Belagavi

ರೈತರಿಗೆ ಶಾಲು ದೀಕ್ಷೆ ನೀಡಿದ ಜಿಲ್ಲಾಧ್ಯಕ್ಷರಾದ ಬಸವರಾಜ ಬಿಜ್ಜೂರ


ಯರಗಟ್ಟಿ: ಸಮೀಪದ ಬೆನಕಟ್ಟಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸವದತ್ತಿ-ಯರಗಟ್ಟಿ ತಾಲೂಕಿನ ರೈತರ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು ಹಾಗೂ ನೂರಾರು ಜನ ಮಹಿಳೆಯರಿಗೆ ಮತ್ತು ಪುರುಷರಿಗೆ ಶಾಲು ದೀಕ್ಷೆ ನೀಡಲಾಯಿತು. ಸಭೆಯ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಸವರಾಜ ಬಿಜ್ಜೂರ ಕೇಂದ್ರ ಸರ್ಕಾರ ಕೃಷಿ ಕಾಯಿದೆ ಕೈ ಬಿಡುವಂತೆ ನೆಡೆಸುತ್ತಿರು ಹೋರಾಟಗಾರರ ಮೇಲೆ ಪೋಲಿಸ್ ಮನ ಬಂದಂತೆ ಹೊಡದ್ದಿರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಕೂಡಲೇ ಕೇಂದ್ರ ಸರ್ಕಾರ ಕೃಷಿ ಕಾಯಿದೆ ಕೈ ಬಿಡಬೇಕು ಇಲ್ಲವಾದರೆ ರೈತರಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀದೇವಿ ನಾಯ್ಕ, ಜಿಲ್ಲಾ ಸಂಚಾಲಕರಾದ ಶಿವಲೀಲಾ ಯಮನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುರೇಖಾ ಮುಕ್ಕಣ್ಣವರ, ಹಿರಿ ರೈತ ಮುಖಂಡರಾದ ಬಾಳಪ್ಪ ತಡಶಿ, ಯರಗಟ್ಟಿ ತಾಲೂಕಾ ಅಧ್ಯಕ್ಷರಾದ ಮಡಿವಾಳಪ್ಪ ಪಾಟೀಲ, ಯರಗಟ್ಟಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರಾದ ಸುರೇಖಾ ವರ್ಣೆಕರ ಇನ್ನುಳಿದವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply