vijayapur

ಜ.೩೦ ರಂದು ವಿಧ್ಯಾರ್ಥಿಗಳ ಸ್ವಾಗತ ಸಮಾರಂಭ


ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮ ಪಾಲನ ನಿರ್ದೇಶನಾಲಯದ ವತಿಯಿಂದ ೨೦೨೦-೨೧ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರುವ ಕಾರ್ಯಕ್ರಮವನ್ನು ಇದೇ ಜ.೩೦ರಂದು ವಿವಿಯ ಕನ್ನಡ ಅಧ್ಯಯನದ ಸಭಾಭವನದಲ್ಲಿ ಮುಂಜಾನೆ ೧೧-೩೦ಕ್ಕೆ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ಡಾ.ವಿ.ಭಾಗ್ಯಲಕ್ಷಿö್ಮ ಜಂಟಿ ನಿರ್ದೇಶಕಿ ರಾಜ್ಯ ಖಜಾನೆ ಇಲಾಖೆ ಕರ್ನಾಟಕ ಸರಕಾರ ಇವರು ಆಗಮಿಸಲಿದ್ದಾರೆ. ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅಧ್ಯಕ್ಷತೆ ವಹಿಸಲಿದ್ದು, ವಿವಿಯ ಕುಲಸಚಿವೆ ಪ್ರೊ. ಆರ್.ಸುನಂದಮ್ಮ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಡಾ. ಸಕ್ಪಾಲ ಹೂವಣ್ಣ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Leave a Reply