Koppal

ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆ ಲೇಬಗೇರಿ ಗ್ರಾ.ಪಂ. ನಲ್ಲಿ ವೈಯಕ್ತಿಕ ಶುಚಿತ್ವ, ಋತುಚಕ್ರ ನಿರ್ವಹಣೆ ಕಾರ್ಯಕ್ರಮ


ಕೊಪ್ಪಳ, ಜ.೨೮ : ಕೊಪ್ಪಳ ಜಿಲ್ಲೆಯ ಲೇಬಗೇರಿ ಗ್ರಾಮ ಪಂಚಾಯತಿಯ ಹನಮನಹಳ್ಳಿ ಗ್ರಾಮದಲ್ಲಿ ಜ.೨೬ರ ರಂದು ಲೇಬಗೇರಿ ಗ್ರಾಮ ಪಂಚಾಯತಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ವೈಯಕ್ತಿಕ ಶುಚಿತ್ವ ಹಾಗೂ ಋತುಚಕ್ರ ನಿರ್ವಹಣೆ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಶರಣಬಸವರಾಜ ಅವರು, ಪ್ರತಿಯೊಬ್ಬ ಮಹಿಳೆಯರಿಗೆ ಎಲ್ಲಾ ರಂಗದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರುವುದರಿಂದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಜೊತೆಗೆ ಗಂಡು-ಹೆಣ್ಣು ಇಬ್ಬರಿಗೂ ಸಮಾನ ಅವಶ್ಯಕತೆಗಳನ್ನು ಒದಗಿಸಬೇಕು. ಭಾರತ ಇಡೀ ವಿಶ್ವದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಾನ ನೀಡಿದ್ದು, ಪ್ರತಿಯೊಂದು ಮನೆಯಲ್ಲಿ ಮಹಿಳೆಗೆ ವಿವಿಧ ರಂಗಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕೆಂದು ಪಾಲಕರಿಗೆ ಕರೆ ನೀಡಿದರು.
ನಂತರ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ ಮಾತನಾಡಿ, ಮಹಿಳೆಯರು ವೈಯಕ್ತಿಕ ಶುಚಿತ್ವಕ್ಕೆ ಋತುಚಕ್ರ ಸಂದರ್ಭದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಶೌಚಕ್ಕೆ ಹೊರಗಡೆ ಹೋಗುವುದರಿಂದ ಅನೇಕ ರೋಗಗಳು ಹರಡುವ ಸಾಧ್ಯತೆ ಶೇ.೮೦ ರಷ್ಟು ಇರುತ್ತದೆ. ಹೊರಗಡೆ ಹೋಗಿ ಬಂದ ನಂತರ ನಾವುಗಳು ಕೈ-ಕಾಲು ಸರಿಯಾಗಿ ತೊಳೆಯದೇ ಇರುವುದರಿಂದ ಅನೇಕ ಕೀಟಾಣುಗಳು ನಮ್ಮ ದೇಹದ ಒಳಭಾಗಕ್ಕೆ ಹೋಗಿ ಅಲ್ಲಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿಯೊಂದು ಕುಟುಂಬ ವೈಯಕ್ತಿಕ ಶೌಚಾಲಯ ಹೊಂದಿದ್ದು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದರಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶಾರದಾ ಪಾನಗಂಟಿ ಮಾತನಾಡಿ, ಇಂದು ಹನಮನಹಳ್ಳಿ ಮಾದರಿ ಗ್ರಾಮವನ್ನಾಗಿ ಮಾಡಲು ನಮ್ಮ ಕ್ಲಬ್ ವತಿಯಿಂದ ದತ್ತು ಪಡೆಯಲಾಗಿದೆ. ಗ್ರಾಮವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಮಹಿಳೆಯರಿಗೆ ದೊರೆಯುವ ಸೌಲಭ್ಯಗಳನ್ನು ವಿವಿಧ ಇಲಾಖೆಗಳಿಂದ ದೊರೆಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕರು(ಗ್ರಾ.ಉ) ಕೆ.ಸೌಮ್ಯ, ತಾಲೂಕು ಯೋಜನಾಧಿಕಾರಿ ಆರ್.ಎಚ್.ನದಾಫ್, ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ಪಿಂಕ್ ಪ್ಯಾಡ್ ಮಹಿಳೆ ಭಾರತಿ ಗುಡ್ಲಾನೂರು, ಜಿಲ್ಲಾ ಪಂಚಾಯತ ವ್ಯವಸ್ಥಾಪಕ ಶರಣಯ್ಯ ಸಸಿಮಠ, ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಂಜೀವನ ಒಕ್ಕೂಟದ ಮಹಿಳೆಯರು ಮತ್ತು ಎಸ್‌ಬಿಎಂ, ಎಂ.ಜಿ ನರೇಗಾ ಯೋಜನೆಯ ಸಂಯೋಜಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು. ಪಿಡಿಒ ಸಂಗಮೇಶ ತೇರಿನ ಸ್ವಾಗತಿಸಿದರು. ಗ್ರಾಮ ಪಂಚಾಯತ ಕಾರ್ಯದರ್ಶಿ ಪೂರ್ಣೇಂದ್ರಯ್ಯಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು.


Leave a Reply