Gadag

ಪ್ರಪಂಚದ ಅತಿ ದೊಡ್ಡ ಹಾಗೂ ಶ್ರೇಷ್ಠ ಸಂವಿಧಾನ ನಮ್ಮದು : ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಗದಗ ಜ.  : ಪ್ರಪಂಚಗಳಲ್ಲಿರುವ ಸಂವಿಧಾನಗಳಲ್ಲಿ ದೇಶದಲ್ಲಿ ಅಳವಡಿಸಿಕೊಂಡಿರುವ ಸಂವಿಧಾನವು ಅತೀ ಶ್ರೇಷ್ಠ ಹಾಗೂ ದೊಡ್ಡ ಸಂವಿಧಾನವಾಗಿದೆ ಎಂದು ನುಡಿದರು.
ಜಿಲ್ಲಾಡಳಿತ ಭವನದಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 1950 ಜನೇವರಿ 26 ರಂದು ಭಾರತ ರಾಷ್ಟ್ರವು ಲಿಖಿತ ಸಂವಿಧಾನ ಹಾಗೂ ಚುನಾಯಿತ ಸಂಸತನ್ನೊಂದಿಗೆ ಸಾರ್ವಭೌಮ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಭಾರತೀಯ ಪ್ರಜೆಗಳಿಂದಲೇ ರಚಿತವಾದ ಸಂವಿಧಾನವು ಸಾರ್ವಭೌಮ, ಪ್ರಜಾಸತ್ತಾತ್ಮಕ, ಸಮಾಜವಾದಿ, ಜ್ಯಾತೀತ ತತ್ವಗಳನ್ನು ಒಳಗೊಂಡಿದೆ.
ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಲಾಗಿದ್ದು ಈ ಹಕ್ಕುಗಳು ಜನಸಾಮಾನ್ಯರಿಗೆ ದೊರಕಬೇಕು. ಜನಸಾಮಾನ್ಯರಿಗಾಗಿ ನೀಡಿರುವ ಹಕ್ಕುಗಳನ್ನು ದೊರಕಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಆಗ ಮಾತ್ರ ಸಂವಿಧಾನದ ಆಶಯ ಈಡೇರಿಸದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜಗತ್ತಿನಾದ್ಯಂತ ಭಾರತವು ಸೇರಿದಂತೆ 217 ದೇಶಗಳನ್ನು ಕಾಡಿ ಸಾರ್ವಜನಿಕ ಆರೋಘ್ಯ ತುರ್ತು ಪರಿಸ್ಥಿತಿಗೆ ನೂಕಿದ ಕೋವಿಡ್-19 ಸೋಂಕು ಮಹಾಮಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಜಿಲ್ಲೆಯು ಯಶಸ್ವಿಯಾಗಿದೆ. ಸಧ್ಯ ಕೋವಿಡ್ ಸೋಂಕು ನಿಯಂತ್ರಣದಲ್ಲಿದ್ದು ಸಾರ್ವಜನಿಕರು ನಿರಂತರವಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ ಧಾರಣೆ ಸೇರಿದಂತೆ ಶುಚಿತ್ವದೆಡೆಗೆ ಗಮನ ಹರಿಸುವದರೊಂದಿಗೆ ಕೋವಿಡ್-19 ನಿಯಂತ್ರಣಕ್ಕೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್. ಸೇರಿದಂತೆ ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker