Koppal

ಹಿರೇಬಗನಾಳ ಗ್ರಾ.ಪಂ.ಗೆ ಅವಿರೋಧ ಆಯ್ಕೆ : ಅಧ್ಯಕ್ಷರಾಗಿ ಲಕ್ಷ್ಮೀ ಎಂ.ಪೂಜಾರ – ಉಪಾಧ್ಯಕ್ಷರಾಗಿ ಧರ್ಮರಾಜ ಹೆಚ್.ದೇವರಮನಿ ಆಯ್ಕೆ


ಕೊಪ್ಪಳ : ತಾಲೂಕಿನ ಹಿರೇಬಗನಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಲಕ್ಷ್ಮೀ ಮಾರುತಿ ಪೂಜಾರ ಹಾಗೂ ಉಪಾಧ್ಯಕ್ಷರಾಗಿ ಧರ್ಮರಾಜ ಹೇಮಣ್ಣ ದೇವರಮನಿ ಅವರು ಅವಿರೋಧ ಆಯ್ಕೆಯಾದರು.
24 ಮಂದಿ ಸದಸ್ಯ ಬಲದ ಗ್ರಾ.ಪಂ.ನಲ್ಲಿ, ಪರಿಶಿಷ್ಟ ಜಾತಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಕ್ಷ್ಮೀ ಮಾರುತಿ ಪೂಜಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಧರ್ಮರಾಜ ಹೇಮಣ್ಣ ದೇವರಮನಿ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು
ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಹಾಗೂ ತಾ.ಪಂ.ಯೋಜನಾಧಿಕಾರಿಯಾಗಿರುವ ಆರ್.ಹೆಚ್.ನದಾಫ್ ತಿಳಿಸಿದ್ದಾರೆ.
ಹಿರೇಬಗನಾಳ, ಚಿಕ್ಕಬಗನಾಳ, ಕರ್ಕಿಹಳ್ಳಿ, ಕಾಸನಕಂಡಿ ಹಾಗೂ ಅಲ್ಲಾನಗರ ಗ್ರಾಮಗಳ ನೂತನ ಜನಪ್ರತಿನಿಧಿಗಳು, ಹಿರಿಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.


Leave a Reply