bagalkotBallaryBelagavibidarGadaggulburgakarwar uttar kannadaKoppalStatevijayapur

ಶರಾವತಿ ಬಡಿಗೇರಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಮಾಧ್ಯಮ ಪ್ರಶಸ್ತಿ


 

ಬೆಳಗಾವಿಯ ಜಿ.ಎ.ಪದವಿ ಪೂರ್ವ
ಸಂಯುಕ್ತ ಮಹಾವಿದ್ಯಾಲಯದ ವಿದ್ಯಾರ್ಥಿನಿ, ಅಷ್ಟೆ ಗ್ರಾಮದ
ಕು.ಶರಾವತಿ ದುಂಡಪ್ಪ ಬಡಿಗೇರ
ಇವಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಕನ್ನಡ ಮಾಧ್ಯಮ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಕಳೆದ ವರ್ಷ ನಡೆದ ದ್ವಿತೀಯ
ಪಿ.ಯು.ಪರೀಕ್ಷೆಯಲ್ಲಿ ಶರಾವತಿಯು
ಕನ್ನಡ ಮಾಧ್ಯಮದಲ್ಲಿಯೇ ಬರೆದು
ಪ್ರತಿಶತ 95 ರಷ್ಟು ಅಂಕ ಗಳಿಸಿದ್ದಾಳೆ.ಬೆಳಗಾವಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಈಕೆ ಅಪ್ಪಟ
ಗ್ರಾಮೀಣ ಪ್ರತಿಭೆಯಾಗಿದ್ದಾಳೆ.
ಈಕೆಯ ಸಾಧನೆಗಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಹಾರ್ಧಿಕವಾಗಿ ಅಭಿನಂದಿಸಿದೆ.


Leave a Reply