vijayapur

ಎಂ.ಸಿ.ಮನಗೂಳಿ ನಿಧನ ಶ್ರದ್ದಾಂಜಲಿ ಸಭೆ


ವಿಜಯಪುರ : ಪಂಚಮಸಾಲಿ ಸಮಾಜದ ಹಿರಿಯರು ಹಾಗೂ ಮರೆಯಲಾರದ ಮಾಣಿಕ್ಯರಾದ ದಿ: ಎಂ.ಸಿ.ಮನಗೂಳಿಯವರನ್ನು ಕಳೆದುಕೊಂಡು ನಮ್ಮ ಸಮಾಜಕ್ಕೆ ಹಾಗೂ ಸಿಂದಗಿ ಮತಕ್ಷೇತ್ರದ ಜನತಗೆ ಮತ್ತು ಕುಟುಂಬಕ್ಕೆ ತುಂಬಲಾರದೆ ನಷ್ಷೆ ಆಗಿದೆ. ಎಂದು ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಭೀಮನಗೌಡ ಎಸ್ ಬಿರಾದಾರ (ನಾಗರಾಳ ಹುಲಿ) ಹೇಳಿದರು.
ಅವರು ಇಂದು ನಗರದ ಖೇಡ ಕಾಲೇಜ್ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಹೂಪುಷ್ಪಾರ್ಚಾರಣೆ ಮಾಡಿ ಭಾವಪೂರ್ಣ ಶ್ರಧ್ದಾಂಜಲಿಯನ್ನ ಸಭೆಯನ್ನು ಉದ್ದೇಶಿಸಿ ಮಾತನಾಡುತಾ ಪಂಚಮಸಾಲಿ ಸಮಾಜದ ಅತ್ಯಂತ ಹಿರಿಯ ಜೀವಿಯಾಗಿದ ದಿ: ಎಂ.ಸಿ.ಮನಗೂಳಿಯವರು ನಿದನದಿಂದ ಸಮಾಜಕ್ಕೆ ಒಬ್ಬ ಮಾಣಿಕ್ಯನನ್ನು ಕಳೆದುಕೊಂಡು ಸಮಾಜ ಬಡವಾಗಿದೆ. ಎಂದರು ಎಂ.ಸಿ.ಮಗೂಳಿಯವರು ತಮ್ಮ ಜೀವನನ್ನು ಗ್ರಾಮಸೇವಕದ ಮುಖಾಂತರ ಪ್ರಾರಂಬವಾಗಿ ಸಿಂದಗಿ ಮತಕ್ಷೇತ್ರದ ಎರಡು ಭಾರಿ ಶಾಕಸರರಾಗಿ ಎರಡು ಭಾರಿ ಸಚಿವರು ಆಗಿದ್ದು ಜಿಲ್ಲೆಯ ವಿಶೇಷ ಶಾಸಕರಾಗಿ ಜನಮನ್ನಣೆಯ ಪಾತ್ರರಾಗಿದ್ದು. ಜಿಲ್ಲೆಯ ಅತ್ಯಂತ ಹಿರಿಯ ರಾಜಕಾರಣರಾಗಿ ಎಲ್ಲರ ಮನಸ್ಸಿನಲ್ಲಿ ಕಾಕಾ,ಮಾಮಾ ಹಾಗೂ ಮನಗೂಳಿ ಮುತ್ಯ ಎಂದೇ ಪ್ರಸಿದ್ದ ಪಡೆದ ವ್ಯಕ್ತಿ ಆಗಿದ್ದು. ಜಿಲ್ಲೆಯಲ್ಲಿ ಒಬ್ಬ ಹಿರಿಯ ರಾಜಕಾರಣಯನ್ನು ಕಳೆದುಕೊಂಡತಾಗಿದೆ. ಎಂದರು
ಜಿಲ್ಲಾ ಯುವ ಘಕಟದ ವಿನೋದ ಎಂ ಖೇಡರವರು ಮಾತನಾಡುತಾ ವಿಕಲಚೇತನರ ಬಗ್ಗೆ ಸಾಕಷ್ಟು ವೈಕ್ತಿಕವಾಗಿ ಕಾಳಿಜಿವಹಿಸಿದರು ನಮ್ಮ ಸಂಸ್ಥೆಯ ಹಿತೈಸಯರಾಗಿದರು ಎಂದು ಹೇಳಿದರು.
ವಿಜಯಪುರ ಜಿಲ್ಲಾ ಪಂಚಮಸಾಲಿ ಸಮಾಜ ಪದಾಧಿಕಾರಿಗಳಾದ ಎಸ್ ಬಿ ಬಿರಾದಾರ (ಬಾಬಾನಗರ) ಸಾಹೇಬಗೌಡ ಬಸರಕೊಡ , ಹರಿರ್ಷ ಬರಟಗಿ, ಸಂತೋಷ ಜಾಲಿಹಾಳ, ಶಿವಾನಂದ ಪಾಟೀಲ, ಆನಂದ ಜಂಬಗಿ ಹಾಗೂ ಬಿಜಾಪೂರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ವಿವಿಧ ಶಾಲಾ/ಕಾಲೇಜ್‌ಗಳು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ವ್ಹಿ ಎನ್ ಪಾಟೀಲ್, ಸಿದ್ದುನಗೌಡ ಬಿರಾದಾರ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳಾದ ಎಂ.ಬಿ ಉಮರಾಣಿ, ಅಂಬಣ್ಣ ಗುನ್ನಾಪೂರ, ಶೆಂಕೆಮ್ಮ ಕೋರಿ ಇನ್ನಿತರ ಇದ್ದರು.


Leave a Reply