vijayapur

ರಾಜ್ಯ ಸರ್ಕಾರಿ ವಿಕಲಚೇತನ ನೌಕರರ ಕ್ರೀಡಾಕೂಟ


ವಿಜಯಪುರ:ಜ.೨೮ : ೨೦೨೦ -೨೧ ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ವಿಕಲಚೇತನ ನೌಕರರ ಕ್ರೀಡಾಕೂಟವು ದಿನಾಂಕ ೨೯-೦೧- ೨೦೨೦ ರಂದು ವಿಜಯಪುರ ನಗರ ಜಿಲ್ಲಾ ಪಂಚಾಯತ್ ಕಚೇರಿ ಹತ್ತಿರದ ಜಿಲ್ಲಾ ಆಡಳಿತ ಭವನದ ಮೈದಾನದಲ್ಲಿ ಹಾಗೂ ೩೦-೦೧-೨೦೨೧ ರಂದು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜಿಲ್ಲಾ ಕ್ರೀಡಾಂಗಣದ ಸಭಾಭವನದಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಾಪುರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರುಷ ಮತ್ತು ಮಹಿಳೆಯರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ಗೀತೆ, ಭಾವಗೀತೆ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ (ತಬಲ, ಹಾರ್ಮೋನಿಯಂ) ಏಕಪಾತ್ರಾಭಿನಯ ನಾಟಕ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ೨೯-೧-೨೦೨೦ ರಂದು ಬೆಳಿಗ್ಗೆ ೯:೦೦ ತಮ್ಮ ಹೆಸರನ್ನು ನೋಂದಾಯಿಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಿರಬೇಕು. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ವಿಶೇಷ ಸಾಂದರ್ಭಿಕ ರಜೆ ಪಡೆಯಲು ಅರ್ಹರಾಗಿರುತ್ತಾರೆ.
ನೌಕರರು ಅವರ ಕೇಂದ್ರ ಸ್ಥಾನದಿಂದ ಆಯ್ಕೆ ನಡೆಯುವ ಸ್ಥಳಕ್ಕೆ ಹೋಗಿ ಬರುವ ಪ್ರಯಾಣಕ್ಕೆ ಎರಡನೆ ದರ್ಜೆ ರೈಲಿನ ಅಥವಾ ಎಕ್ಸಪ್ರೆಸ್ ಬಸ್ ದರವನ್ನು ಪ್ರಯಾಣ ಭತ್ಯೆಯಾಗಿ ಅವರ ಮಾತೃ ಇಲಾಖೆಯಿಂದ ನಿಯಮಾವಳಿಗಳನ್ವಯ ಪಡೆಯುವುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :೦೮೩೫೨-೨೫೧೦೮೫, ೯೪೮೦೮೮೬೫೫೫ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply