Belagavi

ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ


ಬೆಳಗಾವಿ-೨೮: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎನ್ನುವುದು ಸರಳವಾದ ಸಹಜವಾದ ಸಂಗತಿ. ಈ ಹಿನ್ನಲೆಯಲ್ಲ ಕರ್ನಾಟಕ ಸರ್ಕಾರವು ನವೆಂಬರ್ ೧, ೨೦೨೦ ರಿಂದ ಅಕ್ಟೋಬರ್ ೩೧ ೨೦೨೧ ರ ವರೆಗಿನ ಅವಧಿಯನ್ನು ‘ಕನ್ನಡ ಕಾಯಕ ವರ್ಷ’ ಎಂದು ಕರೆದದ್ದು ಅದರ ಅನುಷ್ಠಾನ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಹಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕನ್ನಡ ಜಾಗೃತಿ ಮತ್ತು ಮಹಾನಗರ ಕನ್ನಡ ಜಾಗೃತ ಸಮಿತಿಗಳನ್ನು ರಚಿಸಲಾಗಿದೆ. ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆದೇಶದಂತೆ ಈ ಸಮಿತಿಗಳ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಇದೇ ದಿ. ೨೬ ಮಂಗಳವಾರದಿAದ ಮೂರು ದಿನಗಳ ಕಾಲ ಕೇಂದ್ರ, ರಾಜ್ಯ ಸರ್ಕಾರ ಕಚೇರಿ, ಸಂಘ ಸಂಸ್ಥಗಳು ಅಲ್ಲದೇ ಅಂಗಡಿ ಮುಗ್ಗಟ್ಟುಗಳ ಮುಂಬಾಗದಲ್ಲಿ ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದರು.
ಇದೇ ದಿ. ೨೬ ಮಂಗಳವಾರದAದು ಮುಂಜಾನೆ ೧೦-೩೦ ಗಂಟೆಗೆ ಟಿಳಕವಾಡಿಯ ಆರ್.ಪಿ.ಡಿ. ರಸ್ತೆಯ ಅಂಗಡಿಗಳ ಸಂಭಾಜಿ ಚೌಕ, ರಾಮದೇವ ಹೊಟೇಲ ಮುಂದೆ ಕನ್ನಡ ಜಾಗೃತಿ ಅಭಿಯಾನ ಅಂಗವಾಗಿ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು. . ದಿ. ೨೭ ಬುಧವಾರದಂದು ಕ್ಲಬ್‌ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರಿ ಕಚೇರಿಗಳಲ್ಲಿ, ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಉಳಿದ ಕಚೇರಿ ಎದುರು ಹಾಗೂ ಟಿಳಕವಾಡಿ ಸಮೀಪ ಕೇಂದ್ರ ಸರ್ಕಾರ ಕಚೇರಿಗಳ ಕೇಂದ್ರೀಯ ವಿದ್ಯಾಲಯಗಳಿಗೆ ಭೇಟಿಕೊಟ್ಟರು. ಚೆನ್ನಮ್ಮ ವೃತ್ತದಲಿ ಅಭಿಯಾನದ ಭಿತ್ತಿ ಪತ್ರಗಳ ಪ್ರದರ್ಶನ ಮಾಡಿದರು. ನಂತರ ರಾಜ್ಯ ಸರ್ಕಾರದ ಕಚೇರಿಗಳಿಗೆ ಭೇಟಿ ಮಾಡಿ ನಾಮಫಲಕಗಳನ್ನು ವೀಕ್ಷಿಸಿದರು. ಶಿಕ್ಷಣ ಸಂಸ್ಥೆಗಳಾದ ಶೇಖ ಮತ್ತು ಮರಾಠಾ ಮಂಡಳ ಸಂಸ್ಥೆಗಳನ್ನು ಭೇಟಿ ಮಾಡಿ ಅವರ ಎಲ್ಲ ನಾಮ ಫಲಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಿಸಲು ಹಕ್ಕೊತ್ತಾಯ ಪತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಮತ್ತು ಮಹಾನಗರ ಕನ್ನಡ ಜಾಗೃತ ಸಮಿತಿಗಳ ಸದಸ್ಯರಾದ ಡಾ. ಎ. ಎಲ್. ಕುಲಕರ್ಣಿ, ದೀಪಿಕಾ ಚಾಟೆ,. ಜ್ಯೋತಿ ಬದಾಮಿ, ಶ್ರೀ ರಂಗ ಜೋಶಿ, ಆರ್. ಬಿ. ಕಟ್ಟಿ, ಸುನಂದ ಎಮ್ಮಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Leave a Reply