸರ್ಕಾರ ಮತ್ತು
ಸಂಘಟನೆಗಳು ಮನಸಾರೆ ಪ್ರಯತ್ನಿಸಬೇಕು. ಮಕ್ಕಳ
ಮೇಲಿನ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು ಅವರ ಬಾಲ್ಯವನ್ನು
ಮತ್ತು ಬದುಕನ್ನು ಗೌರವಿಸಬೇಕು. ಕೇವಲ ಕಾನೂನಿನಿಂದ
ಆಗದು ನಾವು ಬದಲಾಗಬೇಕು. ಬಾಲ ಕಾರ್ಮಿಕ ಪದ್ದತಿ ಮತ್ತು
ಬಾಲ್ಯ ವಿವಾಹಗಳನ್ನು ಪ್ರತಿಯೊಬ್ಬರು ಧಿಕ್ಕರಿಸಬೇಕು. ಶ್ರೀಮಂತ
ಬಡವ ಎನ್ನದೆ ಎಲ್ಲ ಮಕ್ಕಳಿಗೆ ಸಕಲ ಮೂಲಭೂತ ಸೌಕರ್ಯ
ದೊರೆಯಬೇಕು. ಅದಕ್ಕಾಗಿ ನಾವು ನೀವು ಸೇರಿ ಶ್ರಮಿಸೋಣ ಎಂದು
ಕರೆ ನೀಡಿದರು  ಕಾರ್ಯಕ್ರಮವನ್ನು ಡ್ರಾಮಾ ಜೂನಿಯರ್ ಖ್ಯಾತಿಯ
ಮಂಜುನಾಥ ಹುಚ್ಚನೂರ ಮತ್ತು ನ್ಯಾಯಾಲಯದ ಮೂಲಕ
ರಾಜ್ಯದ ಮಕ್ಕಳಿಗೆ ಸಮವಸ್ತç ಕೊಡಿಸಿದ ಮಂಜುನಾಥ ದೇವಪ್ಪ
ಕಿನ್ನಾಳ ಜಂಟಿಯಾಗಿ ಉದ್ಘಾಟಿಸಿದರು. ಸರ್ವಾಧ್ಯಕ್ಷರ ಭಾಷಣದ
ಪ್ರತಿಯನ್ನು ಬಿಡುಗಡೆಗೊಳಸಿದರು.
ಹಿರಿಯ ಉಪನ್ಯಾಸಕ ಸಾಹಿತಿ ಡಾ. ಪಕೀರಪ್ಪ ವಜ್ರಬಂಡಿ, ಚುಟುಕು
ಸಾಹಿತ್ಯ ಪರಿಷತ್ ಅಧ್ಯಕ್ಷ, ಸಾಹಿತಿ ಹನುಮಂತಪ್ಪ ಅಂಡಗಿ, ಉತ್ಸವದ
ರುವಾರಿ ಮಹೇಶ್ ಬಾಬು ಸುರ್ವೆ, ಸಾಹಿತಿಗಳಾದ ಜಿ.ಎಸ್. ಗೋನಾಳ್, ಶ್ರೀನಿವಾಸ್
ಚಿತ್ರಗಾರ, ಮಂಜುನಾಥ ಜಿ. ಗೊಂಡಬಾಳ, ಶಿಕ್ಷಕ ಉಮೇಶ್ ಬಾಬು
ಸುರ್ವೆ, ಸಂಘಟಕರಾದ ಶರಣಯ್ಯ ಇಟಗಿ, ಶಿವಕುಮಾರ ಹಿರೇಮಠ,
ಮಲಿಕ್‌ಸಾಬ್ ನೂರ್‌ಭಾಷಾ, ಉಮೇಶ್ ಪೂಜಾರ್, ಮಹಿಬೂಬ್ ಖಾನ್, ರಾಮು
ಪೂಜಾರ, ಪಾಂಡು ಶಿಳ್ಳಿಕ್ಯಾತರ, ಗೌರಮ್ಮ ನೀಲಮ್ಮನವರ, ಜ್ಯೋತಿ
ಎಂ. ಗೊಂಡಬಾಳ, ನೃತ್ಯ ಪಟು ಸಲ್ಮಾನ್ ಖಾನ್, ಬಾಲ ಕಲಾವಿದರಾದ
ನೇಸರ ಕಂಪ್ಲಿ, ಗೌತಮಿ ದೂಪದ್, ಅಪೂರ್ವ ಕಂಪ್ಲಿ, ಅಕ್ಷರ
ಗೊಂಡಬಾಳ ಮುಂತಾದವರು ಉಪಸ್ಥಿತರಿದ್ದರು. ರಾಷ್ಟಿçÃಯ
ಮಕ್ಕಳ ಪ್ರತಿಬಾ ಕೇಂದ್ರ ಕೊಪ್ಪಳ ಮತ್ತು ಕೊಪ್ಪಳ ಜಿಲ್ಲಾ
ನಾಗರಿಕರ ವೇದಿಕೆಯು ಜಂಟಿಯಾಗಿ ಸಮ್ಮೇಳನ ಆಯೋಜಿಸಿದ್ದವು.
ಸಮ್ಮೇಳನದ ನಿಮಿತ್ಯ ವಿಭಿನ್ನವಾದ ಅನೇಕ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಿದವು.


Leave a Reply